ಪಕ್ಕದ ಮನೆಯ ಯುವಕನ ಜೊತೆ ಅಕ್ರಮ ಸಂಬಂಧ! ಮೈಸೂರಿನಲ್ಲಿ ಪತಿಯನೇ ಕೊಂದ ಪತ್ನಿ

| Updated By: sandhya thejappa

Updated on: Jul 09, 2022 | 3:14 PM

9 ವರ್ಷಗಳ ಹಿಂದೆ ಎಚ್.ಡಿ.ಕೋಟೆ ತಾಲೂಕಿನ ಅಗಸನಹುಂಡಿ ಗ್ರಾಮದ ಶಿಲ್ಪಾಳ ಜೊತೆ ಲೋಕಮಣಿ ಮದುವೆಯಾಗಿತ್ತು. ಪಕ್ಕದ ಮನೆ ಯುವಕನ ಜೊತೆ ಮಹಿಳೆ ಅಕ್ರಮ ಸಂಬಂಧ ಹೊಂದಿದ್ದಳಂತೆ. ಈ ಬಗ್ಗೆ ಮನೆಯಲ್ಲಿ ಗಲಾಟೆ ನಡೆದಿತ್ತು.

ಪಕ್ಕದ ಮನೆಯ ಯುವಕನ ಜೊತೆ ಅಕ್ರಮ ಸಂಬಂಧ! ಮೈಸೂರಿನಲ್ಲಿ ಪತಿಯನೇ ಕೊಂದ ಪತ್ನಿ
ಕೊಲೆಯಾದ ಲೋಕಮಣಿ, ಆರೋಪಿ ಶಿಲ್ಪಾ
Follow us on

ಮೈಸೂರು: ಅಕ್ರಮ ಸಂಬಂಧ ಅಡ್ಡಿಯಾಗುತ್ತದೆ ಎಂದು ಪತ್ನಿ (Wife) ತನ್ನ ಪತಿಯನ್ನೇ (Husband) ಕೊಲೆ ಮಾಡಿರುವ ಘಟನೆ ಹುಣಸೂರು ತಾಲೂಕು ಹುಂಡಿಮಾಳ ಗ್ರಾಮದಲ್ಲಿ ನಡೆದಿದೆ. 36 ವರ್ಷದ ಲೋಕಮಣಿ ಕೊಲೆಯಾದ ದುರ್ದೈವಿ. 9 ವರ್ಷಗಳ ಹಿಂದೆ ಎಚ್.ಡಿ.ಕೋಟೆ ತಾಲೂಕಿನ ಅಗಸನಹುಂಡಿ ಗ್ರಾಮದ ಶಿಲ್ಪಾಳ ಜೊತೆ ಲೋಕಮಣಿ ಮದುವೆಯಾಗಿತ್ತು. ಪಕ್ಕದ ಮನೆ ಯುವಕನ ಜೊತೆ ಮಹಿಳೆ ಅಕ್ರಮ ಸಂಬಂಧ ಹೊಂದಿದ್ದಳಂತೆ. ಈ ಬಗ್ಗೆ ಮನೆಯಲ್ಲಿ ಗಲಾಟೆ ನಡೆದಿತ್ತು. ಯಾರಿಗೂ ಹೇಳಬೇಡಿ ಅಂತಾ ಕ್ಷಮೆಯಾಚಿಸಿದ್ದ ಶಿಲ್ಪಾ ನಂತರ ಗಂಡ ಮಲಗಿದ್ದಾಗ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ.

ಹೃದಯಘಾತದಿಂದ ನಿಧನ ಹೊಂದಿದ್ದಾರೆಂದು ಬಿಂಬಿಸಿ ಅಂತ್ಯಕ್ರಿಯೆ ನಡೆಸಿದ್ದರು. ತನಿಖೆ ವೇಳೆ ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಸದ್ಯ ಶಿಲ್ಪಾಳನ್ನು ಹುಣಸೂರು ಪೊಲೀಸರು ವಶಕ್ಕೆ ಪಡೆದಿದ್ದು, ನಾಪತ್ತೆಯಾಗಿರುವ ಯುವಕನಿಗಾಗಿ ಬಲೆ ಬೀಸಿದ್ದಾರೆ.

