ಮೈಸೂರು, (ಮಾರ್ಚ್ 29): ಉತ್ತರ ಪ್ರದೇಶದಲ್ಲಿ ಬಿಜೆಪಿ(ಭಝಫ) ವಾತಾವರಣ ತುಂಬಾ ಚೆನ್ನಾಗಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ರೀತಿ ಇರಬೇಕು. ನಮ್ಮಲ್ಲಿ ಆ ರೀತಿ ಸಿಎಂ ಯಾರೂ ಬಂದಿಲ್ಲ. ಸಿಎಂ ಯೋಗಿ ಆಡಳಿತವನ್ನು ಬಿಗಿಯಾಗಿ ಇಟ್ಟುಕೊಂಡಿದ್ದಾರೆ. ಉತ್ತರ ಭಾರತ ಭಾಗದಲ್ಲಿ ಬಿಜೆಪಿಗೆ ಗ್ಯಾರಂಟಿ ಹೇಳಬಹುದು, ಆದ್ರೆ, ಇಲ್ಲಿ (ಕರ್ನಾಟಕ) ಸ್ವಲ್ಪ ಆ ಕಡೆ ಈ ಕಡೆ ಅನ್ನಿಸುತ್ತಿದೆ. ಕಾಂಗ್ರೆಸ್ ನವರು ಗ್ಯಾರೆಂಟಿ ಸ್ಕೀಂ ಇಟ್ಟುಕೊಂಡು ಅಬ್ಬರಿಸುತ್ತಿದ್ದಾರೆ. ಪರಿಸ್ಥಿತಿ ಈಗಿದ್ದರೂ ಸಹ ಬಿಜೆಪಿ ಕಳೆಪೆ ಪ್ರದರ್ಶನ ಮಾಡುವುದಿಲ್ಲ. ಅರ್ಧಕ್ಕಿಂತ ಹೆಚ್ಚಿನ ಸ್ಥಾನಗಳನ್ನ ಇಲ್ಲಿ(ಕರ್ನಾಟಕ) ಬಿಜೆಪಿ ಪಡೆಯುತ್ತದೆ ಎಂದು ಹಿರಿಯ ಸಾಹಿತಿ ಎಸ್ಎಲ್ ಬೈರಪ್ಪ(novelist SL Bhyrappa )ಭವಿಷ್ಯ ನುಡಿದಿದ್ದಾರೆ.
ಮೈಸೂರಿನಲ್ಲಿ ಇಂದು (ಮಾರ್ಚ್ 29) ಸುದ್ದಿಗಾರರೊಂದಿಗೆ ಮಾತನಾಡಿದ ಬೈರಪ್ಪ, ಹಿಂದೆ ಇದ್ದ ಬಿಜೆಪಿ ಸರ್ಕಾರ ಅಧಿಕಾರಗಳ ಬಗ್ಗೆ ಸಾಫ್ಟ್ ಇತ್ತು. ಆಗ ಆಧಿಕಾರಿಗಳ ದರ್ಬಾರ್ ನಡೆಯುತ್ತಿತ್ತು. ಈಗಿನ ಕಾಂಗ್ರೆಸ್ ನವರು ಭಾರಿ ಜೋರ್ ಇದ್ದಾರೆ. ಆದರೆ ಅವರ ನಡೆ ನುಡಿಗಳು ಸರಿಯಿಲ್ಲ. ಅವರ ದರ್ಪದ ಮಾತುಗಳು ಜಾಸ್ತಿಯಾಗಿದೆ. ಸೌಜನ್ಯದ ನಡವಳಿಕೆಯೇ ಇಲ್ಲ. ಅಧಿಕಾರಿದಲ್ಲಿ ಇರುವವರು ದರ್ಪದಿಂದ ಮಾತನಾಡಬಾರದು. ಕಾಂಗ್ರೆಸ್ ನಲ್ಲಿ ಬರೀ ದರ್ಪದ ಮಾತುಗಳೇ ಇದೇ ಇದು ಒಳ್ಳೆಯದಲ್ಲ ಎಂದು ಸಿದ್ದರಾಮಯ್ಯ ಸರ್ಕಾರಕ್ಕೆ ಕಿವಿ ಮಾತು ಹೇಳಿದರು.
