ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಮದುವೆ ಮಾಡಿಸಿದ ಪಿಡಿಓ; ಕುಂದುಕೊರತೆ ಬಗೆಹರಿಸಲು ಕರೆದಿದ್ದ ಸಭೆಯಲ್ಲೇ ವಿವಾಹ

ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಮದುವೆ ಮಾಡಿಸಿದ ಪಿಡಿಓ; ಕುಂದುಕೊರತೆ ಬಗೆಹರಿಸಲು ಕರೆದಿದ್ದ ಸಭೆಯಲ್ಲೇ ವಿವಾಹ
ಪಿಡಿಓ ಪ್ರೇಮಿಗಳಿಗೆ ಮದುವೆ ಮಾಡಿಸಿದ್ದಾರೆ

ಇಂದು ಹರದನಹಳ್ಳಿ ಗ್ರಾಮ ಪಂಚಾಯತಿ  ವಾರ್ಡ್ ಸಭೆ ನಡೆಯುತ್ತಿದ್ದ ವೇಳೆ ಕಚೇರಿ ಪಕ್ಕದ ಮನೆಯಲ್ಲಿ ಗಲಾಟೆ ನಡೆಯುತ್ತಿತ್ತು. ಇದನ್ನು ಮನಗಂಡ ಪಿಡಿಒ ಮಹದೇವಸ್ವಾಮಿ ಅಲ್ಲಿಗೆ ತೆರಳಿದ್ದಾರೆ. ಪರಸ್ಪರ ಪ್ರೀತಿಸುತ್ತಿದ್ದ ಬಸವರಾಜು, ಸುಚಿತ್ರಾ ಮದುವೆಗೆ ಪೋಷಕರ ವಿರೋಧವಿದ್ದ ಹಿನ್ನೆಲೆ ಪಿಡಿಓ ಇಬ್ಬರ ಪೋಷಕರ ಮನವೊಲಿಸಿ ಮದುವೆ ಮಾಡಿಸಿದ್ದಾರೆ.

TV9kannada Web Team

| Edited By: preethi shettigar

Jan 24, 2022 | 5:57 PM

ಮೈಸೂರು: ಗ್ರಾಮ ಪಂಚಾಯಿತಿ(Gram panchayat) ಕಚೇರಿಯಲ್ಲಿಯೇ ಪಿಡಿಓ(PDO) ಪ್ರೇಮಿಗಳಿಗೆ ಮದುವೆ ಮಾಡಿಸಿದ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹರದನಹಳ್ಳಿಯಲ್ಲಿ ನಡೆದಿದೆ. ಪ್ರೇಮಿಗಳಾದ ಬಸವರಾಜು(24), ಸುಚಿತ್ರಾ(19)ಗೆ ಪಿಡಿಓ ಮದುವೆ(Marriage) ಮಾಡಿಸಿದ್ದಾರೆ. ಕುಂದುಕೊರತೆ ಬಗೆಹರಿಸಲು ಕರೆದಿದ್ದ ಸಭೆಯಲ್ಲೇ ವಿವಾಹ ಮಾಡಿಸಿದ್ದು ಸದ್ಯ ಅಚ್ಚರಿಗೆ ಕಾರಣವಾಗಿದೆ.

ಇಂದು ಹರದನಹಳ್ಳಿ ಗ್ರಾಮ ಪಂಚಾಯತಿ  ವಾರ್ಡ್ ಸಭೆ ನಡೆಯುತ್ತಿದ್ದ ವೇಳೆ ಕಚೇರಿ ಪಕ್ಕದ ಮನೆಯಲ್ಲಿ ಗಲಾಟೆ ನಡೆಯುತ್ತಿತ್ತು. ಇದನ್ನು ಮನಗಂಡ ಪಿಡಿಒ ಮಹದೇವಸ್ವಾಮಿ ಅಲ್ಲಿಗೆ ತೆರಳಿದ್ದಾರೆ. ಪರಸ್ಪರ ಪ್ರೀತಿಸುತ್ತಿದ್ದ ಬಸವರಾಜು, ಸುಚಿತ್ರಾ ಮದುವೆಗೆ ಪೋಷಕರ ವಿರೋಧವಿದ್ದ ಹಿನ್ನೆಲೆ ಪಿಡಿಓ ಇಬ್ಬರ ಪೋಷಕರ ಮನವೊಲಿಸಿ ಮದುವೆ ಮಾಡಿಸಿದ್ದಾರೆ.

