S.L. Bhyrappa | 7.5 ಗಂಟೆಗಳ ಕಾಲ ಅರಮನೆ ನಗರಿಯಲ್ಲಿ ಮೇಳೈಸಲಿದೆ.. ಎಸ್. ಎಲ್​. ಭೈರಪ್ಪನವರ ‘ಪರ್ವ’ ನಾಟಕ ವೈಭವ!

S.L. Bhyrappa | ಖ್ಯಾತ ಸಾಹಿತಿ S​.L​​.ಭೈರಪ್ಪನವರ ಸುಪ್ರಸಿದ್ಧ ‘ಪರ್ವ’ ಕಾದಂಬರಿ ಇದೀಗ ನಾಟಕದ ರೂಪ ಪಡೆಯುತ್ತಿದೆ. ಹೌದು, ನಗರದ ಕಲಾಮಂದಿರದಲ್ಲಿ ಪರ್ವ ಕಾದಂಬರಿ ಅಧಾರಿತ ನಾಟಕದ ಪ್ರದರ್ಶನ ನಡೆಯಲಿದೆ.

  • TV9 Web Team
  • Published On - 17:54 PM, 18 Feb 2021
S.L. Bhyrappa | 7.5 ಗಂಟೆಗಳ ಕಾಲ ಅರಮನೆ ನಗರಿಯಲ್ಲಿ ಮೇಳೈಸಲಿದೆ.. ಎಸ್. ಎಲ್​. ಭೈರಪ್ಪನವರ ‘ಪರ್ವ’ ನಾಟಕ ವೈಭವ!
ಅರಮನೆ ನಗರಿಯಲ್ಲಿ S​.L​​.ಭೈರಪ್ಪನವರ ‘ಪರ್ವ’ ನಾಟಕ ವೈಭವ

ಮೈಸೂರು: ಖ್ಯಾತ ಸಾಹಿತಿ S​.L​​.ಭೈರಪ್ಪನವರ ಸುಪ್ರಸಿದ್ಧ ‘ಪರ್ವ’ ಕಾದಂಬರಿ ಇದೀಗ ನಾಟಕದ ರೂಪ ಪಡೆಯುತ್ತಿದೆ. ಹೌದು, ನಗರದ ಕಲಾಮಂದಿರದಲ್ಲಿ ಪರ್ವ ಕಾದಂಬರಿ ಅಧಾರಿತ ನಾಟಕದ ಪ್ರದರ್ಶನ ನಡೆಯಲಿದೆ.

ಮಾರ್ಚ್ 12ರಂದು ಪರ್ವ ನಾಟಕದ ಮೊದಲ ಪ್ರದರ್ಶನ ನಡೆಯಲಿದೆ. ನಂತರ ಮಾರ್ಚ್​ 13, 14ರಂದು ಸಹ ನಾಟಕ‌ ಪ್ರದರ್ಶನ ಆಗಲಿದೆ. ಖ್ಯಾತ ನಿರ್ದೇಶಕ ಪ್ರಕಾಶ್ ಬೆಳವಾಡಿ ಅವರ ಸಾರಥ್ಯದಲ್ಲಿ ಭೈರಪ್ಪನವರ ಕೃತಿ ನಾಟಕವಾಗಿ ಬರುತ್ತಿದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಹೇಳಿದ್ದಾರೆ.

ಅಂದ ಹಾಗೆ, ನಾಟಕ‌ದ ಸಂಪೂರ್ಣ ಅವಧಿ ಸುಮಾರು 7.5 ಗಂಟೆಗಳ ಕಾಲ ಇರಲಿದೆ. ಇದಕ್ಕಾಗಿ ಸಕಲ ಸಿದ್ಧತೆ ಮತ್ತು ತರಬೇತಿ ಸಹ ನಡೆಸಲಾಗುತ್ತಿದೆ.

‘ನಾಟಕಕ್ಕಾಗಿ 50 ಲಕ್ಷ ಅನುದಾನ ಬಿಡುಗಡೆಗೆ ಅನುಮೋದನೆ ನೀಡಿದ್ದೇನೆ’
ಕೊರೊನಾ ಬಳಿಕ ಮೊದಲ ನಾಟಕವಾದ ‘ಪರ್ವ’ಕ್ಕೆ ಅನುದಾನ ನೀಡಿದ್ದೇನೆ. ಸುಮಾರು 50 ಲಕ್ಷ ರೂ ಅನುದಾನ ಬಿಡುಗಡೆಗೆ ಅನುಮೋದನೆ ನೀಡಿದ್ದೇನೆ. ಶೀಘ್ರದಲ್ಲೇ ಅವರಿಗೆ ಅನುದಾನ ಬಂದು ಸೇರಲಿದೆ‌ ಎಂದು ರಂಗಾಯಣದಲ್ಲಿ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.

ಪರ್ವ ನಾಟಕದ ದಿನಾಂಕದ ಮಾಹಿತಿ ಪಡೆದುಕೊಳ್ತೇನೆ. ಸಿಎಂ ಬಿ.ಎಸ್​.ಯಡಿಯೂರಪ್ಪರನ್ನ ಸಹ ನಾಟಕ ಪ್ರದರ್ಶ‌ನಕ್ಕೆ ಕರೆತರುವ ಬಗ್ಗೆ ಚರ್ಚೆ ನಡೆಸುತ್ತೇನೆ ಎಂದು ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.

ಇದನ್ನೂ ಓದಿ: KC Narayana Gowda | ಚುನಾವಣಾ ಅಫಿಡವಿಟ್​ನಲ್ಲಿ ಸುಳ್ಳು ಮಾಹಿತಿ ಆರೋಪ: ಸಚಿವ ಕೆ.ಸಿ. ನಾರಾಯಣಗೌಡ ವಿರುದ್ಧ ತನಿಖೆಗೆ ರಾಜ್ಯಪಾಲರ ಸೂಚನೆ