ಇದನ್ನೂ ಓದಿ: ಎಸ್ಎಂ ಕೃಷ್ಣ ಭೇಟಿಯಾದ ಡಿಕೆ ಸುರೇಶ್; ಕುತೂಹಲ ಮೂಡಿಸಿದ ಬಿಜೆಪಿ-ಕಾಂಗ್ರೆಸ್ ನಾಯಕರ ಭೇಟಿ
ಇನ್ನು ಇದೇ ವೇಳೆ ಸಂಸದ ಪ್ರತಾಪ್ ಸಿಂಹ ಅವರಿಗೆ ಮೈಸೂರು ಬಿಜೆಪಿ ಟಿಕೆಟ್ ಕೈತಪ್ಪಿರುವ ಬಗ್ಗೆ ಪ್ರತಿಕ್ರಿಯಿಸಿರುವ ಬೈರಪ್ಪ, ನಮ್ಮ ಪ್ರತಾಪ್ ಸಿಂಹ ಡೈನಾಮಿಕ್ ಮ್ಯಾನ್. ಅವರು ತುಂಬಾ ಕೆಲಸ ಮಾಡಿದ್ದಾರೆ. ಕೊಡಗಿನಲ್ಲಿ ಟಿಪ್ಪು ಜಯಂತಿಗೆ ಬ್ರೇಕ್ ಹಾಕಿದ್ದಾರೆ. ಅವರ ಬಳಿ ಫೈಟಿಂಗ್ ಸ್ಪಿರೀಟ್ ಇದೆ. ಇವತ್ತು ಕೂಡ ಫೈಟಿಂಗ್ ಸ್ಪಿರೀಟ್‌ನಲ್ಲಿ ಇದ್ದಾರೆ. ಟಿಕೆಟ್ ಮಿಸ್ ಆದ್ರೆ ಏನಾಗುತ್ತೆ. ಸಂಸದನಾದ್ರೆ ಅಲ್ಲೇ ಕೇಂದ್ರೀಕೃತವಾಗಿರ್ತಾರೆ. ಅದನ್ನ ಬಿಟ್ಟು ಮಾಡುವುದಕ್ಕೆ ಬಹಳ ಕೆಲಸ ಇದೆ. ಅದೇ ಉತ್ಸಾಹದಲ್ಲಿ ಪ್ರತಾಪ್ ಸಿಂಹ ಇದ್ದಾರೆ. ಯದುವೀರ್ ಗೆ ಟಿಕೆಟ್ ಕೊಟ್ಟಿರೋದಕ್ಕೆ ಒಂದಕ್ಕೊಂದು ವಿರೋಧ ಇಲ್ಲ. ಯದುವೀರ್‌ಗೆ ಟಿಕೆಟ್ ಕೊಟ್ಟಿದ್ದು ಒಳ್ಳೆಯದೇ ಆಯ್ತು. ಯದುವೀರ್ ಹಿನ್ನೆಲೆ ನೋಡಿದಾಗ ಇವರಿಗೆ ಸ್ಥಾನಮಾನ ಕೊಟ್ಟರೆ ಉತ್ತಮವಾಗಿ ನಿಭಾಯಿಸುತ್ತಾರೆ ಅನ್ಸುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗುಜರಾತಿನವರು ಆಕ್ಟಿವ್ ಹಾಗೂ ಆನೆಸ್ಟ್ ಆಗಿ ಕೆಲಸ ಮಾಡುತ್ತಾರೆ. ನಮ್ಮಲ್ಲಿ (ಕರ್ನಾಟಕ) ಅಂಗಡಿ ವ್ಯಾಪಾರಿಗಳು ಅಂದ್ರೆ ಪೂರ್ಣ ಪ್ರಾಮಾಣಿಕರು ಎಂದು ಹೇಳೊಕೆ ಆಗಲ್ಲ. ಆದರೆ, ಗುಜರಾತ್‌ನಲ್ಲಿ 6 ವರ್ಷದ ಮಗು ಕೈಯಲ್ಲಿ ಹಣ ಕೊಟ್ಟು ಕಳುಹಿಸಿದ್ರೂ ವ್ಯಾಪಾರಸ್ಥರು ಪ್ರಾಮಾಣಿಕವಾಗಿ ಚಿಲ್ಲರೆ ಕೊಟ್ಟು ಕಳುಹಿಸುತ್ತಾರೆ. ಹಾಗೇ ಗುಜರಾತಿಗಳು ಸುಳ್ಳು ಹೇಳಲ್ಲ ಎಂದು ಹಿರಿಯ ಸಾಹಿತಿ ಎಸ್ಎಲ್ ಬೈರಪ್ಪ ಗುಜರಾತಿಗಳನ್ನು ಕೊಂಡಾಡಿದ್ದಾರೆ.
ಅವರು ವ್ಯಾಪಾರಿಯಾಗಿ ಪ್ರಮಾಣಿಕರಾಗಿದ್ದಾರೆ. ವ್ಯಾಪರ ಕೇವಲ ಹಣಕ್ಕಾಗಿ ಅಲ್ಲ, ದೇಶಕ್ಕಾಗಿ ಮಾಡುತ್ತಾರೆ. ಅದಿಲ್ಲ ಅಂದ್ರೆ ಯಾವ ದೇಶ ಉದ್ದಾರ ಆಗೋಕೆ ಸಾಧ್ಯ ಹೇಳಿ. ಮೋದಿ ಅವರಿಗೂ ಅದೇ ಇದೆ. ಅವರು ವ್ಯಾಪಾರ ಬಿಟ್ಟು ಬರುವಾಗ ಅಲ್ಲಿದ್ದ ಬಡ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ತಮ್ಮ ಬಳಿ ಇದ್ದ 23 ಲಕ್ಷ ಕೊಟ್ಟು ಬಂದರು. ಅದೊಂದು ಮಾದರಿ ಆಯ್ತು. ಕೇಂದ್ರ ಸರ್ಕಾರದಲ್ಲಿ ಅದನ್ನ ಅಳವಡಿಸಿಕೊಂಡರು. ಇದನ್ನೆಲ್ಲ ಕ್ಯಾಪ್ಟಲಿಸ್ಟ್ ಅನ್ನೋಕಾಗುತ್ತಾ. ಕಾರು ವ್ಯಾಪಾರದಿಂದ ಹಣ ಬಂದು ಅಂದುಕೊಳ್ಳೋದು ಆರ್ಥಿಕತೆ ಅಲ್ಲ. ಅದರಿಂದ ಎಷ್ಟು ಕುಟುಂಬಕ್ಕೆ ನೆರವಾಯಿತು ಎನ್ನುವುದು ನಿಜವಾದ ಆರ್ಥಿಕತೆ. ಮತ್ತೊಮ್ಮೆ ಮೋದಿ ಪ್ರಧಾನಿ ಆಗುತ್ತಾರೆ. ಅದರಲ್ಲಿ ಯಾವುದೇ ಅನುಮಾನ ಇಲ್ಲ. ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