ಮೈಸೂರಿನಲ್ಲಿ ಗರಿಗೆದರಿದ ಪಾಲಿಕೆ ಉಪಚುನಾವಣೆ; 6 ನಾಮಪತ್ರ ಸಲ್ಲಿಕೆ

ನಾಳೆ (ಆಗಸ್ಟ್ 25) ಮಹಾನಗರ ಪಾಲಿಕೆ ಮೇಯರ್ ಚುನಾವಣೆ ನಡೆಯುತ್ತಿದ್ದು, ಮೊದಲ ಬಾರಿಗೆ ಮೇಯರ್ ಗದ್ದುಗೆ ಹಿಡಿಯಲು ಬಿಜೆಪಿ ಸರ್ಕಸ್ ನಡೆಸುತ್ತಿದೆ.

ಮೈಸೂರಿನಲ್ಲಿ ಗರಿಗೆದರಿದ ಪಾಲಿಕೆ ಉಪಚುನಾವಣೆ; 6 ನಾಮಪತ್ರ ಸಲ್ಲಿಕೆ
ಪ್ರಾತಿನಿಧಿಕ ಚಿತ್ರ
Updated By: sandhya thejappa

Updated on: Aug 24, 2021 | 8:41 AM

ಮೈಸೂರು: ಜಿಲ್ಲೆಯಲ್ಲಿ ಪಾಲಿಕೆ ಉಪಚುನಾವಣೆ ಗರಿಗೆದರಿದೆ. 36ನೇ ವಾರ್ಡ್ಗೆ ಉಪಚುನಾವಣೆ ನಡೆಯುತ್ತಿದ್ದು, ನಾಮಪತ್ರ ಸಲ್ಲಿಕೆ ಮುಕ್ತಾಯವಾಗಿದೆ. ಬಿಜೆಪಿ (BJP), ಕಾಂಗ್ರೆಸ್ (Congress), ಜೆಡಿಎಸ್ (JDS) ಸೇರಿ ಒಟ್ಟು 6 ನಾಮಪತ್ರ ಸಲ್ಲಿಕೆಯಾಗಿದೆ. ಮಾಜಿ ಮೇಯರ್ ರುಕ್ಮಿಣಿ ಮಾದೇಗೌಡ ಅವರ ಸದಸ್ಯತ್ವ ರದ್ದಾದ ಹಿನ್ನೆಲೆ ಉಪಚುನಾವಣೆ ನಡೆಯುತ್ತಿದೆ. ಬಿಜೆಪಿಯಿಂದ ಪಿ.ಶೋಭಾ, ಕಾಂಗ್ರೆಸ್ನಿಂದ ರಜನಿ ಅಣ್ಣಯ್ಯ, ಜೆಡಿಎಸ್ನಿಂದ ಎಸ್.ಲೀಲಾವತಿ ಮತ್ತು ಮೂವರು ಪಕ್ಷೇತರರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ನಾಳೆ (ಆಗಸ್ಟ್ 25) ಮಹಾನಗರ ಪಾಲಿಕೆ ಮೇಯರ್ ಚುನಾವಣೆ ನಡೆಯುತ್ತಿದ್ದು, ಮೊದಲ ಬಾರಿಗೆ ಮೇಯರ್ ಗದ್ದುಗೆ ಹಿಡಿಯಲು ಬಿಜೆಪಿ ಸರ್ಕಸ್ ನಡೆಸುತ್ತಿದೆ. ಈ ಹಿಂದೆ ಮೈಸೂರು ಪಾಲಿಕೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಇತ್ತು. ಬದಲಾದ ಪರಿಸ್ಥಿತಿಯಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿಯಲ್ಲಿ ಬಿಕ್ಕಟ್ಟು ಶುರುವಾಯಿತು. ಮೈತ್ರಿ ಬಿಕ್ಕಟ್ಟಿನ ಲಾಭ ಪಡೆಯಲು ಬಿಜೆಪಿ ಇದೀಗ ಯತ್ನಿಸುತ್ತಿದೆ. ಕೊರೊನಾ ಭೀತಿ ನಡುವೆ ಚುನಾವಣೆ ಭರಾಟೆ ಜೋರಾಗಿ ನಡೆಯುತ್ತಿದೆ.

ಕಾಂಗ್ರೆಸ್ ಸಂಪರ್ಕಕ್ಕೆ ಸಿಗದ ಸಾ.ರಾ.ಮಹೇಶ್
ಕಾಂಗ್ರೆಸ್ ನಾಯಕರ ಸಂಪರ್ಕಕ್ಕೆ ಸಿಗದ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ರನ್ನು, 2 ದಿನಗಳ ಹಿಂದೆ ಎಸ್.ಟಿ.ಸೋಮಶೇಖರ್ ಭೇಟಿಯಾಗಿದ್ದರು. ಮೇಯರ್ ಚುನಾವಣೆ ಹಿನ್ನೆಲೆ ಭೇಟಿ ಆಗಿದ್ದರು. ಮೊದಲ ಬಾರಿಗೆ ಬಿಜೆಪಿಯನ್ನು ಪಾಲಿಕೆಯಲ್ಲಿ ಅಧಿಕಾರಕ್ಕೆ ಏರಿಸಬೇಕು ಅಂತ ಭೇಟಿ ಮಾಡಿದ್ದರು ಎಂದು ಹೇಳಲಾಗುತ್ತಿತ್ತು. ಇದೇ ಕಾರಣಕ್ಕಾಗಿ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಅವರನ್ನು ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿಸಿದ್ದಾರೆ ಎನ್ನಲಾಗಿದೆ. ಆದರೆ, ಭೇಟಿಯ ನಡುವೆ ಅವರ ನಡುವೆ ಏನೆಲ್ಲಾ ಮಾತುಕತೆ ನಡೆದಿದೆ ಎಂಬ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಆದರೆ ಇದೀಗ ಕಾಂಗ್ರೆಸ್ ನಾಯಕರ ಸಂಪರ್ಕಕ್ಕೆ ಸಾ.ರಾ.ಮಹೇಶ್ ಸಿಗುತ್ತಿಲ್ಲ ಎಂದು ತಿಳಿದುಬಂದಿದೆ.

ಇದನ್ನೂ ಓದಿ

ನಂಜನಗೂಡು: ಲಂಚ ಸ್ವೀಕರಿಸಿದ ಶಾಲಾ ವಾರ್ಡನ್‌ಗೆ ಜೈಲು ಶಿಕ್ಷೆ

ದೇಹ ಇಲ್ಲೇ ಮಣ್ಣಾದರೂ ಸೈ, ಅಫ್ಘಾನಿಸ್ತಾನವನ್ನು ಬಿಟ್ಟು ಹೋಗುವುದಿಲ್ಲ: ಹಂಗಾಮಿ ಅಧ್ಯಕ್ಷ ಅಮರುಲ್ಲಾ ಸಲೇಹ್

(There are 6 nominations for the Mysuru Mayor Election)