Sponge Iron ಘಟಕಗಳಿಂದ ಆರೋಗ್ಯ ದುಷ್ಪರಿಣಾಮ: ತಪಾಸಣೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ – ಜಿಲ್ಲಾಧಿಕಾರಿ ಪವನ್‌ ಕುಮಾರ್

Sponge Iron ಸ್ಪಾಂಜ್ ಐರನ್ ಘಟಕಗಳು ಹೊರ ಬಿಡುತ್ತಿರುವ ಹೊಗೆ, ಧೂಳಿನಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ. ಈ ಕುರಿತಂತೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜನರ ಆರೋಗ್ಯ ತಪಾಸಣೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಜಿಲ್ಲಾಧಿಕಾರಿ ಪವನ್ ಕುಮಾರ್ ಹೇಳಿದ್ದಾರೆ.

Sponge Iron ಘಟಕಗಳಿಂದ ಆರೋಗ್ಯ ದುಷ್ಪರಿಣಾಮ: ತಪಾಸಣೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ - ಜಿಲ್ಲಾಧಿಕಾರಿ ಪವನ್‌ ಕುಮಾರ್
ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ
Follow us
shruti hegde
| Updated By: ಸಾಧು ಶ್ರೀನಾಥ್​

Updated on: Feb 16, 2021 | 5:16 PM

ಬಳ್ಳಾರಿ: ಜಿಲ್ಲೆಯಲ್ಲಿರುವ 28 ಸ್ಪಾಂಜ್ ಐರನ್ ಘಟಕಗಳು ಹೊರ ಬಿಡುತ್ತಿರುವ ಕಪ್ಪು ಹೊಗೆ, ಧೂಳಿನಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತಿದೆ. ಹೃದಯ ಸಂಬಂಧಿ ಕಾಯಿಲೆಗಳಿಂದ ಜನರು ಬಳಲುತ್ತಿರುವ ಹಿನ್ನೆಯಲ್ಲಿ ಸ್ಪಾಂಜ್ ಐರನ್ ಘಟಕಗಳ ವಿರುದ್ಧ ಕುಡುತಿನಿ ಪಟ್ಟಣದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಜಿಲ್ಲಾಧಿಕಾರಿ ಪವನ್‌ ಕುಮಾರ್ ಹೇಳಿಕೆ ನೀಡಿದ್ದಾರೆ.

ಸ್ಪಾಂಜ್ ಐರನ್ ಘಟಕಗಳು ಹೊರ ಬಿಡುತ್ತಿರುವ ಹೊಗೆಯಿಂದಾಗಿ ಅನಾರೋಗ್ಯ ಉಂಟಾಗುತ್ತಿದೆ. ಅಸ್ತಮಾ, ಶ್ವಾಸಕೋಶ ಸಂಬಂಧಿ ಕಾಯಿಲೆ ಸೇರಿದಂತೆ ಹೃದಯ ಸಂಬಂಧಿ ಕಾಯಿಲೆಗಳು ಜನರನ್ನು ಆವರಿಸಿಕೊಳ್ಳುತ್ತಿದೆ. ಸ್ಪಾಂಜ್ ಐರನ್ ಘಟಕಗಳು ಸರ್ಕಾರದ ನಿಯಮಗಳನ್ನು ಪಾಲಿಸುತ್ತಿಲ್ಲ. ಈ ಕುರಿತಂತೆ ಜಿಲ್ಲಾಡಳಿತಕ್ಕೆ ಗೊತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

bellary people

ಬಳ್ಳಾರಿ ಜನರ ಆಕ್ರೋಶ

ಮಾಲಿನ್ಯದಿಂದ ಜನರ ಆರೋಗ್ಯ ಸಮಸ್ಯೆ ಬಗ್ಗೆ ತಪಾಸಣೆ ನಡೆಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸುತ್ತೇವೆ. ಹೆಚ್ಚು ಜನರಿಗೆ ಸಮಸ್ತೆ ಉಂಟಾಗಿದ್ದು ಖಚಿತವಾದರೆ ನಿಯಮ ಪಾಲಿಸದ ಘಟಕಗಳ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಟಿವಿ9 ಜೊತೆ ಜಿಲ್ಲಾಧಿಕಾರಿ ಪವನ್‌ ಕುಮಾರ್ ಮಾತನಾಡಿದ್ದಾರೆ.