Rohini Sindhuri vs D Roopa: ರೂಪಾ ಪೋಟೊಗಳು ನನ್ನ ಬಳಿ ಇವೆ, ಬಿಡುಗಡೆ ಮಾಡಲ್ಲ; ಗಂಗರಾಜ್

ರೂಪಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಗಂಗರಾಜ್, ಫೋಟೊಗಳು ನನ್ನ ಬಳಿಯೂ ಇವೆ. ಆದರೆ ಅದನ್ನು ಬಿಡುಗಡೆ ಮಾಡವುದಿಲ್ಲ ಎಂದು ಹೇಳಿದ್ದಾರೆ.

Rohini Sindhuri vs D Roopa: ರೂಪಾ ಪೋಟೊಗಳು ನನ್ನ ಬಳಿ ಇವೆ, ಬಿಡುಗಡೆ ಮಾಡಲ್ಲ; ಗಂಗರಾಜ್
ಡಿ ರೂಪಾ ಮೌದ್ಗೀಲ್, ಐಪಿಎಸ್

Updated on: Feb 22, 2023 | 11:24 AM

ಮೈಸೂರು: ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಮತ್ತು ಐಪಿಎಸ್ ಅಧಿಕಾರಿ ಡಿ ರೂಪಾ (D Roopa) ನಡುವಣ ಸಂಘರ್ಷ ಈಗ ಮತ್ತೊಂದು ಆಯಾಮಕ್ಕೆ ಹೊರಳಿದೆ. ರೋಹಿಣಿ ವಿರುದ್ಧ ದೂರು ನೀಡುವಂತೆ ಸೂಚಿಸಿ ಅವಾಚ್ಯ ಶಬ್ದಗಳಿಂದ ರೂಪಾ ತಮ್ಮನ್ನು ನಿಂದಿಸಿದ್ದಾರೆ ಎಂದು ಆರ್​ಟಿಐ ಕಾರ್ಯಕರ್ತ ಗಂಗರಾಜ್ ಆರೋಪಿಸಿದ್ದು, ಇವರಿಬ್ಬರ ನಡುವಣ ಸಂಭಾಷಣೆಯ ಆಡಿಯೊ ವೈರಲ್ ಆಗಿದೆ. ಇದರ ಬೆನ್ನಲ್ಲೇ ರೂಪಾ ಅವರ ಫೋಟೊಗಳು ತಮ್ಮ ಬಳಿ ಇವೆ ಎಂದಿರುವ ಗಂಗರಾಜ್, ಅದನ್ನು ಬಹಿರಂಗಪಡಿಸುವುದಿಲ್ಲ ಎಂದು ಹೇಳಿದ್ದಾರೆ. ರೂಪಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಗಂಗರಾಜ್, ಫೋಟೊಗಳು ನನ್ನ ಬಳಿಯೂ ಇವೆ. ಆದರೆ ಅದನ್ನು ಬಿಡುಗಡೆ ಮಾಡವುದಿಲ್ಲ. ನಿಮಗೂ (ರೂಪಾ) ನನಗೂ ವ್ಯತ್ಯಾಸ ಇದೆ. ನೀವು ಸಾಮಾಜಿಕ ಜಾಲತಾಣದಲ್ಲಿ ಪೋಟೊ ಹಾಕಿ ಹೆಣ್ಣಿನ ತೇಜೋವದೆ ಮಾಡಿದ್ದೀರಿ. ನೋಡುವ ದೃಷ್ಟಿ ಕೋನ ಸರಿ ಇದ್ದರೆ ಎಲ್ಲವು ಸರಿ ಇರುತ್ತದೆ. ಅರೆಬರೆ ಪೋಟೊ ಅಂತ ಹೇಳುತ್ತಿದ್ದಾರೆ. ಅದರಲ್ಲಿ ನೋಡಲಾಗದ್ದು ಏನಿದೆ ಎಂದು ಗಂಗರಾಜ್ ಪ್ರಶ್ನಿಸಿದ್ದಾರೆ.

