ನಾಗರಹೊಳೆಯಲ್ಲಿ 6 ಹೊಸ ಜಾತಿಯ ಪಕ್ಷಿಗಳು ಪತ್ತೆ!
ನಾಗರಹೊಳೆಯಲ್ಲಿ ಪಕ್ಷಿ ಗಣತಿ ಕಾರ್ಯ ಮುಕ್ತಾಯಗೊಂಡಿದ್ದು ಈ ಬಾರಿ ಗಣತಿ ವೇಳೆ 6 ಹೊಸ ಜಾತಿಯ ಪಕ್ಷಿಗಳು ಪತ್ತೆಯಾಗಿವೆ.

ಮೈಸೂರು: ನಾಗರಹೊಳೆಯಲ್ಲಿ ಪಕ್ಷಿ ಗಣತಿ ಕಾರ್ಯ ಮುಕ್ತಾಯಗೊಂಡಿದ್ದು ಈ ಬಾರಿ ಗಣತಿ ವೇಳೆ 6 ಹೊಸ ಜಾತಿಯ ಪಕ್ಷಿಗಳು ಪತ್ತೆಯಾಗಿವೆ. ಬ್ಲ್ಯಾಕ್ ರೆಡ್ ಸ್ಟಾರ್ಟ್, ಗ್ರೇಟರ್ ಸ್ಪಾಟೆಡ್ ಈಗಲ್, ಗ್ರೀನಿಷ್ ವಾರ್ ಬ್ಲರ್, ಸ್ಪಾಟ್ ಬೆಲ್ಲಿಡ್ ಈಗಲ್ ಔಲ್, ನೀಲಗಿರಿ ಫ್ಲವರ್ ಪಿಕ್ಕರ್, ಮಾಂಟಾಗೂ ಹ್ಯಾರಿಯರ್ ಪತ್ತೆಯಾಗಿರುವ ಪಕ್ಷಿಗಳ ಹೆಸರು.
ನಾಲ್ಕು ದಿನಗಳ ಕಾಲ 8 ವಲಯಗಳಲ್ಲಿ ಪಕ್ಷಿ ಸಮೀಕ್ಷೆ ನಡೆದಿದ್ದು ಸುಮಾರು 75 ಜನ ಪಕ್ಷಿ ತಜ್ಞರು, ಸ್ವಯಂ ಸೇವಕರು ಮತ್ತು 36 ಜನ ವಿದ್ಯಾರ್ಥಿಗಳು, ಅಧಿಕಾರಿಗಳು, ಸಿಬ್ಬಂದಿ ಭಾಗಿಯಾಗಿದ್ರು. ನಾಗರಹೊಳೆಯಲ್ಲಿ ಒಟ್ಟು 270 ಪ್ರಭೇದದ ಪಕ್ಷಿಗಳು ಪತ್ತೆಯಾಗಿವೆ. ಸಮೀಕ್ಷೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಹುಣಸೂರು ತಾಲ್ಲೂಕಿನ ವಲಯ ಕಚೇರಿಯಲ್ಲಿ ಸನ್ಮಾನ ಮಾಡಲಾಗಿದೆ.

ಗ್ರೇಟರ್ ಸ್ಪಾಟೆಡ್ ಈಗಲ್

ಸ್ಪಾಟ್ ಬೆಲ್ಲಿಡ್ ಈಗಲ್ ಔಲ್

ಮಾಂಟಾಗೂ ಹ್ಯಾರಿಯರ್

ನೀಲಗಿರಿ ಫ್ಲವರ್ ಪಿಕ್ಕರ್

ಬ್ಲ್ಯಾಕ್ ರೆಡ್ ಸ್ಟಾರ್ಟ್

ಗ್ರೀನಿಷ್ ವಾರ್ ಬ್ಲರ್
ಬಾನಂಗಳದಲ್ಲಿ ಬಾನಾಡಿಗಳ ಕಲರವ, ಕಬಿನಿ ಜಲಾಶಯದಲ್ಲಿ ವಿದೇಶಿ ಪಕ್ಷಿಗಳ ಹಾರಾಟ