ಮಹಿಷ ದಸರಾ ಆಚರಣೆ ಉದ್ದೇಶ ತಿಳಿಸಿದ ಉರಿಲಿಂಗ ಪೆದ್ದಿಮಠದ ಜ್ಞಾನ ಪ್ರಕಾಶ ಸ್ವಾಮೀಜಿ

| Updated By: ಆಯೇಷಾ ಬಾನು

Updated on: Oct 08, 2023 | 1:13 PM

ಮಹಿಷ ದಸರಾಗೆ 50 ವರ್ಷ ಹಿನ್ನೆಲೆ ಇರುವುದನ್ನು ಸಮರ್ಥಿಸಿಕೊಂಡ ಉರಿಲಿಂಗ ಪೆದ್ದಿಮಠದ ಸ್ವಾಮೀಜಿ, ಮಂಟೇಲಿಂಗಯ್ಯ 1974 ರಲ್ಲೇ ಮಹಿಷನಿಗೆ ಪೂಜೆ ಸಲ್ಲಿಸಿ ಮಹಿಷ ದಸರಾ ಪ್ರಾರಂಭಿಸಿದ್ದರು. ಸರ್ಕಾರಕ್ಕೂ ಮಹಿಷ ದಸರೆಗೂ ಸಂಬಂಧವಿಲ್ಲ. ಇದನ್ನು ಸರ್ಕಾರಕ್ಕೆ ಟ್ಯಾಗ್ ಮಾಡಬೇಡಿ ಎಂದರು.

ಮಹಿಷ ದಸರಾ ಆಚರಣೆ ಉದ್ದೇಶ ತಿಳಿಸಿದ ಉರಿಲಿಂಗ ಪೆದ್ದಿಮಠದ ಜ್ಞಾನ ಪ್ರಕಾಶ ಸ್ವಾಮೀಜಿ
ಮಹಿಷಾ
Follow us on

