ನೀರಿನ ಸಮಸ್ಯೆಗೆ ಶಾಶ್ವತವಾಗಿ ತಿಲಾಂಜಲಿ ಹಾಡುವುದಕ್ಕೆ ಮುಂದಾದ ಯಾದಗಿರಿ ರೈತರು..
ಸಂಘದಿಂದ 13.5 ಲಕ್ಷ ರೂ. ಸಹಾಯಧನ ನೀಡಲಾಗಿದ್ದು, ಸಮಿತಿ ಅಧ್ಯಕ್ಷರ ಖಾತೆಗೆ ಜಮಾ ಮಾಡಲಾಗಿದೆ. ಅಧ್ಯಕ್ಷರ ನೇತೃತ್ವದಲ್ಲಿ ಕೆರೆಯ ಹೂಳೆತ್ತುವ ಕಾರ್ಯ ನಡೆಸಲಾಗುತ್ತಿದೆ. ಗ್ರಾಮಸ್ಥರು ಖುದ್ದು ಸಹಕಾರ ನೀಡುತ್ತಿದ್ದು, ಎಲ್ಲಾ ಕೆಲಸ ಬಿಟ್ಟು ಕೆರೆ ಹೂಳೆತ್ತುವ ಕಾರ್ಯದಲ್ಲಿ ತೊಡಗಿದ್ದಾರೆ.
ಯಾದಗಿರಿ: ಜಿಲ್ಲೆಯ ಗುರುಮಠಕಲ್ ತಾಲೂಕಿನ ಕರಣಗಿ ಗ್ರಾಮದಲ್ಲಿ ದಶಕಗಳಿಂದ ಕುಡಿಯುವ ನೀರಿನ ಸಮಸ್ಯೆ ತಾಂಡವವಾಡುತ್ತಿತ್ತು. ಕುಡಿಯುವ ನೀರಿನಿಂದ ಹಿಡಿದು ಬೆಳೆಗೂ ನೀರು ಪೂರೈಸಲು ಗ್ರಾಮಸ್ಥರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಈಗ ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಷೇಮಾಭಿವೃದ್ಧಿ ಸಂಘದ ಸಹಕಾರದಿಂದ ಗ್ರಾಮದಲ್ಲಿ ಹೂಳು ತುಂಬಿ ಹಾಳಾಗಿದ್ದ ಕೆರೆಗೆ ಖುದ್ದು ಗ್ರಾಮಸ್ಥರೆ ಹೂಳು ತೆಗೆದು ನೀರಿನ ಸಮಸ್ಯೆಗೆ ಶಾಶ್ವತವಾಗಿ ತಿಲಾಂಜಲಿ ಹಾಡುವುದಕ್ಕೆ ಮುಂದಾಗಿದ್ದಾರೆ.
ಜಿಲ್ಲೆಯ ಮೂರು ಗ್ರಾಮಗಳಿಗೆ ಕಾರ್ಯ ದಶಕಗಳಿಂದ ಕರಣಗಿ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಹಾಹಾಕಾರ ಎದುರುಸುತ್ತಿದ್ದಾರೆ. ಇತ್ತ ಜಮೀನುಗಳಿಗೆ ಸರಿಯಾದ ನೀರು ಸಿಗದ ಕಾರಣ ಪ್ರತಿ ವರ್ಷ ಬೆಳೆ ಒಣಗಿ ಹೋಗುತ್ತಿವೆ. ಹೀಗಾಗಿ ಕಳೆದ ಐದು ವರ್ಷದಿಂದ ಕ್ಷೇಮಾಭಿವೃದ್ಧಿ ಸಂಘದಿಂದ ಕರಣಗಿ ಗ್ರಾಮಸ್ಥರಿಗೆ ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಕೊನೆಗಾಣಿಸಬೇಕು