ಬೆಂಗಳೂರು: ಹೆಂಡತಿ ತಂಗಿಯನ್ನು ಕಿಡ್ನ್ಯಾಪ್​ ಮಾಡಿದ್ದ ಆರೋಪಿ ಬಂಧನ
ಭಾವನೇ ನಾದಿನಿಯ ಮೇಲೆ ಕಣ್ಣು ಹಾಕಿದ್ದ. ಅಕ್ಕನ ಮದುವೆಯಾಗಿದ್ದ ಆಸಾಮಿ ತಂಗಿಯನ್ನೂ ಬಯಸಿದ್ದ. ಪತ್ನಿಯ ತಂಗಿಯನ್ನು ಮದುವೆಯಾಗಬೇಕು ಎಂದು ಆ ಯುವತಿಯನ್ನು ಕಿಡ್ನಾಪ್ ಮಾಡಿದ್ದ. ಕಿಡ್ನಾಪ್ ಮಾಡಿದ್ದ ಆರೋಪಿ ದೇವರಾಜ್ ಎಂಬಾತನನ್ನು ಕೊಡಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ. ದೇವರಾಜ್ ಸೇರಿ ಮೂವರು ಆರೋಪಿಗಳು ಅಂಧರ್​ ಆಗಿದ್ದಾರೆ. ಕೊಡಿಗೆಹಳ್ಳಿಯ ರಾಯಲ್ ಮಾರ್ಟ್ ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ, ರಾತ್ರಿ 10 ಗಂಟೆಗೆ ಕೆಲಸ ಮುಗಿಸಿ ಬರುವಾಗ ಆರೋಪಿಗಳು ಕಾರ್ ನಲ್ಲಿ ಬಂದು ಕಿಡ್ನಾಪ್ ಮಾಡಿದ್ದರು. ಜನವರಿ 22 ರಂದು ಯುವತಿಯನ್ನು ಅಪಹರಿಸಿಕೊಂಡು ಹೋಗಲಾಗಿತ್ತು. ಹಾಸನದ ಸಕಲೇಶಪುರದಲ್ಲಿ ಇಂದು ಆರೋಪಿಗಳ ಬಂಧನವಾಗಿದ್ದು, ಯುವತಿಯನ್ನು ರಕ್ಷಣೆ ಮಾಡಲಾಗಿದೆ.

ನಾಲ್ಕು ವರ್ಷದ ಹಿಂದೆ ಮದುವೆಯಾಗಿದ್ದ ದೇವರಾಜ ಹೆಂಡತಿಯ ಜೊತೆಗೆ ಆಕೆಯ ತಂಗಿಯನ್ನೂ ಪ್ರೀತಿಸ್ತಿದ್ದ. ಆದ್ರೆ 20 ವರ್ಷದ ಯುವತಿ ಇದಕ್ಕೆ ಒಪ್ಪಿರಲಿಲ್ಲ. ಆಗ ಕಿಡ್ನಾಪ್ ಮಾಡಿಕೊಂಡು ಮದುವೆ ಮಾಡೊ‌ ಪ್ಲಾನ್ ನಲ್ಲಿದ್ದ ದೇವರಾಜ.

ಇದನ್ನೂ ಓದಿ:

ಕ್ವಾರಿಯಲ್ಲಿ ಮೀನು ಹಿಡಿಯಲು ಹೋಗಿ ಬಾಲಕ ನೀರುಪಾಲು; ಜಾನುವಾರು ಕೊಟ್ಟಿಗೆ ಕಾಸಿಗೂ ನಾಲಿಗೆ ಚಾಚಿದ್ದ ಪಿಡಿಓ ಎಸಿಬಿ ಬಲೆಗೆ

ಅಕ್ಕನ ಮದುವೆಯಾಗಿದ್ದ ಆಸಾಮಿ ತಂಗಿಯೂ ಬೇಕು ಎಂದಿದ್ದ; ಕಿಡ್ನಾಪ್ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದ

Follow us on

Related Stories

Most Read Stories

Click on your DTH Provider to Add TV9 Kannada