ಮೈಸೂರು, ಅ.08: ವಿಶ್ವವಿಖ್ಯಾತ ಮೈಸೂರು ದಸರೆಗೆ (Mysuru Dasara) ದಿನಗಣನೆ ಆರಂಭವಾಗಿದೆ. ಅದಕ್ಕಾಗಿ ಎಲ್ಲ ಸಿದ್ದತೆ ನಡೆದಿದೆ. ಈ ಮಧ್ಯೆ ಮತ್ತೆ ಮಹಿಷ ದಸರಾ (Mahisha Dasara) ಸದ್ದು ಮಾಡುತ್ತಿದೆ. ಅದರಲ್ಲೂ ಅಕ್ಟೋಬರ್ 13 ರಂದು ಮಹಿಷ ದಸರಾ ನಡೆಸಲು ಮಹಿಷಾಸುರ ಮಂಡಳಿ ಆಹ್ವಾನ ಪತ್ರಿಕೆಯನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ಚಾಮುಂಡಿ ಬೆಟ್ಟಕ್ಕೆ (Chamundeshwari Betta) ಮಹಿಷ ಬೆಟ್ಟ (Mahisha Betta) ಅಂತಾ ನಮೂದು ಮಾಡಲಾಗಿತ್ತು. ಈ ವಿಚಾರ ವಿವಾದಕ್ಕೆ ಕಾರಣವಾಗಿತ್ತು. ಈ ಸಂಬಂಧ ಮೈಸೂರಿನಲ್ಲಿ ಉರಿಲಿಂಗ ಪೆದ್ದಿಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದಾರೆ. ಮಹಿಷ ದಸರಾ ಹೆಸರನ್ನು ಮುಂದಿನ ದಿನಗಳಲ್ಲಿ ಬದಲಾಯಿಸುವ ಬಗ್ಗೆ ಚರ್ಚೆ ಮಾಡುತ್ತೇವೆ ಎಂದಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಉರಿಲಿಂಗ ಪೆದ್ದಿಮಠದ ಜ್ಞಾನ ಪ್ರಕಾಶ ಸ್ವಾಮೀಜಿ, ಚಾಮುಂಡಿ ಬೆಟ್ಟವನ್ನು ಮಹಿಷ ಬೆಟ್ಟ ಅಂತಾ ಹಾಕಿರುವುದು ತಪ್ಪು. ಇದನ್ನ ಸರಿಪಡಿಸಲು ಸೂಚಿಸುತ್ತೇನೆ. ನಾವು ದಸರಾಗೆ ಪರ್ಯಾಯವಾಗಿ ಮಹಿಷ ದಸರಾ ಮಾಡುತ್ತಿಲ್ಲ. ಚಾಮುಂಡೇಶ್ವರಿಯನ್ನು ನೆನೆದು ನಾವು ಮಹಿಷ ದಸರಾ ಮಾಡುತ್ತೇವೆ. ಯಾರಿಗೂ ನೋವನ್ನುಂಟು ಮಾಡುವುದು ನಮ್ಮ ಉದ್ದೇಶವಲ್ಲ. ರೈತ ದಸರಾ, ಮಹಿಳಾ ದಸರಾ ರೀತಿ ನಾವು ಮಹಿಷ ದಸರಾ ಮಾಡುತ್ತೇವೆ. ಇದನ್ನು 10 ದಿನಗಳ ಕಾಲ ಆಚರಿಸುವುದಿಲ್ಲ. ಹೀಗಾಗಿ ಮಹಿಷ ಮಹೋತ್ಸವ, ಮಹಿಷಾ ದಿನಾಚರಣೆ ಅಥವಾ ಮಹಿಷಾ ಸಮಾವೇಶ ಹೆಸರಿನಲ್ಲಿ ಇದನ್ನ ಆಚರಿಸುತ್ತೇವೆ. ಬೇರೆ ಸಮಯದಲ್ಲಿ ಆಚರಿಸಲು ಚಿಂತನೆ ನಡೆಸುತ್ತೇವೆ. ಈ ವಿಚಾರವಾಗಿ ನ್ಯಾಯಾಲಯದ ಮೊರೆ ಹೋಗಿರುವುದು ಸಂತೋಷ. ನ್ಯಾಯಾಲಯದ ತೀರ್ಪನ್ನು ಗೌರವಿಸುತ್ತೇವೆ‌. ನ್ಯಾಯಾಲಯಕ್ಕೆ ದಾಖಲೆಗಳನ್ನು ನೀಡುತ್ತೇವೆ ಎಂದರು.

ಇದನ್ನೂ ಓದಿ: ನಾಡದೇವತೆ ನೆಲೆ ನಿಂತ ಚಾಮುಂಡಿ ಬೆಟ್ಟ, ಮಹಿಷ ಬೆಟ್ಟವೇ? ಏನಿದು ವಿವಾದ

ಮಹಿಷ ದಸರಾಗೆ 50 ವರ್ಷ ಹಿನ್ನೆಲೆ ಇರುವುದನ್ನು ಸಮರ್ಥಿಸಿಕೊಂಡ ಉರಿಲಿಂಗ ಪೆದ್ದಿಮಠದ ಸ್ವಾಮೀಜಿ, ಮಂಟೇಲಿಂಗಯ್ಯ 1974 ರಲ್ಲೇ ಮಹಿಷನಿಗೆ ಪೂಜೆ ಸಲ್ಲಿಸಿ ಮಹಿಷ ದಸರಾ ಪ್ರಾರಂಭಿಸಿದ್ದರು. ಸರ್ಕಾರಕ್ಕೂ ಮಹಿಷ ದಸರೆಗೂ ಸಂಬಂಧವಿಲ್ಲ. ಇದನ್ನು ಸರ್ಕಾರಕ್ಕೆ ಟ್ಯಾಗ್ ಮಾಡಬೇಡಿ. ಇಂದು ಸಹ ನಾನು ಸಿಎಂನ್ನು ಬೇರೆ ವಿಚಾರಕ್ಕೆ ಭೇಟಿ ಮಾಡಿದ್ದೆ ಎಂದರು.

ಮೈಸೂರು ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:12 pm, Sun, 8 October 23