ಶೀಘ್ರವೇ ಬೆಂಗಳೂರಿನಲ್ಲಿ ಹಳಿಗಿಳಿಯಲಿದೆ ಮೊದಲ ಚಾಲಕ ರಹಿತ ಮೆಟ್ರೋ: ನಾಳೆ ಟೆಸ್ಟಿಂಗ್

ನಾಳೆಯಿಂದ ನಮ್ಮ ಮೆಟ್ರೋದ ಮೊದಲ ಚಾಲಕ ರಹಿತ ಟೆಸ್ಟಿಂಗ್ ಪ್ರಕ್ರಿಯೆ ನಡೆಯಲಿದೆ. ಆ ಮೂಲಕ ನಮ್ಮ ಮೆಟ್ರೋದ ಚಾಲಕ ರಹಿತ ಟ್ರೈನ್ ಶೀಘ್ರವೇ ರಸ್ತೆಗಿಳಿಯಲಿದೆ. R.V.ರಸ್ತೆಯಿಂದ ಬೊಮ್ಮಸಂದ್ರವರೆಗೆ 18.82 ಕಿ.ಮೀ. ರೈಲು ಚಲಿಸಲಿದೆ. ಹಳದಿ ಮಾರ್ಗದಲ್ಲಿ ಮೆಟ್ರೋದ ಚಾಲಕ ರಹಿತ ಟ್ರೈನ್ ಓಡಾಡಲಿದೆ. ಸದ್ಯ ಚಾಲಕ ರಹಿತ ಮೆಟ್ರೋ ರೈಲು ಹೆಬ್ಬಗೋಡಿ ಡಿಪೋದಲ್ಲಿದೆ. 

ಶೀಘ್ರವೇ ಬೆಂಗಳೂರಿನಲ್ಲಿ ಹಳಿಗಿಳಿಯಲಿದೆ ಮೊದಲ ಚಾಲಕ ರಹಿತ ಮೆಟ್ರೋ: ನಾಳೆ ಟೆಸ್ಟಿಂಗ್
ಚಾಲಕ ರಹಿತ ಟ್ರೈನ್
Updated By: ಗಂಗಾಧರ​ ಬ. ಸಾಬೋಜಿ

Updated on: Mar 06, 2024 | 5:16 PM

ಬೆಂಗಳೂರು, ಮಾರ್ಚ್​​ 6: ನಾಳೆಯಿಂದ ನಮ್ಮ ಮೆಟ್ರೋದ ಮೊದಲ ಚಾಲಕ ರಹಿತ ಟೆಸ್ಟಿಂಗ್ ಪ್ರಕ್ರಿಯೆ ನಡೆಯಲಿದೆ. ಆ ಮೂಲಕ ನಮ್ಮ ಮೆಟ್ರೋ (Namma Metro) ದ ಚಾಲಕ ರಹಿತ ಟ್ರೈನ್ ಶೀಘ್ರವೇ ರಸ್ತೆಗಿಳಿಯಲಿದೆ. ಫೆ.14ರಂದು ಹೆಬ್ಬಗೋಡಿ ಡಿಪೋಗೆ ಚೀನಾದಿಂದ 6 ಬೋಗಿಗಳ ಡ್ರೈವರ್​ಲೆಸ್ ಮೆಟ್ರೋ ರೈಲು ಬಂದಿದ್ದವು. R.V.ರಸ್ತೆಯಿಂದ ಬೊಮ್ಮಸಂದ್ರವರೆಗೆ 18.82 ಕಿ.ಮೀ. ರೈಲು ಚಲಿಸಲಿದೆ. ಹಳದಿ ಮಾರ್ಗದಲ್ಲಿ ಮೆಟ್ರೋದ ಚಾಲಕ ರಹಿತ ಟ್ರೈನ್ ಓಡಾಡಲಿದೆ. ಸದ್ಯ ಚಾಲಕ ರಹಿತ ಮೆಟ್ರೋ ರೈಲು ಹೆಬ್ಬಗೋಡಿ ಡಿಪೋದಲ್ಲಿದೆ.

ಹಳದಿ ಮಾರ್ಗದಲ್ಲಿ ಚಾಲಕ ರಹಿತ ಮೆಟ್ರೋ ಸಂಚರಿಸಲಿದೆ. ಇದಕ್ಕಾಗಿ ನಾಲ್ಕು ತಿಂಗಳ ಕಾಲ 37 ಪರೀಕ್ಷೆಗಳು ನಡೆಯಲಿದೆ. ಬಳಿಕ ಸಂಶೋಧನಾ ವಿನ್ಯಾಸಗಳು ಮತ್ತು ಗುಣಮಟ್ಟ ಸಂಸ್ಥೆ, ರೈಲ್ವೆ ಸುರಕ್ಷತೆಯ ಮುಖ್ಯ ಆಯುಕ್ತರು, ಕಮಿಷನರ್ ಆಫ್ ಮೆಟ್ರೋ ರೈಲ್ವೆ ಸುರಕ್ಷತೆ ಮತ್ತು ರೈಲ್ವೆ ಮಂಡಳಿ ಅನುಮೋದನೆ ನೀಡಲಿದೆ.