ಅವರ ಕುಟುಂಬಕ್ಕೆ ಸಿಂಧೂರಿಯವರಿಂದ ಸಮಸ್ಯೆ ಇದ್ದರೆ ಅದನ್ನು ಕುಳಿತು ಮಾತನಾಡಬೇಕು. ಅದು ಬಿಟ್ಟು ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿ ಎಲ್ಲರೂ ನೋಡುವಂತೆ ಮಾಡುವುದು ಸರಿಯಲ್ಲ. ನಾನು ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಿದ್ದೇನೆ. ಸಿಂಧೂರಿ ತಪ್ಪು ಮಾಡಿದ್ದರೆ ಅವರ ವಿರುದ್ಧವೂ ಹೋರಾಟ ಮಾಡುತ್ತೇನೆ. ಆದರೆ, ರೂಪಾ ಅವರು ಒಬ್ಬರ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂದು ಗಂಗರಾಜ್ ಹೇಳಿದ್ದಾರೆ.

ಇದನ್ನೂ ಓದಿ: Rohini Sindhuri Vs D Roopa: ರೋಹಿಣಿ ವಿರುದ್ಧ ದೂರು ನೀಡಲು ಹೇಳಿದ್ದ ರೂಪಾ; ಸಾಮಾಜಿಕ ಕಾರ್ಯಕರ್ತ ಗಂಗರಾಜು ಜತೆ ಮಾತನಾಡಿದ್ದ ಆಡಿಯೋ ವೈರಲ್

‘ರೋಹಿಣಿ ವಿರುದ್ಧ ಮಾತನಾಡುವಂತೆ ರೂಪಾ ಪ್ರಚೋದನೆ’

ನಾನು ಎಲ್ಲರ ವಿರುದ್ಧವೂ ಹೋರಾಟ ಮಾಡುತ್ತಿದ್ದೇನೆ. ನಾನು ರೋಹಿಣಿ ಪರ ಇದ್ದೇನೆ ಅಂತ ರೂಪಾ ನನ್ನನ್ನು ಪ್ರಶ್ನೆ ಮಾಡಿದರು. ರೋಹಿಣಿ ವಿರುದ್ಧ ಮಾತನಾಡು ಅಂತ ಪ್ರಚೋದನೆ ಮಾಡಿದರು‌. ನಾನು ಹಾಗೆ ಮಾಡಿದರೆ ಅಪರಾಧವಾಗುತ್ತದೆ. ಜೆಡಿಎಸ್ ಶಾಸಕ ಸಾರಾ ಮಹೇಶ್ ಜತೆ ಸಂಧಾನವಾಗಿಲ್ಲ ಅಂತ ರೋಹಿಣಿ ಹೇಳಿದ್ದಾರೆ. ಪತ್ರಕ್ಕೆ ಸಹಿ ಹಾಕಲು ಹೇಳಿದಾಗ ಸಮ್ಮತಿಸದೇ ಬಂದಿದ್ದೇನೆ ಎಂದು ಅವರು ಹೇಳಿದ್ದಾರೆ. ಆಡಿಯೋ ಬಗ್ಗೆ ರೋಹಿಣಿ ಬಳಿ ಪ್ರಸ್ತಾಪಿಸಿದ್ದೆ. ಇದರಿಂದ ನನಗೆ ನೋವಾಗಿದೆ ಅಂತ ಹೇಳಿದ್ದೆ‌. ಈ ವಿಚಾರವಾಗಿ ಮೌನಿಶ್ ಮೌದ್ಗಿಲ್ ನನ್ನ ಬಳಿ ಕ್ಷಮೆ ಕೇಳಿದ್ದರು. ರೂಪಾ ವಿರುದ್ಧ ಹೋರಾಟ ಮಾಡುತ್ತೇನೆ. ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುತ್ತೇನೆ, ಈ ಬಗ್ಗೆ ವಕೀಲರ ಜೊತೆ ಮಾತನಾಡಿದ್ದೇನೆ ಎಂದು ಗಂಗರಾಜ್ ಟಿವಿ9ಗೆ ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