AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೈಬರ್ ಅಪರಾಧ ತಡೆಗೆ ದಿಟ್ಟ ಹೆಜ್ಜೆ: ಸೈಬರ್ ಕ್ರೈಂ ತಡೆಗೆ ರಾಯಭಾರಿಯಾಗಲು ಸಿದ್ದ ಎಂದ ಯದುವೀರ ಒಡೆಯರ್

ಒಳ್ಳೆಯ ಕೆಲಸಕ್ಕೆ ಸರ್ಕಾರದ ಜೊತೆ ಕೆಲಸ ಮಾಡಲು ನಾನು ಸಿದ್ದ. ಸಮಾಜಮುಖಿ ಕೆಲಸಕ್ಕಾಗಿ ನಾನು ಸರ್ಕಾರದ ಜೊತೆ ಕೈ ಜೋಡಿಸುತ್ತೇನೆ. ನಾನು ಸೈಬರ್ ಅಪರಾಧ ತಡೆಗೆ ರಾಯಭಾರಿ ಆಗಲು ಸಿದ್ದ ಎಂದು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.

ರಾಮ್​, ಮೈಸೂರು
| Edited By: |

Updated on: Aug 13, 2023 | 10:14 AM

Share

ಮೈಸೂರು, ಆ.13: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಿನೇ ದಿನೇ ಸೈಬರ್ ಅಪರಾಧಗಳು(Cyber Crime) ಹೆಚ್ಚುತ್ತಿವೆ. ಜನವರಿಯಿಂದ ಜುಲೈವರೆಗೆ ನಡೆದ ಒಟ್ಟು 63 ಅಪರಾಧ ಪ್ರಕರಣಗಳನ್ನು ಜಿಲ್ಲಾ ಪೊಲೀಸರು(Mysuru Police) ಭೇದಿಸಿದ್ದಾರೆ. ಈ ಪ್ರಕರಣಗಳಲ್ಲಿ 1,34,66,697 ರೂ. ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಇದೆಲ್ಲ ಒಂದು ಕಡೆ ಆದ್ರೆ ಮತ್ತೊಂದೆಡೆ ಜಿಲ್ಲೆಯ ಅಪರಾಧ ಕೃತ್ಯಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್(Yaduveer Krishnadatta Chamaraja Wadiyar) ಅವರು ಅಪರಾಧ ತಡೆಗೆ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ನಾನು ಸೈಬರ್ ಅಪರಾಧ ತಡೆಗೆ ರಾಯಭಾರಿ ಆಗಲು ಸಿದ್ದ ಎಂದು ತಿಳಿಸಿದ್ದಾರೆ.

ಟಿವಿ9 ಜೊತೆ ಮಾತನಾಡಿದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು, ಇಂತಹ ಒಳ್ಳೆಯ ಕೆಲಸಕ್ಕೆ ಸರ್ಕಾರದ ಜೊತೆ ಕೆಲಸ ಮಾಡಲು ನಾನು ಸಿದ್ದ. ಸಮಾಜಮುಖಿ ಕೆಲಸಕ್ಕಾಗಿ ನಾನು ಸರ್ಕಾರದ ಜೊತೆ ಕೈ ಜೋಡಿಸುತ್ತೇನೆ. ಸರ್ಕಾರ ಈ ಬಗ್ಗೆ ಕೇಳಿದರೆ ಖಂಡಿತಾ ನಾನು ಒಪ್ಪಿಕೊಳ್ಳುತ್ತೇನೆ ಎಂದರು.

ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸೈಬರ್ ಅಪರಾಧ ತಡೆಗೆ ಸೈಬರ್ ವರ್ಸ್ ಪ್ರತಿಷ್ಠಾನ ಆರಂಭ ಮಾಡಿದ್ದಾರೆ. ಈ ಮೂಲಕ ಹಲವು ಕೋರ್ಸ್‌ಗಳನ್ನು ಆರಂಭಿಸಿದ್ದಾರೆ. ಸೈಬರ್ ವರ್ಸ್ ಪ್ರತಿಷ್ಠಾನದ ಮೂಲಕ ಶಿಕ್ಷಕರಿಗಾಗಿ ಒಂದು ದಿನದ ಉಚಿತ ಸೈಬರ್ ಹೈಜಿನ್ ಕಾರ್ಯಕ್ರಮ ನಡೆಸಲು ಮುಂದಾಗಿದ್ದಾರೆ. ಎಲ್ಲರೂ ಹೆಚ್ಚಾಗಿ ಮೊಬೈಲ್ ಕಂಪ್ಯೂಟರ್ ಬಳಸುತ್ತಾರೆ. ಇದರಿಂದ ಆಗುವ ಸೈಬರ್ ಅಪರಾಧಗಳು ಹಾಗೂ ಅದನ್ನು ತಡೆಗಟ್ಟುವ ಬಗ್ಗೆ ಜಾಗೃತಿ ಮೂಡಿಸಬೇಕು. 7 ವರ್ಷದ ಮಕ್ಕಳಿಗೂ ಅರಿವು ಮೂಡಿಸುವ ಅಗತ್ಯತೆ ಇದೆ. ಇದು ಶಿಕ್ಷಣ ಕ್ಷೇತ್ರದಿಂದಲೇ ಆರಂಭವಾಗಬೇಕು. ಅದಕ್ಕಾಗಿ ಶಿಕ್ಷಕರಿಗೆ ಈ ಬಗ್ಗೆ ತರಬೇತಿ ನೀಡಲು ಮುಂದಾಗಿದ್ದೇವೆ. ಶಿಕ್ಷಕರಿಗೆ ತಿಳುವಳಿಕೆ ಇದ್ದರೆ ಮಕ್ಕಳಿಗೂ ತಿಳಿಸುತ್ತಾರೆ. ತಂತ್ರಜ್ಞಾನ ತುಂಬಾ ಒಳ್ಳೆಯದು. ಆದರೆ ಕೆಲವು ದುಷ್ಟ ಪ್ರವಾಹಗಳಿಂದ ಅನಾಹುತ ಆಗುತ್ತಿದೆ. ಪ್ರತಿಷ್ಠಾನದ ಮೂಲಕ ಸಮಾಜದ ಪ್ರತಿಯೊಬ್ಬರಿಗೆ ಸೈಬರ್ ಭದ್ರತೆ ಬಗ್ಗೆ ಜಾಗೃತಿ‌ ಮೂಡಿಸುತ್ತೇವೆ. ಸೈಬರ್‌ ಮೂಲಕ ನನಗೆ ಯಾವುದೇ ರೀತಿಯ ಮೋಸ ಆಗಿಲ್ಲ. ಆದರೆ ಪ್ರತಿದಿನ ಆಗುವ ಮೋಸಗಳು ನನ್ನ ಗಮನಕ್ಕೆ ಬಂದಿದೆ. ಆ ಕಾರಣಕ್ಕೆ ಮೈಸೂರಿನಲ್ಲಿ ಸೈಬರ್ ಭದ್ರತೆಗೆ ಆದ್ಯತೆ ನೀಡಬೇಕು. ಬೆಂಗಳೂರು ಐಟಿ ಹಬ್ ಮೈಸೂರು ಅದಕ್ಕೆ ಹತ್ತಿರದಲ್ಲೇ ಇದೆ. ಒಳ್ಳೆಯ ಸಮಾಜ ಜವಾಬ್ದಾರಿಯುತ ಸಮಾಜ ನಿರ್ಮಣಕ್ಕಾಗಿ ಜಾಗೃತಿ ಮೂಡಿಸುವೆ ಎಂದು ಟಿವಿ9ಗೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.

ಇದನ್ನೂ ಓದಿ: ಚಿಕ್ಕಮಗಳೂರು: ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂಮಿ ಕಬಳಿಕೆ; ಮೂವರು ಅಧಿಕಾರಿಗಳ ವಿರುದ್ಧ ಕ್ರಿಮಿನಲ್​ ಕೇಸ್

ರಾಜಕೀಯಕ್ಕೆ ಎಂಟ್ರಿ ಕೊಡುವ ಬಗ್ಗೆ ಯದುವೀರ್ ಸ್ಪಷ್ಟನೆ

ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ರಾಜಕಾರಣಕ್ಕೆ ಬರುತ್ತಾರೆ. ಮೈಸೂರು ಕೊಡಗು ಕ್ಷೇತ್ರದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ಮಾತು ಆಗಾಗೆ ಕೇಳಿಬರುತ್ತಿದೆ. ಈ ಬಗ್ಗೆ ಯದುವೀರ್ ಸ್ಪಷ್ಟನೆ ನೀಡಿದ್ದಾರೆ. ನನಗೆ ಸದ್ಯ ರಾಜಕಾರಣದಲ್ಲಿ ಯಾವುದೇ ಆಸಕ್ತಿ ಇಲ್ಲ. ನನಗೆ ಬೇರೆ ಬೇರೆ ಜವಾಬ್ದಾರಿ ಇದೆ. ಶಿಕ್ಷಣ ಕ್ಷೇತ್ರ, ಸೈಬರ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ಈ ರೀತಿಯ ಯಾವುದೇ ಚರ್ಚೆ ಆಗಿಲ್ಲ. ಯಾವ ಪಕ್ಷದ ಮಾತುಕತೆ ನಡೆಸಿಲ್ಲ. ಇದು ಕೇವಲ ಊಹಾಪೋಹಗಳು. ಸಮಾಜ ಉತ್ತಮಗೊಳಿಸಲು ರಾಜಕೀಯದಿಂದ‌ ಮಾತ್ರವಲ್ಲ. ಈ ರೀತಿ ಆಲೋಚನೆಯೂ ನಮಗೆ ಇಲ್ಲ. ಬೇರೆ ಬೇರೆ ರೀತಿಯೂ ಸಮಾಜಮುಖಿ ಕೆಲಸ ಮಾಡಬಹುದು. ನನ್ನ ಧ್ಯಾನ ರಾಜಕಾರಣದ ಹೊರತಾಗಿ ಬೇರೆ ರೀತಿ ಸಮಾಜಮುಖಿ ಕೆಲಸ ಮಾಡುವುದಾಗಿದೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದರು.

ಮೈಸೂರು ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