ರಾಮಮಂದಿರಕ್ಕೆ ಭೂಮಿ ಕೊಟ್ಟ ದಲಿತ ರೈತ, ಪೂಜಾ ಕಾರ್ಯಕ್ರಮಕ್ಕೆ ಬರದಂತೆ ಪ್ರತಾಪ್‌ ಸಿಂಹಗೆ ಕ್ಲಾಸ್

ಮೈಸೂರಿನ ಹಾರೋಹಳ್ಳಿಯಲ್ಲಿ ಇಂದು ರಾಮ ಮಂದಿರ ನಿರ್ಮಾಣಕ್ಕಾಗಿ ನಡೆಯುತ್ತಿದ್ದ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಬಿಜೆಪಿ ಸಂಸದ ಸಂಸದ ಪ್ರತಾಪ್‌ ಸಿಂಹ ಬಂದಿದ್ದಕ್ಕೆ ಗ್ರಾಮದ ಕೆಲವರು ಆಕ್ರೋಶ ವ್ಯಕ್ತಡಿಸಿದ್ದಾರೆ. ಇದರಿಂದ ಮುಜುಗರಕ್ಕೊಳಗಾದ ಪ್ರತಾಪ್ ಸಿಂಹ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಏನಾಯ್ತು? ಎನ್ನುವ ವಿವರ ಇಲ್ಲಿದೆ.

ರಾಮಮಂದಿರಕ್ಕೆ ಭೂಮಿ ಕೊಟ್ಟ ದಲಿತ ರೈತ, ಪೂಜಾ ಕಾರ್ಯಕ್ರಮಕ್ಕೆ ಬರದಂತೆ ಪ್ರತಾಪ್‌ ಸಿಂಹಗೆ ಕ್ಲಾಸ್
ಪ್ರತಾಪ್ ಸಿಂಹ
Updated By: ರಮೇಶ್ ಬಿ. ಜವಳಗೇರಾ

Updated on: Jan 22, 2024 | 10:55 PM

ಮೈಸೂರು, ಜನವರಿ 22): ಮೈಸೂರಿನ ಶಿಲ್ಪಿ ಅರುಣ್‌ ಯೋಗಿ ರಾಜ್‌ ಅವರು ಕೆತ್ತಿದ ರಾಮನ ಮೂರ್ತಿ ಜನವರಿ 22ರ ದಿನವಾದ ಸೋಮವಾರ ರಾಮಜನ್ಮಭೂಮಿ (Ram Janmabhoomi) ಅಯೋಧ್ಯೆಯ ರಾಮಮಂದಿರದಲ್ಲಿ (Ram Mandir) ರಾಮಲಲ್ಲಾನ Ram Lalla) ಪ್ರಾಣ ಪ್ರತಿಷ್ಠಾಪನೆ ( ಕಾರ್ಯ ನೆರವೇರಿದೆ. ಈ ಮೂರ್ತಿಯನ್ನು ಕೆತ್ತಲು ಬಳಸಿದ ಕಲ್ಲು ಮೈಸೂರು ತಾಲೂಕು ಹಾರೋಹಳ್ಳಿಯ ಜಮೀನಿನಲ್ಲಿ ಸಿಕ್ಕಿದ್ದರಿಂದ ಅಲ್ಲೀಗ ರಾಮ ಮಂದಿರ ನಿರ್ಮಾಣಕ್ಕೆ ಗ್ರಾಮಸ್ಥರು ಮುಂದಾಗಿದ್ದಾರೆ. ಈಗ ಇದಕ್ಕೆ ಶಾಸಕ‌ ಜಿ.ಟಿ.ದೇವೆಗೌಡ (GT Devegowda) ನೇತೃತ್ವದಲ್ಲಿ ಭೂಮಿ ಪೂಜೆಯನ್ನೂ ನೆರವೇರಿಸಲಾಗಿದೆ. ಈ ಭೂಮಿ ಪೂಜೆ ಕಾರ್ಯಕ್ರಮಕ್ಕಾಗಿ ಸಂಸದ ಪ್ರತಾಪ್‌ ಸಿಂಹ (MP Pratap Simha) ಆಗಮಿಸಿದ್ದು, ಅವರನ್ನು ಗ್ರಾಮಸ್ಥರು ಅಲ್ಲಿಂದ ವಾಪಸ್‌ ಕಳುಹಿಸಿರುವ ಘಟನೆ ನಡೆದಿದೆ.

