ಮೈಸೂರು, ಫೆಬ್ರವರಿ 14: ಮೈಸೂರು ಜಿಲ್ಲೆಯಲ್ಲಿ ಹುಲಿ (Tiger) ಭೀತಿ ಮುಂದುವರೆದಿದೆ. ಟಿ. ನರಸೀಪುರ ತಾಲ್ಲೂಕಿನ ಬನ್ನೂರು ಪಟ್ಟಣದ ಸೇತುವೆ ಬಳಿ ಹುಲಿ ಪ್ರತ್ಯಕ್ಷವಾಗಿದೆ. ತೋಟಗಾರಿಕೆ ಇಲಾಖೆಯ ಸಂಶೋಧನಾ ಕೇಂದ್ರದ ಬಳಿಯಿರುವ ಕುಮಾರ್ ಎಂಬುವರಿಗೆ ಸೇರಿದ ಜಮೀನಿನಲ್ಲಿ ಕಾಣಿಸಿಕೊಂಡಿದೆ. ಹುಲಿಯನ್ನು ಕಣ್ಣಾರೆ ಕಂಡ ದಿವಾಕರ್ ಎಂಬುವರು ಛಾಯಾಚಿತ್ರ ತೆಗೆದು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ರವಾನೆ ಮಾಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಟಿ ನರಸೀಪುರ ವಲಯದಲ್ಲಿ ವಲಯ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದು, ಒಂದು ಕಡೆ ಹೆಜ್ಜೆ ಗುರುತು ಪತ್ತೆ ಆಗಿದೆ. ಆ ಮೂಲಕ ಹುಲಿ ಬಂದಿರುವುದನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಖಚಿತ ಪಡಿಸಿಕೊಂಡಿಸಿದ್ದಾರೆ. ಕೂಡಲೇ ಸುತ್ತಮುತ್ತಲಿನ ಪ್ರದೇಶದಲ್ಲಿ ಕೂಂಬಿಂಗ್ ಕಾರ್ಯಾಚರಣೆ ಮಾಡಲಾಗಿದೆ.
ಕೊಡಗು: ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ದೇವರಪುರ ಗ್ರಾಮದಲ್ಲಿ ಹುಲಿಯೊಂದು ಎರಡು ಗಬ್ಬದ ಹಸು ಹಾಗೂ ಒಂದು ಎತ್ತನ್ನು ಕೊಂದು ಹಾಕಿರುವಂತಹ ಘಟನೆ ಇತ್ತೀಚೆಗೆ ನಡೆದಿತ್ತು. ಒಂದು ಹಸು ಕಾಣೆಯಾಗಿದ್ದು ಬಹುಶಃ ಭಕ್ಷಿಸಿರುವ ಸಾಧ್ಯತೆ ಇದೆ. ಗ್ರಾಮದ ಟಿಡಿ ಶಿವಕುಮಾರ್ ಎಂಬುವರಿಗೆ ಈ ಹಸುಗಳು ಸೇರಿವೆ. ತೋಟದಲ್ಲಿ ಮೇಯಲು ಬಿಡಲಾಗಿದ್ದ ಹಸುಗಳ ಮೇಲೆ ಹುಲಿ ದಾಳಿ ಮಾಡಿ ಕೊಂದು ಹಾಕಿತ್ತು.
ಇದನ್ನೂ ಓದಿ: ಮೈಸೂರು; ಜಾನುವಾರುಗಳ ಮೇಲೆ ದಾಳಿ ಮಾಡಿ ರೈತರಿಗೆ ಸಂಕಷ್ಟ ತಂದಿದ್ದ ಎರಡು ಚಿರತೆಗಳು ಸೆರೆ
ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿದ್ದು, ಮಹಜರು ಮಾಡದೇ ಹಸುಗಳ ಕಳೇಬರವನ್ನ ಹೂಳಲು ಮುಂದಾಗಿದ್ದರು. ಆದರೆ ಮಾಲಿಕ ಶಿವಕುಮಾರ್ ಅವರ ಒತ್ತಾಯದ ಮೇರೆಗೆ ಮಹಜರು ಮಾಡಿ ಸಂಸ್ಕಾರ ಮಾಡಲಾಗಿದೆ. ಹುಲಿ ದಾಳಿಯಿಂದ ಅಂದಾಜು 1.5 ಲಕ್ಷ ರೂ ನಷ್ಟವಾಗಿತ್ತು.
ಕೊಡಗಿನಲ್ಲಿ ಕಾಫಿ ಕುಯ್ಲಿನ ಸಮಯವಾಗಿದ್ದು ಕಾರ್ಮಿಕರೆಲ್ಲ ತೋಟದಲ್ಲಿ ಕೆಲಸದಲ್ಲಿರುತ್ತಾರೆ. ಇಂತಹ ಸಂದಭ್ದಲ್ಲೇ ಹುಲಿ ಹಾಡ ಹಗಲೇ ದಾಳಿ ಮಾಡುತ್ತಿರುವುದು ಜನರ ನಿದ್ದೆ ಗೆಡಿಸಿದೆ. ಅರಣ್ಯ ಇಲಾಖೆ ನಿಷ್ಪತ್ರಯೋಜನವಾಗಿದೆ ಅಂತ ಆಕ್ರೋಶ ಹೊರಹಾಕಿದ್ದರು.
ಇದನ್ನೂ ಓದಿ: ನಲ್ಲಮಲ್ಲ ಅರಣ್ಯದಿಂದ ಕೊಪ್ಪಳಕ್ಕೆ ಹೆರಿಗೆಗೆ ಬರುತ್ತವೆ ಚಿರತೆಗಳು -ಅಚ್ಚರಿಯಾದ್ರು ಇದು ಸತ್ಯ
ದೇವರಪುರ ಗ್ರಾಮವೇನೋ ನಾಗರಹೊಳೆ ಅಭಯಾರಣ್ಯದ ಪಕ್ಕದ್ದಲ್ಲೇ ಬರುತ್ತದೆ. ಆದ್ರೆ ಇದೀಗ ಅರಣ್ಯ ಪ್ರದೇಶದಿಂದ ಹತ್ತಾರು ಕಿಲೋ ಮೀಟರ್ ದೂರದಲ್ಲಿರುವ ಗ್ರಾಮಗಳಲ್ಲೂ ಹುಲಿಗಳು
ಕಾಣಿಸಿಕೊಳ್ಳುತ್ತಿವೆ. ಮಡಿಕೇರಿ ತಾಲ್ಲೂಕಿನ ನೆಲಜಿ ಗ್ರಾಮ ವ್ಯಾಪ್ತಿಯ ಕಾಫಿ ತೋಟವೊನದರಲ್ಲಿ ಕೆಲ ದಿನಗಳ ಹಿಂದೆ ಹುಲಿಯೊಂದು ಕಾಣಿಸಿಕೊಂಡಿದ್ದು ಈ ಭಾಗದ ಜನರಿಗೆ ತೀವ್ರ ಆತಂಕ ತಂದಿದೆ. ಕಾರ್ಮಿಕರು, ಶಾಲಾ ಮಕ್ಕಳು ಮನೆ ಬಿಟ್ಟು ಹೊರ ಬರಲು ಹೆದರುತ್ತಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಕೊಡಗಿನಲ್ಲಿ ನಾಲ್ವರು ವ್ಯಕ್ತಿಗಳು ಹುಲಿಯ ಬಾಯಿಗೆ ಆಹಾರವಾಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.