ದಾಖಲಾತಿಗಳ ಸಮೇತ ತೆರಳಿ ಎಸ್​ಐಟಿ ಅಧಿಕಾರಿಗಳಿಂದ ನರೇಶ್ ಪತ್ನಿ ಮತ್ತು ತಾಯಿಯ ವಿಚಾರಣೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 24, 2021 | 6:33 PM

ಮಧ್ಯಾಹ್ನ ಎರಡು ಗಂಟೆಯಿಂದ ವಿಚಾರಣೆ ನಡೆಯುತ್ತಿದ್ದು, ಇದುವರೆಗೂ ಮಾಜಿ ಪತ್ರಕರ್ತ ನರೇಶ್ ನಾಪತ್ತೆಯಾಗದ ಹಿನ್ನೆಯಲ್ಲಿ ವಿಚಾರಣೆ ನಡೆಸಿದ ಅಧಿಕಾರಿಗಳು ಪತಿ ನರೇಶ್ ಬಗ್ಗೆ ಮಾಹಿತಿಯನ್ನು ಪಡೆದಿದ್ದಾರೆ. ನರೇಶ್ ನಿಮ್ಮ ಜೊತೆ ಸಂಪರ್ಕದಲ್ಲಿ ಇದಾರ ಎನ್ನುವ ಬಗ್ಗೆ ನರೇಶ್​ ಪತ್ನಿ ಮತ್ತು ತಾಯಿ ಜೊತೆ ಮಹಿಳಾ ಇನ್ಸ್​ಪೆಕ್ಟರ್ ತೀವ್ರ ವಿಚಾರಣೆ ನಡೆಸಿದ್ದಾರೆ.

ದಾಖಲಾತಿಗಳ ಸಮೇತ ತೆರಳಿ ಎಸ್​ಐಟಿ ಅಧಿಕಾರಿಗಳಿಂದ ನರೇಶ್ ಪತ್ನಿ ಮತ್ತು ತಾಯಿಯ ವಿಚಾರಣೆ
SITಯಿಂದ ಮಾಜಿ ಪತ್ರಕರ್ತ ನರೇಶ್ ಪತ್ನಿ ವಿಚಾರಣೆ
Follow us on

ತುಮಕೂರು: ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಸುದ್ದಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿರುವ ಕಿಂಗ್​ಪಿನ್ ನರೇಶ್​ ಪತ್ನಿ ಮತ್ತು ತಾಯಿಯನ್ನು ಇಂದು ತುಮಕೂರು ಜಿಲ್ಲೆಯ ಶಿರಾ ಠಾಣೆಯಲ್ಲಿ ಎಸ್​ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಬೆಂಗಳೂರಿನ ನರೇಶ್ ನಿವಾಸದಲ್ಲಿ ಪತ್ತೆಯಾಗಿದ್ದ ಬಿಲ್​ಗಳು, ಚಿನ್ನ ಖರೀದಿಸಿದ ದಾಖಲೆ ಮತ್ತು ಚಿನ್ನಾಭರಣದ ಬಗ್ಗೆ ದಾಖಲೆ ಸಮೇತ ತೆರಳಿದ್ದ ಎಸ್​ಐಟಿ ಅಧಿಕಾರಿ ಅಂಜುಮಾಲಾ ಅವರು ನರೇಶ್ ಪತ್ನಿಯನ್ನು ವಿಚಾರಣೆ ನಡೆಸಿದ್ದಾರೆ.

ಮಧ್ಯಾಹ್ನ ಎರಡು ಗಂಟೆಯಿಂದ ವಿಚಾರಣೆ ನಡೆಯುತ್ತಿದ್ದು, ಇದುವರೆಗೂ ಮಾಜಿ ಪತ್ರಕರ್ತ ನರೇಶ್ ನಾಪತ್ತೆಯಾಗದ ಹಿನ್ನೆಯಲ್ಲಿ ವಿಚಾರಣೆ ನಡೆಸಿದ ಅಧಿಕಾರಿಗಳು ಪತಿ ನರೇಶ್ ಬಗ್ಗೆ ಮಾಹಿತಿಯನ್ನು ಪಡೆದಿದ್ದಾರೆ. ನರೇಶ್ ನಿಮ್ಮ ಜೊತೆ ಸಂಪರ್ಕದಲ್ಲಿ ಇದಾರ ಎನ್ನುವ ಬಗ್ಗೆ ನರೇಶ್​ ಪತ್ನಿ ಮತ್ತು ತಾಯಿ ಜೊತೆ ಮಹಿಳಾ ಇನ್ಸ್​ಪೆಕ್ಟರ್ ತೀವ್ರ ವಿಚಾರಣೆ ನಡೆಸಿದ್ದಾರೆ.