ಎನ್ನುವ ಕಾರಣಕ್ಕೆ ಜಿಲ್ಲೆಯ ಪ್ರತಿ ತಾಲೂಕಿನ ಒಂದು ಗ್ರಾಮದಲ್ಲಿ ಶಾಶ್ವತ ಕುಡಿಯುವ ನೀರಿನ ಸಮಸ್ಯೆಯನ್ನು ಹೋಗಲಾಡಿಸಲು ಯೋಜನೆ ಮಾಡಲಾಗಿದೆ. ಈ ವರ್ಷವು ಜಿಲ್ಲೆಯ ಮೂರು ಗ್ರಾಮಗಳಿಗೆ ಈ ಕಾರ್ಯ ನಡೆಯುತ್ತಿದೆ. ಗ್ರಾಮದ ಹೊರ ಭಾಗದಲ್ಲಿರುವ ಹುಲಿರಾಯನ ಕೆರೆಯ ಹೂಳೆತ್ತಿದರೆ ಕುಡಿಯುವ ನೀರಿನ ಸಮಸ್ಯೆಯಿಂದ ಹಿಡಿದು ಬೆಳೆಗಳಿಗೂ ನೀರು ಒದಗಿಸಬಹುದಾಗಿದೆ. ಇದೆ ಕಾರಣದಿಂದ ಸಂಘದಿಂದ ಕರಣಗಿ ಗ್ರಾಮಸ್ಥರನ್ನು ಬೇಟಿಯಾಗಿ ಕೆರೆಗೆ ಮರು ಜೀವ ನೀಡುವ ಯೋಜನೆ ಹೇಳಲಾಗಿದೆ. ಗ್ರಾಮಸ್ಥರು ಸಂಘಕ್ಕೆ ಸಂಪೂರ್ಣ ಬೆಂಬಲ ನೀಡಿದ್ದು, 36 ಎಕರೆ ವಿಸ್ತೀರ್ಣವಿರುವ ಈ ಕೆರೆಯ ಹೂಳೆತ್ತುವ ಕಾರ್ಯ ನಡೆಯುತ್ತಿದೆ. ಇದಕ್ಕೆ ಸಂಘದಿಂದ 13.5 ಲಕ್ಷ ರೂ. ಸಹಾಯಧನವಾಗಿ ನೀಡಲಾಗಿದೆ. ಕೆರೆಯ ಹೆಸರಲ್ಲಿ ಸಮಿತಿ ರಚನೆ ಮಾಡಲಾಗಿದ್ದು, ಗ್ರಾಮಸ್ಥರಾದ ರಾಜಶೇಖರರೆಡ್ಡಿ ಎನ್ನುವವರಿಗೆ ಅಧ್ಯಕ್ಷರನ್ನಾಗಿ ನೇಮಿಕ ಮಾಡಿ ಕೆರೆ ಹೂಳೆತ್ತುವ ಜವಾಬ್ದಾರಿಯನ್ನ ನೀಡಲಾಗಿದೆ.
ಕೆರೆಗೆ ಮರು ಜೀವ ಸಂಘದಿಂದ 13.5 ಲಕ್ಷ ರೂ. ಸಹಾಯಧನ ನೀಡಲಾಗಿದ್ದು, ಸಮಿತಿ ಅಧ್ಯಕ್ಷರ ಖಾತೆಗೆ ಜಮಾ ಮಾಡಲಾಗಿದೆ. ಅಧ್ಯಕ್ಷರ ನೇತೃತ್ವದಲ್ಲಿ ಕೆರೆಯ ಹೂಳೆತ್ತುವ ಕಾರ್ಯ ನಡೆಸಲಾಗುತ್ತಿದೆ. ಗ್ರಾಮಸ್ಥರು ಖುದ್ದು ಸಹಕಾರ ನೀಡುತ್ತಿದ್ದು, ಎಲ್ಲಾ ಕೆಲಸ ಬಿಟ್ಟು ಕೆರೆ ಹೂಳೆತ್ತುವ ಕಾರ್ಯದಲ್ಲಿ ತೊಡಗಿದ್ದಾರೆ. ಗ್ರಾಮದಲ್ಲಿರುವ 40 ಕ್ಕೂ ಅಧಿಕ ಟ್ರ್ಯಾಕ್ಟರ್ಗಳು ಹಾಗೂ ಒಂದು ಟಿಪ್ಪರ್ ವಾಹನ ಕೆರೆ ಹೂಳೆತ್ತುವ ಕಾರ್ಯ ನಿಯೋಜಿಸಿದ್ದಾರೆ. ಇನ್ನು