AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಲ್ಲಮಲ್ಲ ಅರಣ್ಯದಿಂದ ಕೊಪ್ಪಳಕ್ಕೆ ಹೆರಿಗೆಗೆ ಬರುತ್ತವೆ ಚಿರತೆಗಳು -ಅಚ್ಚರಿಯಾದ್ರು ಇದು ಸತ್ಯ

ಅನೇಕ ಪಕ್ಷಿಗಳು ಸಂತಾನೋತ್ಪತ್ತಿಗಾಗಿ ಸಾವಿರಾರು ಕಿಲೋ ಮೀಟರ್ ದೂರ ಹೋಗುವುದನ್ನು ಕೇಳಿದ್ದೇವೆ. ಅದೇ ರೀತಿ ಚಿರತೆಗಳು ತಮ್ಮ ಹೆರಿಗೆಗಾಗಿ ನೂರಾರು ಕಿಲೋ ಮೀಟರ್ ದೂರದಿಂದ ಕೊಪ್ಪಳಕ್ಕೆ ಬರುತ್ತವೆ. ಆಂಧ್ರ ಪ್ರದೇಶದ ನಲ್ಲಮಲ್ಲ ಅರಣ್ಯದಿಂದ ಕೊಪ್ಪಳ, ರಾಯಚೂರು ಭಾಗಕ್ಕೆ ಚಿರತೆಗಳು ಸಂತಾನೋತ್ಪತ್ತಿಗಾಗಿ ಬರ್ತಿವೆ. ಇದು ಅಚ್ಚರಿ ಎನಿಸಿದರು ಸತ್ಯ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ನಲ್ಲಮಲ್ಲ ಅರಣ್ಯದಿಂದ ಕೊಪ್ಪಳಕ್ಕೆ ಹೆರಿಗೆಗೆ ಬರುತ್ತವೆ ಚಿರತೆಗಳು -ಅಚ್ಚರಿಯಾದ್ರು ಇದು ಸತ್ಯ
ನಲ್ಲಮಲ್ಲ ಅರಣ್ಯದಿಂದ ಕೊಪ್ಪಳಕ್ಕೆ ಹೆರಿಗೆಗೆ ಬರುತ್ತವೆ ಚಿರತೆಗಳು
ಸಂಜಯ್ಯಾ ಚಿಕ್ಕಮಠ
| Edited By: ಆಯೇಷಾ ಬಾನು|

Updated on: Feb 14, 2024 | 2:55 PM

Share

ಕೊಪ್ಪಳ, ಫೆ.14: ಕೊಪ್ಪಳ ತಾಲೂಕಿನ ಬಸ್ಸಾಪುರ ಸೇರಿದಂತೆ ಅನೇಕ ಕಡೆ ಮೇಲಿಂದ ಮೇಲೆ ಚಿರತೆಗಳು (Leopard) ಜನರಿಗೆ ಕಾಣಿಸಿಕೊಳ್ಳುತ್ತಿವೆ. ಅದರಲ್ಲೂ ಅಕ್ಟೋಬರ್ ನಿಂದ ಜನವರಿ ವರೆಗೆ ಹೆಚ್ಚಿನ ಚಿರತೆಗಳು ಜನರಿಗೆ ಕಾಣಸಿಗುತ್ತವೆ. ಅದರಲ್ಲೂ ಕಳೆದ ಕೆಲ ದಿನಗಳಿಂದ ಬಸ್ಸಾಪುರ ಗ್ರಾಮದ ಜನರು ಚಿರತೆ ಕಾಟದಿಂದ ಕಂಗಾಲಾಗಿದ್ದರು. ಪ್ರತಿನಿತ್ಯ ಗ್ರಾಮದ ಹೊರವಲಯದ ಬೆಟ್ಟದ ಮೇಲೆ ಚಿರತೆಗಳು ಕಾಣುತ್ತಿದ್ದವು. ಈ ಬಗ್ಗೆ ಅರಣ್ಯ ಇಲಾಖೆಗೆ ಗಮನಕ್ಕೆ ತಂದಿದ್ದ ಸಾರ್ವಜನಿಕರು, ಚಿರತೆ ಹಿಡಿಯುವಂತೆ ಮನವಿ ಮಾಡಿದ್ದರು. ಆದ್ರೆ ಇದೀಗ ಚಿರತೆಗಳು ಕಾಣೋದು ದಿಡೀರನೆ ಕಡಿಮೆಯಾಗಿದೆ. ಜನವರಿ ತಿಂಗಳಲ್ಲಿ ಹೆಚ್ಚಾಗಿ ಕಂಡಿದ್ದ ಚಿರತೆಗಳು ಫೆಬ್ರವರಿ ತಿಂಗಳಲ್ಲಿ ಕಂಡಿಲ್ಲಾ. ಚಿರತೆಗಳು ಕಾಣದೇ ಇರೋದಕ್ಕೆ ಅಚ್ಚರಿಯ ಕಾರಣವನ್ನು ಕೊಪ್ಪಳ (Koppal) ಜಿಲ್ಲೆಯ ಅರಣ್ಯ ಇಲಾಖೆಯ ಅಧಿಕಾರಿಗಳು ನೀಡಿದ್ದಾರೆ.

