ಕಣ್ಣಾಮುಚ್ಚಾಲೆ ಆಡುವಾಗ ಐಸ್ ಕ್ರೀಮ್ ಬಾಕ್ಸ್‌ನಲ್ಲಿ ಕುಳಿತಿದ್ದ ಇಬ್ಬರು ಬಾಲಕಿಯರು ಉಸಿರುಗಟ್ಟಿ ಸಾವು
ಮಸಗೆ ಗ್ರಾಮದ ನಾಗರಾಜು-ಚಿಕ್ಕದೇವಮ್ಮ ಎಂಬುವರ ಪುತ್ರಿ ಭಾಗ್ಯ (12) ಹಾಗೂ ರಾಜನಾಯಕ -ಗೌರಮ್ಮ ಎಂಬುವರ ಪುತ್ರಿ ಕಾವ್ಯ (7) ಮೃತರು. ತಗಡೂರು ಗ್ರಾಮದ ಹನುಮಂತನಾಯಕ ಅವರ ಐಸ್ ಕ್ರೀಮ್ ಬಾಕ್ಸ್ ನಲ್ಲಿ ಈ ದುರಂತ ನಡೆದಿದೆ. ಕಣ್ಣಾಮುಚ್ಚಾಲೆ ಆಡುತ್ತಾ ಐಸ್ ಕ್ರೀಮ್ ಬಾಕ್ಸ್ ಒಳಗೆ ಅಡಗಿ ಕುಳಿತ ಬಾಲಕಿಯರು ಸುಮಾರು ಅರ್ಧ ಗಂಟೆ ಸಮಯ ಕಳೆದರೂ ಹೊರಬಂದಿಲ್ಲ.
ಮೈಸೂರು: ಮಕ್ಕಳು ಕಣ್ಣಾಮುಚ್ಚಾಲೆ ಆಡುವಾಗ ಐಸ್ ಕ್ರೀಮ್ ಬಾಕ್ಸ್‌ನಲ್ಲಿ ಅಡಗಿ ಕುಳಿತಿದ್ದಾಗ ಇಬ್ಬರು ಬಾಲಕಿಯರು ಉಸಿರುಗಟ್ಟಿ ಕೊನೆಯುಸಿರೆಳೆದಿದ್ದಾರೆ. ಆಟ ಆಡುತ್ತಿದ್ದ ಸಂದರ್ಭದಲ್ಲಿ ಐಸ್ ಕ್ರೀಮ್ ಬಾಕ್ಸ್ ಒಳಗೆ ನತದೃಷ್ಟ ಬಾಲಕಿಯರಿಬ್ಬರೂ ಲಾಕ್ ಆಗಿಬಿಟ್ಟಿದ್ದಾರೆ. ಆ ಐಸ್ ಕ್ರೀಮ್ ಬಾಕ್ಸ್ ಬಾಗಿಲು ತೆರೆಯಲಾಗದೆ ಉಸಿರುಗಟ್ಟಿ ಅಸುನೀಗಿದ್ದಾರೆ ಬಾಲಕಿಯರು. ನಂಜನಗೂಡು ತಾಲೂಕಿನ ಮಸಗೆ ಗ್ರಾಮದಲ್ಲಿ ಈ ಆಕಸ್ಮಿಕ ಘಟನೆ ನಡೆದಿದೆ.
ಮಸಗೆ ಗ್ರಾಮದ ನಾಗರಾಜು-ಚಿಕ್ಕದೇವಮ್ಮ ಎಂಬುವರ ಪುತ್ರಿ ಭಾಗ್ಯ (12) ಹಾಗೂ ರಾಜನಾಯಕ -ಗೌರಮ್ಮ ಎಂಬುವರ ಪುತ್ರಿ ಕಾವ್ಯ (7) ಮೃತರು. ತಗಡೂರು ಗ್ರಾಮದ ಹನುಮಂತನಾಯಕ ಅವರ ಐಸ್ ಕ್ರೀಮ್ ಬಾಕ್ಸ್ ನಲ್ಲಿ ಈ ದುರಂತ ನಡೆದಿದೆ. ಕಣ್ಣಾಮುಚ್ಚಾಲೆ ಆಡುತ್ತಾ ಐಸ್ ಕ್ರೀಮ್ ಬಾಕ್ಸ್ ಒಳಗೆ ಅಡಗಿ ಕುಳಿತ ಬಾಲಕಿಯರು ಸುಮಾರು ಅರ್ಧ ಗಂಟೆ ಸಮಯ ಕಳೆದರೂ ಹೊರಬಂದಿಲ್ಲ. ಬಾಗಿಲು ತೆರೆದು ನೋಡಿದಾಗ ಉಸಿರುಗಟ್ಟಿ ಸಾವನ್ನಪ್ಪಿರುವುದು ಪತ್ತೆಯಾಗಿದೆ. ಈ ಪ್ರಕರಣದ ವಿಚಾರವಾಗಿ ಯಾವುದೇ ದೂರು ದಾಖಲಾಗಿಲ್ಲ. ನಂಜನಗೂಡು ತಾಲ್ಲೂಕಿನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಯಾವುದೇ ದೂರು ದಾಖಲಿಸದೆ ಮೃತ ಬಾಲಕಿಯರಿಬ್ಬರ ಶವಸಂಸ್ಕಾರವನ್ನು ಕುಟುಂಬಸ್ಥರು ನೆರವೇರಿಸಿದ್ದಾರೆ.