ಇದನ್ನೂ ಓದಿ: Namma Metro: ಬೆಂಗಳೂರು ಮೆಟ್ರೋದಲ್ಲಿ ತಪ್ಪಿದ ದೊಡ್ಡ ಅನಾಹುತ, ರಹಸ್ಯವಾಗಿ ಹಳಿ ಬಿರುಕನ್ನು ದುರಸ್ಥಿಗೊಳಿಸಿದ BMRCL

ಹಳದಿ ಮಾರ್ಗ ಪ್ರಮುಖ ಮೆಟ್ರೋ ಕಾರಿಡಾರ್ ಆಗಿದ್ದು, ದಕ್ಷಿಣ ಬೆಂಗಳೂರನ್ನು ಎಲೆಕ್ಟ್ರಾನಿಕ್ ಸಿಟಿಯೊಂದಿಗೆ ಸಂಪರ್ಕಿಸುತ್ತೆ. ಚಾಲಕ ರಹಿತ ಮೆಟ್ರೋ ಅನುಭವಕ್ಕೆ ಸಿಟಿ ಮಂದಿ ಕಾತುರರಾಗಿದ್ದಾರೆ.

ನಮ್ಮ ಮೆಟ್ರೋ ರೈಲಿನಲ್ಲಿ ನಿತ್ಯ ಲಕ್ಷಾಂತರ ಜನರು ಓಡಾಡುತ್ತಾರೆ. ನಮ್ಮ ಮೆಟ್ರೋ ರೈಲಿಗೆ ಸಾಕಷ್ಟು ಬೇಡಿಕೆ ಇದ್ದು, ಇತ್ತೀಚೆಗೆ ಮಾರ್ಗಗಳ ವಿಸ್ತರಣೆ ಆಗಿದೆ. ಅದರ ಬೆನ್ನೆಲ್ಲೇ ಶೀಘ್ರದಲ್ಲೇ ಚಾಲಕ ರಹಿತ ಮೆಟ್ರೋ ರೈಲು ಕಾರ್ಯಾಚರಣೆ ಮಾಡಲಿವೆ.

ಇದನ್ನೂ ಓದಿ: Namma Metro: ತಾಂತ್ರಿಕ ದೋಷ, ನೇರಳೆ ಮಾರ್ಗದ ನಮ್ಮ ಮೆಟ್ರೋ ಸಂಚಾರ ವ್ಯತ್ಯಯ, ಪ್ರಯಾಣಿಕರ ಪರದಾಟ

ಪ್ರಯಾಣಿಕರ ಸಂಖ್ಯೆ ಏರಿಕೆಯಾಗುತ್ತಿರುವುದನ್ನ ಕಂಡ ಬಿಎಂಆರ್​ಸಿಎಲ್, ಬಿಡದಿ ಸೇರಿ ಬೆಂಗಳೂರು ನಗರದಾಚೆಯ ಸಪ್ತ ಊರುಗಳಿಗೆ ಮೆಟ್ರೋ ಸಂಪರ್ಕ ಕಲ್ಪಿಸಲು ಮುಂದಾಗಿದೆ. ಹೀಗಾಗಿ 118 ಕಿ.ಮೀ ಉದ್ದದ ನಾಲ್ಕನೇ ಹಂತದ ಮೆಟ್ರೋ ಸಂಪರ್ಕದ ಕಾರ್ಯ ಸಾಧ್ಯತೆಯ ಅಧ್ಯಯನ ವರದಿಗಾಗಿ ಇತ್ತೀಚೆಗೆ ಟೆಂಡರ್ ಆಹ್ವಾನಿಸಿತ್ತು.

ಮೈಸೂರು ರಸ್ತೆಯ ಚಲ್ಲಘಟ್ಟದಿಂದ ಬಿಡದಿ ತನಕ 15 ಕಿಲೋ ಮೀಟರ್ ವಿಸ್ತರಣೆಗೆ ಪ್ಲಾನ್. ಜೊತೆಗೆ ಕನಕಪುರ ರಸ್ತೆಯ ರೇಷ್ಮೆ ಸಂಸ್ಥೆಯಿಂದ ಹಾರೋಹಳ್ಳಿ ತನಕ‌ 24 ಕಿಲೋ ಮೀಟರ್, ಹಾಗೂ ಬೊಮ್ಮಸಂದ್ರದಿಂದ ಅತ್ತಿಬೆಲೆಗೆ 11 ಕಿಲೋ ಮೀಟರ್ ಮೆಟ್ರೋ ರೈಲು ಸೇವೆ ಕಲ್ಪಿಸಲು ಅಧ್ಯಯನ ನಡೆಸಲಾಗುತ್ತೆ.‌ ಹಾಗೆಯೇ, ಜೆ.ಪಿ.ನಗರ 4ನೇ ಹಂತದಿಂದ ಕೆಂಪಾಪುರ ತನಕ‌ 32.15 ಕಿಲೋ ಮೀಟರ್, ಜೊತೆಗೆ ಸರ್ಜಾಪುರದಿಂದ ಹೆಬ್ಬಾಳ ತನಕ‌ 37 ಕಿಲೋ ಮೀಟರ್, ಹೊಸಹಳ್ಳಿ ಮೆಟ್ರೋ ನಿಲ್ದಾಣದಿಂದ ಕಡಬಗೆರೆಗೆ 12.5 ಕಿಲೋ ಮೀಟರ್, ಹಾಗೂ ಕಾಳೇನ ಅಗ್ರಹಾರದಿಂದ ಆನೇಕಲ್‌, ಅತ್ತಿಬೆಲೆ, ಸರ್ಜಾಪುರ, ವರ್ತೂರು ಮಾರ್ಗವಾಗಿ ಕಾಡುಗೋಡಿ ಟ್ರೀ ಪಾರ್ಕ್‌ವರೆಗೆ 68 ಕಿಲೋ‌ಮೀಟರ್ ರೈಲು ಮಾರ್ಗ ನಿರ್ಮಿಸಲು ಕಾರ್ಯ ಸಾಧ್ಯತಾ ವರದಿ ತಯಾರಿಸಲಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:03 pm, Wed, 6 March 24