ಕಳೆದು ಹೋದ ಬೆಕ್ಕನ್ನು ಹುಡುಕಿ ಕೊಟ್ಟವರಿಗೆ ಸೂಕ್ತ ಬಹುಮಾನ; ಮೈಸೂರಿನಲ್ಲಿ ಜಾಹೀರಾತು ನೀಡಿದ ಮಹಿಳೆ
ಮೈಸೂರಿನ ನಾಲಾ ಬೀದಿಯ ನಿವಾಸಿ ವಿಜಯಲಕ್ಷ್ಮಿ ಎಂಬುವವರು ಬೆಕ್ಕನ್ನು ಪ್ರೀತಿಯಿಂದ ಸಾಕಿದ್ದರು. ಆದರೆ 8 ತಿಂಗಳ ಬೆಕ್ಕು ಕಾಣೆಯಾಗಿದೆ. ಹೀಗಾಗಿ ಬೆಕ್ಕು ಹುಡುಕಿಕೊಡುವಂತೆ ಮಹಿಳೆ ಸ್ಥಳೀಯ ಪತ್ರಿಕೆಯಲ್ಲಿ ಜಾಹೀರಾತು ನೀಡಿದ್ದಾರೆ.
ಮೈಸೂರು: ತಮ್ಮ ಮಕ್ಕಳಷ್ಟೆ ಪ್ರೀತಿಯಿಂದ ಸಾಕಿದ ಪ್ರಾಣಿಗಳಿಗೆ ಏನಾದರೂ ಆದರೆ ಮಾಲೀಕರು ತುಂಬಾ ನೊಂದುಕೊಳ್ಳುತ್ತಾರೆ. ಊಟ ಬಿಟ್ಟು ಯೋಚಿಸುವವರೂ ಇದ್ದಾರೆ. ಈ ನಡುವೆ ಕಣ್ಣು ಮುಂದೆ ಆಟವಾಡುತ್ತಿದ್ದ ಪ್ರಾಣಿ ಕಣ್ಮರೆಯಾದರೆ ಆಘಾತ ಆಗುವುದು. ಮೈಸೂರಿನಲ್ಲಿ ಒಬ್ಬರು ಬೆಕ್ಕನ್ನು (Cat) ಪ್ರೀತಿಯಿಂದ ಮುದ್ದಾಗಿ ಸಾಕಿದ್ದರು. ಆದರೆ ಆ ಬೆಕ್ಕು ಕಳೆದು ಹೋಗಿದೆ. ಹೀಗಾಗಿ ಬೆಕ್ಕಿನ ಮನೆಯವರು ಕಳೆದು ಹೋದ ಬೆಕ್ಕನ್ನು ಹುಡುಕಿಕೊಡುವಂತೆ ಜಾಹೀರಾತು ನೀಡಿದ್ದಾರೆ. ಹುಡುಕಿ ಕೊಟ್ಟವರಿಗೆ ಸೂಕ್ತ ಬಹುಮಾನ (Prize) ನೀಡುವುದಾಗಿ ತಿಳಿಸಿದ್ದಾರೆ.
ಮೈಸೂರಿನ ನಾಲಾ ಬೀದಿಯ ನಿವಾಸಿ ವಿಜಯಲಕ್ಷ್ಮಿ ಎಂಬುವವರು ಬೆಕ್ಕನ್ನು ಪ್ರೀತಿಯಿಂದ ಸಾಕಿದ್ದರು. ಆದರೆ 8 ತಿಂಗಳ ಬೆಕ್ಕು ಕಾಣೆಯಾಗಿದೆ. ಹೀಗಾಗಿ ಬೆಕ್ಕು ಹುಡುಕಿಕೊಡುವಂತೆ ಮಹಿಳೆ ಸ್ಥಳೀಯ ಪತ್ರಿಕೆಯಲ್ಲಿ ಜಾಹೀರಾತು ನೀಡಿದ್ದಾರೆ. ಕೆಂಚು ಬಿಳಿ ಬಣ್ಣದ 8 ತಿಂಗಳ ಬೆಕ್ಕಿನ ಮರಿ ಕಾಣೆಯಾಗಿದೆ. ಹುಡುಕಿ ಕೊಟ್ಟವರಿಗೆ ಸೂಕ್ತ ಬಹುಮಾನ ನೀಡುತ್ತೇವೆ. ನಿಮಗೆ ಸಿಕ್ಕಿ ನೀವೇ ಸಾಕಿಕೊಂಡರು ಪರವಾಗಿಲ್ಲ. ಒಮ್ಮೆ ಅದನ್ನು ನೋಡಿ ಊಟ ಕೊಟ್ಟು ಹೋಗುತ್ತೇನೆ ಅಂತ ಮನವಿ ಮಾಡಿದ್ದಾರೆ.