ಗ್ರಾಮಸ್ಥರು ಹಿಟಾಚಿ ಮೂಲಕ ಎತ್ತಲಾದ ಫಲವತ್ತಾದ ಹೂಳನ್ನು ಸ್ವತಃ ತಮ್ಮ ಟ್ರ್ಯಾಕ್ಟರ್ಗಳ ಮೂಲಕ ಜಮೀನುಗಳಿಗೆ ಹಾಕಿಸಿಕೊಳ್ಳುತ್ತಿದ್ದಾರೆ. ಇದರಿಂದ ಜಮೀನು ಸಹ ಹೆಚ್ಚು ಫಲವತ್ತತ್ತೆಯಾಗುತ್ತದೆ ಎನ್ನುವುದು ಗ್ರಾಮಸ್ಥರ ಅಭಿಪ್ರಾಯವಾಗಿದೆ. ಹೀಗಾಗಿ ಕಳೆದ 15 ದಿನಗಳಿಂದ ಸ್ವತಃ ಗ್ರಾಮಸ್ಥರು ಕೆರೆಗೆ ಮರು ಜೀವ ನೀಡುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.
ಈಗಾಗಲೇ 36 ಎಕರೆ ಪ್ರದೇಶದ ಕೆರೆಯಲ್ಲಿ 8 ಎಕರೆಯಷ್ಟು ಕೆರೆಯ ಹೂಳನ್ನು ತೆಗೆಯಲಾಗಿದೆ. ಕೆರೆಯ ಹೂಳು ತೆಗೆದರೆ ಅಂತರ್ಜಲ ಮಟ್ಟ ವೃದ್ಧಿಯಾಗುತ್ತದೆ. ಇದರಿಂದ ಗ್ರಾಮದಲ್ಲಿರುವ ಕುಡಿಯುವ ನೀರಿನ ಕೊಳವೆ ಬಾವಿಗಳು ಬತ್ತುವುದಿಲ್ಲ. ಕೆರೆಯಲ್ಲಿ ನೀರು ಶೇಖರಣೆಯಾದರೆ ಮುಂದೆ ಬೆಳೆಗಳಿಗೂ ನೀರು ಪೂರೈಸಬಹುದಾಗಿದೆ. ಕ್ಷೇಮಾಭಿವೃದ್ಧಿ ಸಂಘದಿಂದ ಜಿಲ್ಲೆಯ ಶಹಾಪುರ ತಾಲೂಕಿನ ವನದುರ್ಗ ಕೆರೆ ಹಾಗೂ ಸುರಪುರ ಹುಣಸಗಿ ತಾಲೂಕಿನ ಕೊಡಿಹಾಳ್ ಗ್ರಾಮದಲ್ಲೂ ಸಹ ಹೂಳೆತ್ತುವ ಕಾರ್ಯ ನಡೆಸಲಾಗುತ್ತಿದೆ. ಇದಕ್ಕೆ ಗ್ರಾಮಸ್ಥರು ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ.
ಇದನ್ನೂ ಓದಿ
Health Tips: ತುಂಬ ಒತ್ತಡದಿಂದ ಬಳಲುತ್ತಿದ್ದೀರಾ.. ನಿದ್ದೆಯೂ ಬರುತ್ತಿಲ್ಲವಾ?- ಅಶ್ವಗಂಧ ಬಳಕೆ ಮಾಡಿ ನೋಡಿ..
ಮಂಡ್ಯ ಜನ ತೋರಿಸೋ ಪ್ರೀತಿ ಅದ್ಭುತವೆಂದ ಡಾಲಿ; ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಯುವರತ್ನ ಚಿತ್ರದ ಪ್ರಚಾರ
Published On - 5:55 pm, Wed, 24 March 21