Ayodhya Ram Mandir | ರಾಮಮಂದಿರ ನಿರ್ಮಾಣಕ್ಕೆ.. ಸಿದ್ದರಾಮಯ್ಯ ಸಹೋದರನಿಂದ ದೇಣಿಗೆ

Ayodhya Ram Mandir: ಅತ್ತ ದೆಹಲಿಯಲ್ಲಿ ವಿವಾದಿತ ರಾಮ ಮಂದಿರಕ್ಕೆ ನಾನು ದೇಣಿಗೆ ಕೊಡಲು ನಿರಾಕರಿಸಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಧ್ಯಮದವರ ಬಳಿ ಪ್ರತಿಕ್ರಿಯಿಸಿದರೆ ಇತ್ತ, ಜಿಲ್ಲೆಯಲ್ಲಿ ವಿಪಕ್ಷ ನಾಯಕರ ಸಹೋದರ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾರೆ.

  • TV9 Web Team
  • Published On - 17:35 PM, 16 Feb 2021
Ayodhya Ram Mandir | ರಾಮಮಂದಿರ ನಿರ್ಮಾಣಕ್ಕೆ.. ಸಿದ್ದರಾಮಯ್ಯ ಸಹೋದರನಿಂದ ದೇಣಿಗೆ
ರಾಮಮಂದಿರ ನಿರ್ಮಾಣಕ್ಕೆ ಸಿದ್ದರಾಮಯ್ಯ ಸಹೋದರನಿಂದ ದೇಣಿಗೆ

ಮೈಸೂರು: ಅತ್ತ ದೆಹಲಿಯಲ್ಲಿ ವಿವಾದಿತ ರಾಮ ಮಂದಿರಕ್ಕೆ ನಾನು ದೇಣಿಗೆ ಕೊಡಲು ನಿರಾಕರಿಸಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಧ್ಯಮದವರ ಬಳಿ ಪ್ರತಿಕ್ರಿಯಿಸಿದ್ದರೆ ಇತ್ತ, ಜಿಲ್ಲೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಸಹೋದರ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾರೆ.

ಹೌದು, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ತಮ್ಮನಾಗಿರುವ ಸಿದ್ದೇಗೌಡರು ಮಾಜಿ ಸಿಎಂನ ತವರೂರಾದ ಸಿದ್ದರಾಮನಹುಂಡಿ ಗ್ರಾಮದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಕೊಟ್ಟಿದ್ದಾರೆ. ಅಂದ ಹಾಗೆ, ಸಿದ್ದೇಗೌಡರು ರಾಮಮಂದಿರ ನಿರ್ಮಾಣಕ್ಕೆ 10 ರೂ. ದೇಣಿಗೆ ಕೊಟ್ಟಿದ್ದಾರೆ. ಜೊತೆಗೆ, ಸಿದ್ದರಾಮನ ಹುಂಡಿಯಲ್ಲಿ ಮಂದಿರ ನಿರ್ಮಾಣಕ್ಕೆ 40 ಸಾವಿರ ದೇಣಿಗೆ ಸಂಗ್ರಹವಾಗಿದೆ ಎಂದು ಬಿಜೆಪಿ‌ ಮುಖಂಡ ಕೆ.ದೇವರಾಜ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ವಿವಾದಿತ ರಾಮ ಮಂದಿರಕ್ಕೆ ದೇಣಿಗೆ ಕೊಡುವುದಿಲ್ಲ: ವಿವಾದಿತ ಹೇಳಿಕೆ ನೀಡಿದ ಸಿದ್ದರಾಮಯ್ಯ!