ದೂರದ ನಲ್ಲಮಲ್ಲದಿಂದ ಕೊಪ್ಪಳ, ರಾಯಚೂರು ಜಿಲ್ಲೆಗೆ ಚಿರತೆಗಳು ಬರಲು ಕಾರಣ, ಇಲ್ಲಿರುವ ಬೆಟ್ಟಗುಡ್ಡಗಳಲ್ಲಿನ ಕಲ್ಲು ಬಂಡೆಗಳು. ಹೀಗಾಗಿ ಚಳಿಗಾಲದ ಸಮಯದಲ್ಲಿ ಆಂಧ್ರ ಪ್ರದೇಶದ ನಲ್ಲಮಲ್ಲ ಅರಣ್ಯ ಪ್ರದೇಶದಿಂದ ಪ್ರತಿವರ್ಷ ಅನೇಕ ಚಿರತೆಗಳು, ಕೊಪ್ಪಳ, ರಾಯಚೂರು ಸೇರಿದಂತೆ ಸುತ್ತಮುತ್ತಲಿನ ಬೆಟ್ಟ, ಗುಡ್ಡಗಳ ಪ್ರದೇಶಕ್ಕೆ ಬರ್ತಾವಂತೆ. ಇನ್ನು ಚಿರತೆಗಳು ಇಲ್ಲಿಗೆ ಬರೋದು ಹೆರಿಗೆಗಾಗಿ. ಇದು ಅಚ್ಚರಿಯಾದ್ರು ಕೂಡಾ ಸತ್ಯ. ಆಂದ್ರಪ್ರದೇಶದಲ್ಲಿರುವ ನಲ್ಲಮಲ್ಲ ಅರಣ್ಯ ಪ್ರದೇಶದಿಂದ ಕೊಪ್ಪಳ ಜಿಲ್ಲೆಗೆ ಸರಿಸುಮಾರು ನಾಲ್ಕು ನೂರು ಕಿಲೋ ಮೀಟರ್ ದೂರವಿದೆ. ಆದ್ರೂ ಕೂಡಾ ಚಿರತೆಗಳು ಪ್ರತಿವರ್ಷ ಚಳಿಗಾಲದ ಸಮಯದಲ್ಲಿ ತುಂಗಭದ್ರಾ ನದಿ ದಂಡೆಯನ್ನು ಹಿಡಿದು ಈ ಭಾಗಕ್ಕೆ ಬಂದು, ಜನವರಿ ಅಂತ್ಯದಲ್ಲಿ ಮತ್ತೆ ತಮ್ಮ ಮೂಲಸ್ಥಳವಾದ ನಲ್ಲಮಲ್ಲ ಅರಣ್ಯಕ್ಕೆ ಹೋಗುತ್ತವೆ.

ಬೆಟ್ಟದ ಮೇಲೆ ಕಂಡು ಬಂದ ಚಿರತೆ

ಇದನ್ನೂ ಓದಿ: ವಿಜಯಪುರ: ಅಕ್ರಮವಾಗಿ ಸಾಗಿಸ್ತಿದ್ದ 110ಕ್ಕೂ ಹೆಚ್ಚು ಗೋವುಗಳ ರಕ್ಷಣೆ; ಓರ್ವನ ಬಂಧನ

