ಮೈಸೂರು: ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಜ್ಜಿ ಉಮಾ ಗೋಪಾಲರಾಜ ಅರಸು(83) ಅವರು ಬುಧವಾರ ನಿಧನ (passes away) ಹೊಂದಿದ್ದಾರೆ. ಯದುವೀರ ತಂದೆ ಸ್ವರೂಪಾನಂದ ಅರಸು ತಾಯಿ ಉಮಾ ಲಕ್ಷ್ಮೀಪುರಂನ ನಿವಾಸದಲ್ಲಿ ಇಂದು ವಿಧಿವಶರಾಗಿದ್ದಾರೆ. ಉಮಾ ಗೋಪಾಲರಾಜ ಅರಸು ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಕುವೆಂಪುನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಂಜೆ 4.53 ರ ಸುಮಾರಿಗೆ ಕೊನೆಯುಸಿರೆಳೆದ್ದಾರೆ.
ಯದುವೀರ ತಂದೆ ಸ್ವರೂಪಾನಂದ ಅರಸು ತಾಯಿ ಉಮಾ ಗೋಪಾಲರಾಜ ಅರಸು ಅವರು ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಇದನ್ನೂ ಓದಿ: Mysuru News: ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತ್ಯೋತ್ಸವದ ಪ್ರಯುಕ್ತ 12 ಸಾಧಕರಿಗೆ ಪ್ರಶಸ್ತಿ ಪ್ರದಾನ
ದಿವ್ಯಲಕ್ಷ್ಮಿ ಅರಸ್, ಪ್ರಶಾಂತ್ ಗೋಪಾಲ್ ರಾಜ್ ಅರಸ್ ಮತ್ತು ಪ್ರಧಾನ್ ಗೋಪಾಲ್ ರಾಜ್ ಅರಸ್, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಸಂಬಂಧಿಕರು ಮತ್ತು ಸ್ನೇಹಿತರು ದುಃಖದಲ್ಲಿ ಮುಳುಗಿದ್ದಾರೆ.
ಮದನ್ ಗೋಪಾಲ್ ರಾಜ್ ಅರಸ್ ಅವರು ಗುಂಡ್ಲುಪೇಟೆಯ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಬಳಿಯ ಕೋಟೆ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಮೈಸೂರಿನ ಹಿಂದಿನ ಮಹಾರಾಜ ಚಾಮರಾಜ ಒಡೆಯರ್ ಅವರು ಇವರಿಗೆ ಸೇರಿದವರು. ಅವರನ್ನು ಆಗಿನ ರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್ ತಮ್ಮ ಉತ್ತರಾಧಿಕಾರಿಯಾಗಿ ದತ್ತು ಪಡೆದ್ದರು.
ಇದನ್ನೂ ಓದಿ: Chamundeshwari Temple: ತಾಯಿ ಚಾಮುಂಡೇಶ್ವರಿ ವರ್ಧಂತಿ, ಮೈಸೂರಿನಲ್ಲಿ ಮನೆ ಮಾಡಿದ ಸಂಭ್ರಮ
ಮದನ್ ಗೋಪಾಲ್ ರಾಜ್ ಅರಸ್ ಅವರ ಪೂರ್ವಜರು ಚಾಮರಾಜ ಅರಸು ಅವರ ಹಿರಿಯ ಸಹೋದರರು. ಹಳೆಯ ಸಂಪ್ರದಾದಂತೆ ಕುಟುಂಬವು ಗೋಪಾಲಸ್ವಾಮಿ ಬೆಟ್ಟದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ಕೈಗೊಳ್ಳಲಿದೆ.
ಅಜ್ಜಿಯ ಅಗಲಿಕೆಗೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಾಮಾಜಿಕ ಜಾಲತಾಣದ ಮೂಲಕ ಸಂತಾಪ ಸೂಚಿಸಿದ್ದಾರೆ. ‘ನನ್ನ ಅಜ್ಜಿಯವರಾದ ಶ್ರೀಮತಿ ಉಮಾ ಮದನ್ ಗೋಪಾಲರಾಜ್ ಅರಸ್ ಅವರ ನಿಧನದ ಬಗ್ಗೆ ನಿಮಗೆ ತೀವ್ರ ದುಃಖದಿಂದ ತಿಳಿಸಲು ಬಯಸುತ್ತೇನೆ. ಅವರು ಯಾವಾಗಲೂ ಸರಳ, ಕರುಣಾಳು ಮತ್ತು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಅವರು ತಮ್ಮ ಮಕ್ಕಳು, ಮೊಮ್ಮಕ್ಕಳ ವ್ಯಕ್ತಿತ್ವ, ನಡವಳಿಕೆಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಅವರು ನನಗೆ ಮತ್ತು ನನ್ನ ಕುಟುಂಬಕ್ಕೆ ಎಷ್ಟು ಪ್ರಾಮುಖ್ಯವಾಗಿದ್ದರು, ಎಷ್ಟು ಅಮೂಲ್ಯವಾಗಿದ್ದರು ಎಂಬುದನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಅವರ ಅಗಲಿಕೆ ನಮ್ಮ ಜೀವನದಲ್ಲಿ ಶೂನ್ಯವನ್ನು ಸೃಷ್ಠಿಸಿದೆ. ಅವರ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ’. ಓಂ ಶಾಂತಿ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:26 pm, Wed, 12 July 23