ಪ್ರತಾಪ್‌ ಸಿಂಹಗೆ ಪ್ರವೇಶ ನಿರಾಕರಣೆ

ಪ್ರತಾಪ್‌ ಸಿಂಹ ಅವರು ಹಾರೋಹಳ್ಳಿಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ನಡೆಯುತ್ತಿದ್ದ ಭೂಮಿ ಪೂಜೆ ಕಾರ್ಯಕ್ರಮಕ್ಕಾಗಿ ಸಂಸದ ಪ್ರತಾಪ್‌ ಸಿಂಹ ಬಂದಿದ್ದಾರೆ. ಅವರನ್ನು ಕಂಡೊಡನೆ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ. “ನೀವು ದಲಿತ ವಿರೋಧಿ”ಯಾಗಿದ್ದು, ನಿಮಗೆ ಈ ಕಾರ್ಯಕ್ರಮದಲ್ಲಿ ಅವಕಾಶ ಇಲ್ಲ. ಮಂದಿರ ನಿರ್ಮಾಣಕ್ಕೆ ಭೂಮಿಪೂಜೆಯನ್ನು ಶಾಸಕರಾದ ಜಿ.ಟಿ. ದೇವೇಗೌಡ ನೆರವೇರಿಸುತ್ತಾರೆ. ನಿಮ್ಮ ಅಗತ್ಯ ಇಲ್ಲ ಎಂದು ತಡೆದಿದ್ದಾರೆ. ಹೀಗಾಗಿ ಪೂರ್ಣಕುಂಭ ಸ್ವಾಗತ ಸೇರಿದಂತೆ ಕೆಲವು ಸಮಯ ಸ್ಥಳದಲ್ಲಿದ್ದ ಸಂಸದ ಪ್ರತಾಪ್‌ ಸಿಂಹ ಬಳಿಕ ಅಲ್ಲಿಂದ ನಿರ್ಗಮಿಸಿದ್ದಾರೆ.

ಈ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಹಾರೋಹಳ್ಳಿ ಗ್ರಾಮದ ಯಜಮಾನ ಚಲುವರಾಜು, ಪ್ರತಾಪ್ ಸಿಂಹ 10 ವರ್ಷದಿಂದ ಒಮ್ಮೆಯೂ ನಮ್ಮೂರಿಗೆ ಬಂದಿಲ್ಲ.‌ ನಮ್ಮ ಸಮಸ್ಯೆ ಏನು ಅಂತ ಕೇಳಿಲ್ಲ. ಹೀಗಾಗಿ ಅವರು ಪೂಜೆಯಲ್ಲಿ ಭಾಗವಹಿಸುವುದು ನಮಗೆ ಇಷ್ಟ ಇಲ್ಲ. ಆದ್ದರಿಂದ ಅವರನ್ನು ವಾಪಸ್ ಕಳುಹಿಸಿದ್ದೇವೆ ಎಂದು ಹೇಳಿದರು.

ರಾಮಮಂದಿರಕ್ಕೆ ಭೂಮಿ ಬಿಟ್ಟುಕೊಟ್ಟ ದಲಿತ ರೈತ

ಹಾರೋಹಳ್ಳಿಯ ದಲಿತ ಕುಟುಂಬದ ರಾಮದಾಸ್‌ ಎಂಬುವವರ ಜಮೀನಿನಲ್ಲಿ ಸಿಕ್ಕಿದ್ದ ಶಿಲೆಯಿಂದಲೇ “ರಾಮಲಲ್ಲಾ ಮೂರ್ತಿ”ಯನ್ನು ಕೆತ್ತನೆ ಮಾಡಲಾಗಿತ್ತು. ಹೀಗಾಗಿ ರಾಮ ಶಿಲೆ ಸಿಕ್ಕ ಜಾಗದಲ್ಲೂ ಮಂದಿರ ನಿರ್ಮಾಣ ಮಾಡಬೇಕು ಎಂದು ಜಾಗದ ಮಾಲೀಕರು ಮತ್ತು ಊರಿನವರು ಚಿಂತನೆ ನಡೆಸಿದ್ದರು. ಇದಕ್ಕಾಗಿ ದಲಿತ ರೈತ ರಾಮದಾಸ್‌ ತಮ್ಮ ಜಾಗವನ್ನೇ ಬಿಟ್ಟುಕೊಟ್ಟಿದ್ದಾರೆ. ಕೆಲವು ದಿನದ ಹಿಂದೆ ಅಲ್ಲಿ ಪೂಜೆಯನ್ನು ಕೂಡಾ ನಡೆಸಲಾಗಿತ್ತು. ಈಗ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ನೆರವೇರಿಸಲಾಗಿದೆ.