ಅಕ್ಟೋಬರ್ ನಿಂದ ಜನವರಿ ವರಗೆ ಕೊಪ್ಪಳ, ರಾಯಚೂರು ಜಿಲ್ಲೆಯಲ್ಲಿರುವ ಕಲ್ಲು ಬಂಡೆಯ ಬೆಟ್ಟಗಳಲ್ಲಿ ಚಿರತೆಗಳು ವಾಸಿಸುತ್ತವೆ. ಯಾಕಂದ್ರೆ ಈ ಭಾಗದ ಕಲ್ಲು ಬಂಡೆಯ ಬೆಟ್ಟಗಳಲ್ಲಿನ ಗುಹೆಗಳು ಚಿರತೆಗಳಿಗೆ ಹೇಳಿ ಮಾಡಿಸಿದಂತಹ ಸ್ಥಳವಾಗಿದೆ. ಇಲ್ಲಿ ಅನೇಕ ಗುಹೆಗಳಿದ್ದು, ಚಿರತೆಯ ಸಂತಾನೋತ್ಪತ್ತಿಗೆ ಪ್ರಶಸ್ತ ಸ್ಥಳವಾಗಿದೆ. ಹೀಗಾಗಿಯೇ ಪ್ರತಿವರ್ಷ ಹೆಣ್ಣು ಚಿರತೆಗಳು ಈ ಭಾಗಕ್ಕೆ ಬಂದು, ಇಲ್ಲಿ ಮರಿ ಹಾಕಿ, ಕೆಲ ಕಾಲವಿದ್ದು, ತಮ್ಮ ಮರಿಗಳ ಸಮೇತ ಮರಳಿ ಹೋಗ್ತಾವೆ. ಇದೇ ಕಾರಣಕ್ಕೆ ಅಕ್ಟೋಬರ್ ನಿಂದ ಜನವರಿ ತಿಂಗಳಲ್ಲಿ ಹೆಚ್ಚಾಗಿ ಚಿರತೆಗಳು ಕಾಣುತ್ತವೆ. ಈ ಬಗ್ಗೆ ಹೆಚ್ಚಿನ ಜನರಿಗೆ ಮಾಹಿತಿ ಇಲ್ಲ. ಹೀಗಾಗಿ ಚಿರತೆ ಕಂಡಾಗ ಭಯ ಪಡುತ್ತಾರೆ ಏಮಧೂ ಕೊಪ್ಪಳ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಣ್ಣ ಹೇಳಿದರು.

ಚಿರತೆಗಳು ದೂರದ ನಲ್ಲಮಲ್ಲ ಅರಣ್ಯದಿಂದ ಕೊಪ್ಪಳ ಜಿಲ್ಲೆಯಲ್ಲಿರುವ ಬೆಟ್ಟಗುಡ್ಡಗಳ ಅರಣ್ಯ ಪ್ರದೇಶಕ್ಕೆ ಬರೋದು ಅಚ್ಚರಿಯ ಸಂಗತಿಯಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಕೂಡಾ ಅನೇಕ ಕಡೆ ಚಿರತೆಗಳು ವಾಸಿಸುತ್ತಿವೆ. ಆದ್ರೆ ನೂರಾರು ಕಿಲೋ ಮೀಟರ್ ದೂರದಿಂದ ಹೆಣ್ಣು ಚಿರತೆಗಳು ಹೆರಿಗೆಗಾಗಿಯೇ ಕೊಪ್ಪಳದ ಕಲ್ಲು ಬಂಡೆಗಳ ಬೆಟ್ಟಕ್ಕೆ ಬರೋದು ಮಾತ್ರ ಅಚ್ಚರಿಯ ವಿಚಾರವಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Follow Us
ಸಂಜಯ್ಯಾ ಚಿಕ್ಕಮಠ
ಸಂಜಯ್ಯಾ ಚಿಕ್ಕಮಠ

ಸಂಜಯ್ಯಾ ಚಿಕ್ಕಮಠ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ರಾಮನಾಳ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 14 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್​ನಿಂದ ಆರಂಭವಾದ ವೃತ್ತಿ ಬದುಕು, ಕಲಬುರಗಿ, ಕೊಪ್ಪಳದಿಂದ ಇದೀಗ ಹುಬ್ಬಳ್ಳಿಗೆ ಬಂದಿದ್ದು, ಉತ್ತರ ಕರ್ನಾಟಕ ಪ್ರಮುಖ ವಾಣಿಜ್ಯ ನಗರ ಹುಬ್ಬಳ್ಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಕೃಷಿ ನನ್ನಿಷ್ಟ.ಆದ್ರೆ ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್