ಮಿತಿ ಮೀರಿರುವ ಅಭಿವೃದ್ಧಿ ವೇಗಕ್ಕೆ ಕಡಿವಾಣ ಹಾಕಿ ಪರಿಸರ ಸಮತೋಲನವನ್ನು ಬೆಟ್ಟದಲ್ಲಿ ಕಾಪಾಡಿಕೊಳ್ಳಬೇಕು ಎನ್ನುವುದು ಕಳಕಳಿ. ಈ ನಿಟ್ಟಿನಲ್ಲಿ ಮೈಸೂರಿನ ಹಲವು ಸಂಘಟನೆಗಳು ಮೈಸೂರು ಗ್ರಾಹಕರ ಪರಿಷತ್ ಸೇರಿದಂತೆ ಹಲವರು ಇದಕ್ಕೆ ಬಲ ನೀಡಿದ್ದಾರೆ. ಈ ಸಹಿ ಆಂದೋಲನಕ್ಕೆ ನಾನು ಕೈಜೋಡಿಸಿದ್ದೇನೆ. ನೀವೂ ಕೈ ಜೋಡಿಸಿ ಬೆಟ್ಟ ಉಳಿಸಿ ಅಂತ ಸಾಮಾಜಿಕ ಜಾಲತಾಣದಲ್ಲಿ ಯದುವೀರ್ ಒಡೆಯರ್ ತಿಳಿಸಿದ್ದಾರೆ.
ನಿರಂತರ ಮಳೆಯಿಂದಾಗಿ ಚಾಮುಂಡಿ ಬೆಟ್ಟ ಕುಸಿಯುತ್ತಿದೆ. ಈ ನಡುವೆ ಸರ್ಕಾರ ಕಾಮಗಾರಿ ಮಾಡಲು ಹೊರಟಿದೆ. ಸರ್ಕಾರದ ನಡೆಗೆ ಇತಿಹಾಸ ತಜ್ಞರು ಮತ್ತು ಸಾರ್ವಜನಿಕರು ಅಸಮಧಾನ ಹೊರಹಾಕಿದ್ದಾರೆ. ಮಾತ್ರವಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಸೇವ್ ಚಾಮುಂಡಿ ಮೂಮೆಂಟ್ ಎಂಬ ಹೆಸರಿನಲ್ಲಿ ಚಾಮುಂಡಿ ಬೆಟ್ಟ ಉಳಿಸಿ ಅಭಿಯಾನ ಶುರುವಾಗಿದೆ. ಈ ಅಭಿಯಾನಕ್ಕೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕೈ ಜೋಡಿಸಿದ್ದಾರೆ.
ಇದನ್ನೂ ಓದಿ
ಕರ್ನಾಟಕ ಸರ್ಕಾರದ ಶುಲ್ಕ ಆದೇಶಕ್ಕೆ ಖಾಸಗಿ ಶಾಲೆಗಳು ಗರಂ; ಕೋರ್ಟ್ ಮೆಟ್ಟಿಲೇರಲು ನಿರ್ಧಾರ
ದೀರ್ಘಾವಧಿ ಹೂಡಿಕೆ ಕುರಿತ ನಮ್ಮ ತಿಳುವಳಿಕೆ ಹೆಚ್ಚಿಸಿಕೊಳ್ಳಬೇಕು ಮತ್ತು ಭಯಮುಕ್ತರಾಗಿ ಹಣ ಹೂಡಬೇಕು: ಡಾ ಬಾಲಾಜಿ ರಾವ್