ಮೈಸೂರು ನ.26: ಮೈಸೂರು (Mysore) ತಾಲೂಕಿನ ಬ್ಯಾತಳ್ಳಿ, ಕಡಕೊಳ ಸುತ್ತಮುತ್ತಲಿನ ರೈತರ ಹೊಲದಲ್ಲಿ ಎರಡು ಹುಲಿಗಳು (Tigers) ಕಾಣಿಸಿಕೊಂಡಿದ್ದು ಮೊಬೈಲ್ ಕ್ಯಾಮೆರಾದಲ್ಲಿ ಚಿತ್ರ ಸೆರೆಯಾಗಿದೆ. ಎರಡು ಹುಲಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸ್ಥಳೀಯರು ಎಚ್ಚರಿಕೆಯಿಂದ ಇರುವಂತೆ ಸಂದೇಶ ರವಾನಿಸಲಾಗುತ್ತಿದೆ.
ನಂಜನಗೂಡು ತಾಲೂಕಿನ ಬಳ್ಳೂರ್ ಹುಂಡಿಯಲ್ಲಿ ಹುಲಿ ದಾಳಿಗೆ ಮಹಿಳೆ ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಂಜನಗೂಡು ತಾಲೂಕಿನ ಬಳ್ಳೂರ್ ಹುಂಡಿ, ಮಹಾದೇವನಗರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಧಿಕಾರಿ ಕುಮಾರ್ ಪುಷ್ಕರ್ ಜೊತೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸಭೆ ನಡೆಸಿದರು.
ಹಲವು ದಿನಗಳಿಂದ ನಿರಂತರವಾಗಿ ಹುಲಿ ದಾಳಿಯಾಗಿದೆ. ಅದೇ ಸ್ಥಳದಲ್ಲಿ ಮತ್ತೆ ಮತ್ತೆ ದಾಳಿಯಾಗುತ್ತಿದೆ. ಇಲಾಖೆಯ ಸಿಬ್ಬಂದಿಗಳು ನಿರ್ಲಕ್ಷ ವಹಿಸಿದ್ದೀರಿ ಎಂದು ಗ್ರಾಮಸ್ಥರ ಮುಂದೆ ಶಾಸಕ ದರ್ಶನ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಶಾಸಕರು ಬಿಸಿ ಮುಟ್ಟಿಸಿದ ಬಳಿಕ ಕಾರ್ಯಚರಣೆ ಚುರುಕುಗೊಂಡಿದೆ. ಹುಲಿ ಸೆರೆಗೆ ಇಲಾಖೆ ಈಗಾಗಲೇ 200 ಸಿಬ್ಬಂದಿಗಳು, 3 ಆನೆ ಬಳಸಿ ಬಂಡೀಪುರ ಅರಣ್ಯದ ಹೆಡಿಯಾಲ ವ್ಯಾಪ್ತಿಯಲ್ಲಿ ಕಾರ್ಯಚರಣೆ ನಡೆಸುತ್ತಿದೆ.
ಇದನ್ನೂ ಓದಿ: ಮೈಸೂರು: ನಂಜನಗೂಡಿನ ಬಳ್ಳೂರ್ ಹುಂಡಿಯಲ್ಲಿ ಹುಲಿ ದಾಳಿಗೆ ಮಹಿಳೆ ಬಲಿ
ನಗರದ ವಿಜಯನಗರ ಬಡಾವಣೆಯ ಮನೆಯೊಂದರಲ್ಲಿ ಕಾಣಿಸಿಕೊಂಡ ಅಪರೂಪದ ಬೆಂಗಾಲ್ ಕ್ರೈಟ್ ಹಾವು ಕಾಣಿಸಿಕೊಂಡಿದೆ. ಮಾಹಿತಿ ತಿಳಿದ ಕೂಡಲೇ ಉರಗ ತಜ್ಞ ಅರವಿಂದ್ ಸ್ಥಳಕ್ಕೆ ಆಗಮಿಸಿ ಹಾವು ರಕ್ಷಣೆ ಮಾಡಿ, ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ. ಈ ಹಾವು ಪಾಕಿಸ್ತಾನ, ಬಾಂಗ್ಲಾದೇಶದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:07 am, Sun, 26 November 23