ಗಂಡನಿಂದ ಹೆಂಡತಿಗೆ ಕಿರುಕುಳ ಕೈಮೇಲೆ ಕರ್ಪೂರ ಹಚ್ಚಿ ಟಾರ್ಚರ್: ಕೈ ಹಿಡಿದ ಪತ್ನಿಯ ಶೀಲ ಶಂಕಿಸಿ ಅನುಮಾನಗೊಂಡ ಗಂಡ ಕೈಯಲ್ಲಿ ಕರ್ಪೂರ ಹಚ್ವಿಸಿ ಆಣೆ ಪ್ರಮಾಣ ಮಾಡಿಸಿ ಕೈ ಸುಟ್ಟು ಅಮಾನುಷವಾಗಿ ವರ್ತಿಸಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಕೈಯಲ್ಲಿ ಕರ್ಪೂರ ಅಂಟಿಸಿ ಕೈ ಸುಟ್ಟು ಹಾಕಿರುವ ದುಷ್ಟ ಪರಾರಿಯಾಗಿದ್ದಾನೆ. ಕೋಲಾರ ತಾಲ್ಲೂಕಿನ ವೇಮಗಲ್ ಬಳಿಯ ಹಿರೇನಹಳ್ಳಿ ಗ್ರಾಮದ ಆನಂದ್ ಎಂಬುವವನೆ ಈ ದುಷ್ಕೃತ್ಯವೆಸಗಿದೆ ದುಷ್ಟ.
ಕೆ.ಜಿ.ಎಫ್ ತಾಲ್ಲೂಕು ಬಾಣಗೆರೆ ಗ್ರಾಮದ ಮಹಿಳೆ ಪ್ರಮೋಧ ದೈಹಿಕ ಹಿಂಸೆ ನೀಡಿ ದುಷ್ಕೃತ್ಯ ಮೆರೆದಿದ್ದಾನೆ. ಇನ್ನೂ ತನ್ನ ಗಂಡನ ಕಿರುಕುಳ ತಾಳಲಾರದೆ ಇಬ್ಬರು ಮಕ್ಕಳಾದ ಬೇಬಿ ಹಾಗೂ ಅಕ್ಷಿತ್ ಕುಮಾರ್ ಹಾಗೂ ತನ್ನ ತಾಯಿಯೊಂದಿಗೆ ಕಂಗಾಲಾಗಿರುವ ಮಹಿಳೆ ಮನೆ ಬಿಟ್ಟು ಬಂದಿದ್ದಾಳೆ. ಇಬ್ಬರು ಮಕ್ಕಳಿದ್ದರು ಸಹ ಗಂಡ ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದಾನೆ ಎಂದು ಸಂಘಟನೆಗಳು ಹಾಗೂ ಮಹಿಳಾ ಸಾಂತ್ವಾನ ಕೇಂದ್ರದ ಮೊರೆ ಹೋಗಿದ್ದಾಳೆ ಮಹಿಳೆ. ಇನ್ನು ನ್ಯಾಯ ದೊರಕಿಸಿಕೊಡಲು ಅಂಬೇಡ್ಕರ್ ಸೇವಾ ಸಮಿತಿ ಮೊರೆ ಹೋಗಿದ್ದು, ಸಧ್ಯ ಮಹಿಳೆಗೆ ಸಾಂತ್ವಾನ ಹೇಳಿರುವ ಅಂಬೇಡ್ಕರ್ ಸೇವಾ ಸಮಿತಿ ಮುಖಂಡ ಸಂದೇಶ್, ಕುಟುಂಬಕ್ಕೆ ನೆರವಾಗಿ ಕಾನೂನು ಹೋರಾಟಕ್ಕೆ ಮುಂದಾಗಿದ್ದಾನೆ.
Published On - 7:42 pm, Wed, 27 April 22