ಈ ಹಿಂದೆಯೂ ಕೂಡ ರಮೇಶ್ ಜಾರಕಿಹೊಳಿ CD ಪ್ರಕರಣಕ್ಕೆ ಸಂಬಂಧಿಸಿದಂತೆ ಭುವನಹಳ್ಳಿಯಲ್ಲಿ ಎಸ್​ಐಟಿ ಅಧಿಕಾರಿಗಳಿಂದ ಮಾಜಿ ಪತ್ರಕರ್ತ ನರೇಶ್ ಪತ್ನಿ ಹಾಗೂ ಮನೆಯವರನ್ನು ವಿಚಾರಣೆ ನಡೆಸಲಾಗಿತ್ತು. ಇನ್​ಸ್ಪೆಕ್ಟರ್ ಅಂಜುಮಾಲಾ ನಾಯ್ಕ್ ನೇತೃತ್ವದಲ್ಲಿ ವಿಚಾರಣೆ ನಡೆಸಲಾಯಿತು. ಸುಮಾರು 1 ಗಂಟೆ ಕಾಲ ನರೇಶ್ ಪತ್ನಿ ಮತ್ತು ತಾಯಿಯನ್ನು ಅಧಿಕಾರಿಗಳು ವಿಚಾರಣೆಗೆ ಒಳಪಡಸಿದರು.

ಆಗ ಕೂಡ ವಿಚಾರಣೆಗೆ ಹಾಜರಾಗಲು ನರೇಶ್ ಪತ್ನಿಗೆ ನೋಟಿಸ್​ ನೀಡಲಾಗಿತ್ತು. ಆದರೆ, 1 ವರ್ಷದ ಮಗು ಮತ್ತು ನಮ್ಮ ಅತ್ತೆಗೆ ಹುಷಾರಿಲ್ಲ ಎಂದು ಮಾಜಿ ಪತ್ರಕರ್ತನ ಪತ್ನಿ ವಿಚಾರಣೆಗೆ ಬಂದಿರಲಿಲ್ಲ. ಈ ಕುರಿತು, ವಕೀಲರ ಮೂಲಕ ಎಸ್​ಐಟಿಗೆ ಮಾಹಿತಿ ನೀಡಲಾಗಿತ್ತು. ನರೇಶ್ ಪತ್ನಿ ವಿಚಾರಣೆಗೆ ಗೈರಾದ ಹಿನ್ನೆಲೆಯಲ್ಲಿ ಖುದ್ದು ಅಧಿಕಾರಿಗಳೇ ಅವರ ಮನೆಗೆ ಆಗಮಿಸಿ, ವಿಚಾರಣೆ ನಡೆಸಿ, ನರೇಶ್ ಪತ್ನಿ ಹೇಳಿಕೆಯನ್ನು ವಿಡಿಯೋ ರೆಕಾರ್ಡ್​ ಮಾಡಿದರು.

ಇದನ್ನೂ ಓದಿ:

ರಮೇಶ್ ಜಾರಕಿಹೊಳಿ CD ಪ್ರಕರಣ: SITಯಿಂದ ಮಾಜಿ ಪತ್ರಕರ್ತನ ಪತ್ನಿ, ತಾಯಿಯ ವಿಚಾರಣೆ

ಮಂಚದಲ್ಲಿ ಮಂಚದ ಕೆಲಸ ಮಾಡುವುದು ಬಿಟ್ಟು ರಾಜಕೀಯ ಬೇಕಿತ್ತಾ?; ರಮೇಶ್ ಜಾರಕಿಹೊಳಿ ಸಿಡಿ ಬಗ್ಗೆ ಡಿ.ಕೆ.ಶಿವಕುಮಾರ್ ಪ್ರಶ್ನೆ