ಬೆಕ್ಕಿನ ಮರಿ ಇದ್ದಕ್ಕಿದಂತೆ ನಾಪತ್ತೆಯಾಗಿದೆ. ಮನೆಯಲ್ಲಿ ಆಟವಾಡಿಕೊಂಡಿದ್ದ ಬೆಕ್ಕಿನ ಮರಿ ಎಲ್ಲಿ ಹೋಯ್ತು ಅನ್ನೋದೆ ಗೊತ್ತಾಗುತ್ತಿಲ್ಲ. ಚಿನ್ನು ಬೆಕ್ಕಿನ ಮರಿ ಎಂದು ಮನೆಯಿಂದ ಹೊರಗೆ ಹೋಗಿರಲಿಲ್ಲ. ಚಿನ್ನು ಬೆಕ್ಕಿನ ಮರಿ ಹೊರಗೆ ಹೋಗುತ್ತದೆ ಅನ್ನೋ ಕಾರಣಕ್ಕೆ ವಿಜಯಲಕ್ಷ್ಮಿ ಮನೆ ಕಿಟಕಿ ಬಾಗಿಲನ್ನು ಸದಾ ಹಾಕಿರುತ್ತಿದ್ದರು. ಆದರೆ ಅವತ್ತು ಜೋರಾಗಿ ಗಾಳಿ ಬೀಸಿದ ಕಾರಣ ಕಿಟಕಿ ತೆರೆದಿತ್ತು. ಬಹುಶಃ ಅದೇ ಕಿಟಕಿಯಿಂದ ಬೆಕ್ಕಿನ ಮರಿ ಹೊರಗೆ ಹೋಗಿದೆ. ಹೋದ ಬೆಕ್ಕಿನ ಮರಿ ವಾಪಸ್ಸು ಬಂದಿಲ್ಲ. ಈಗ ಬರಬಹುದು ಆಗ ಬರಬಹುದು ಅಂತಾ ಕಾದಿದ್ದ ವಿಜಯಲಕ್ಷ್ಮಿ ಅವರಿಗೆ ನಿರಾಶೆ ಬಿಟ್ಟು ಬೇರೆ ಏನು ಸಿಕ್ಕಿಲ್ಲ. ವಿಜಯಲಕ್ಷ್ಮಿ ಎಲ್ಲಾ ಕಡೆ ಹುಡುಕಾಡಿದ್ದಾರೆಮ ಆದರೆ ಚಿನ್ನು ಬೆಕ್ಕಿನ ಮರಿ ಮಾತ್ರ ಸಿಕ್ಕಿಲ್ಲ. ಕೊನೆಗೆ ವಿಜಯಲಕ್ಷ್ಮಿ ಸ್ಥಳೀಯ ಪತ್ರಿಕೆಯ ಮೊರೆ ಹೋಗಿದ್ದಾರೆ. ಸ್ಥಳೀಯ ಪತ್ರಿಕೆಯಲ್ಲಿ ಜಾಹೀರಾತು ನೀಡಿದ್ದಾರೆ.
ಪರ್ಷಿಯನ್ ಬೆಕ್ಕು ಕಳ್ಳತನ; ಬೆಂಗಳೂರಿನಲ್ಲಿ ಎಫ್ಐಆರ್ ದಾಖಲು: ಈ ಹಿಂದೆ ಬೆಂಗಳೂರಿನಲ್ಲಿ ಬೆಕ್ಕು ಕಳ್ಳತನ ಆಗಿದೆ ಎಂದು ಎಫ್ಐಆರ್ ದಾಖಲಿಸಿರುವ ಘಟನೆ ನಡೆದಿತ್ತು. ಬೆಂಗಳೂರಿನ ಜಯನಗರದ ರಾಜಣ್ಣ ಲೇಔಟ್ ನಿವಾಸಿ ಮಿಸ್ಬಾ ಶರೀಫ್ ಎಂಬ ಮಹಿಳೆ ಬೆಕ್ಕು ಕಳ್ಳತನ ಆಗಿದೆ ಎಂದು ದೂರು ದಾಖಲಿಸಿದ್ದರು.
ದುಬಾರಿ ಬೆಲೆಯ ಪರ್ಷಿಯನ್ ಬೆಕ್ಕು ಕಾಣೆಯಾಗಿದೆ ಎಂದು ಮಿಸ್ಬಾ ಶರೀಫ್ ತಿಲಕನಗರ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದರು. ದುಬಾರಿ ಬೆಲೆಯ ಬೆಕ್ಕು ಜನವರಿ 15 ರಂದು ನಾಪತ್ತೆಯಾಗಿದೆ. ಯಾರೋ ದುಷ್ಕರ್ಮಿಗಳು ಮೇಲ್ಚಾವಣಿಯಿಂದ ಬಂದು ಬೆಕ್ಕನ್ನು ಕಳ್ಳತನ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದರು. ಅಲ್ಲದೆ ಬೆಕ್ಕು ಹುಡುಕಿಕೊಟ್ಟರೆ 35 ಸಾವಿರ ಕೊಡುವುದಾಗಿಯೂ ಮಿಸ್ಬಾರವರು ಬಹುಮಾನ ಘೋಷಣೆ ಮಾಡಿದ್ದರು. ಕಾಣೆಯಾಗಿರುವ ಬೆಕ್ಕು ಉಡುಗೊರೆಯಾಗಿ ಬಂದಿದ್ದರಿಂದ ಆ ಬೆಕ್ಕಿನ ಮೇಲೆ ಹೆಚ್ಚು ಪ್ರೀತಿ ಇಟ್ಟುಕೊಂಡಿರುವ ಮಿಸ್ಬಾ ಶರೀಫ್, ಬೆಕ್ಕು ಇಲ್ಲದೇ ಬದುಕೋದೆ ಇಲ್ಲ ಎಂದು ಪೊಲೀಸರ ಮುಂದೆ ಕಣ್ಣೀರು ಹಾಕಿದ್ದರು.
ಇದನ್ನೂ ಓದಿ
Teddy Day 2022: ಪ್ರೀತಿಯ ಸಂಕೇತವಾಗಿ ನೀವು ನೀಡುವ ಟೆಡ್ಡಿ ಬೇರ್ ಬಣ್ಣ ಯಾವ ಸಂದೇಶ ರವಾನಿಸುತ್ತದೆ ಗೊತ್ತಾ?
Published On - 11:03 am, Thu, 10 February 22