ಇದನ್ನೂ ಓದಿ: ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಕೊಲೆ ಪ್ರಕರಣ: ಆರೋಪಿಗಳಾದ ಮಹಾಂತೇಶ, ಮಂಜುನಾಥ ಮನೆಯಲ್ಲಿ ಪೊಲೀಸ್ ಶೋಧ

ಇದನ್ನೂ ಓದಿ
Chamrajpet Idgah Maidan: ಜುಲೈ 12ರಂದು ಚಾಮರಾಜಪೇಟೆ ಬಂದ್​​ ನಿಶ್ಚಿತ; ಚಾಮರಾಜಪೇಟೆ ನಾಗರಿಕರ ವೇದಿಕೆ
ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಕೊಲೆ ಪ್ರಕರಣ: ಆರೋಪಿಗಳಾದ ಮಹಾಂತೇಶ, ಮಂಜುನಾಥ ಮನೆಯಲ್ಲಿ ಪೊಲೀಸ್ ಶೋಧ
Causes Of Fever: ಯಾವ್ಯಾವ ಕಾರಣಗಳಿಂದಾಗಿ ಜ್ವರ ಬರಬಹುದು, ಆಯುರ್ವೇದ ಏನು ಹೇಳುತ್ತೆ?
Amarnath cloudburst: ಬಬಲಾದ ಮಠದ ಸ್ವಾಮೀಜಿ ತಂಡಕ್ಕೆ ಶಿವಲಿಂಗ ದರ್ಶನ ಭಾಗ್ಯ, ಶಿವಮೊಗ್ಗ ಮಹಿಳಾ ತಂಡಕ್ಕೆ ದರ್ಶನ ಪಡೆಯದೆ ವಾಪಸಾಗುವ ಅನಿವಾರ್ಯತೆ

ಹೊಟ್ಟೆ ನೋವು ತಾಳಲಾರದೆ ಗೃಹಿಣಿ ಆತ್ಮಹತ್ಯೆ:
ತುಮಕೂರು: ಕುಣಿಗಲ್ ತಾಲೂಕಿನ ಹೊನ್ನೆನಲ್ಲಿ ಗ್ರಾಮದಲ್ಲಿ ಹೊಟ್ಟೆ ನೋವು ತಾಳಲಾರದೆ ಗೃಹಿಣಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 30 ವರ್ಷದ ರಂಜಿತಾ ಆತ್ಮಹತ್ಯೆಗೆ ಶರಣಾದ ಮಹಿಳೆ. ಹೊನ್ನೆನಹಳ್ಳಿ ಮೂಲದ ವೆಂಕಟೇಶ್ ಎಂಬಾತನನ್ನ ಮದುವೆಯಾಗಿದ್ದ ರಂಜಿತಾ ಕಳೆದ ಕೆಲ ದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಇದರಿಂದ ಖಿನ್ನತೆಗೆ ಒಳಗಾಗಿದ್ದರು. ಸದ್ಯ ಘಟನೆ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದ ವ್ಯಕ್ತಿ ಅಂದರ್:
ಮೈ ಮುಟ್ಟಿ ವಿಕೃತಿ ಮೆರೆದಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಜುಲೈ ಮೂರರಂದು ಸದಾಶಿವ ನಗರದಲ್ಲಿ ಸೈಕಲ್ ಜಾಥ ಇತ್ತು. ಈ ಕಾರ್ಯಕ್ರಮದ ನಂತರ ಅರೋಪಿ ಗಂಗಾಧರ್ ತೆರಳುತಿದ್ದ ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಬಗ್ಗೆ ಮಹಿಳೆಯರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಸದ್ಯ ಅರೋಪಿಯನ್ನು ಅರೆಸ್ಟ್ ಮಾಡಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Published On - 3:03 pm, Sat, 9 July 22