
ಬೆಂಗಳೂರು, ಸೆ.25: ಕರ್ನಾಟಕದಲ್ಲಿ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆಯು ಬಿರುಸಿನಿಂದ ಸಾಗುತ್ತಿದೆ. 2002ರ ನಂತರ ಇದೇ ಮೊದಲ ಬಾರಿಗೆ, 2026ರ ಮತದಾರರ ಪಟ್ಟಿ ತಯಾರಿಯ ಭಾಗವಾಗಿ, ಚುನಾವಣಾ ಆಯೋಗವು ಮತದಾರರ ಮಾಹಿತಿ ಪರಿಷ್ಕರಣೆ ಮಾಡುತ್ತಿದೆ. ಹಲವು ಮತದಾರರಿಗೆ ಎಸ್ಐಆರ್ ನೋಟಿಸ್‌ಗಳು ಬಂದಿದ್ದು, ಇದರಿಂದ ಗೊಂದಲಗಳು ಉಂಟಾಗಿವೆ. ಈ ನೋಟಿಸ್‌ಗಳು ಬರಲು ಕಾರಣಗಳೇನು?, ಇದಕ್ಕೆ ಪ್ರತಿಕ್ರಿಯಿಸುವುದು ಹೇಗೆ? ಹಾಗೂ ಪ್ರಮುಖ ಅರ್ಜಿ ನಮೂನೆಗಳ ಬಗ್ಗೆ ಮಾಹಿತಿ ಪಡೆಯುವ ಬಗ್ಗೆ ಇಲ್ಲಿದೆ ಮಾಹಿತಿ.
ಎಸ್ಐಆರ್ ಎಂದರೆ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ. ಮತದಾರರ ಪಟ್ಟಿಯಲ್ಲಿ ಯಾವುದೇ ತಪ್ಪಾಗದಂತೆ, ನಕಲುಗಳನ್ನು ತೆಗೆದುಹಾಕಲು ಮತ್ತು ಹೊಸ ಅರ್ಹ ಮತದಾರರನ್ನು ಸೇರಿಸಲು ಇದು ನಿರ್ಣಾಯಕ ಪ್ರಕ್ರಿಯೆ. 2026ರ ಮತದಾರರ ಪಟ್ಟಿಯನ್ನು ಅಂತಿಮಗೊಳಿಸುವ ಮೊದಲು, ಸೆಪ್ಟೆಂಬರ್ 5ರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು ಮತ್ತು ನೋಟಿಸ್‌ಗಳನ್ನು ವಿತರಿಸಲಾಗಿತ್ತು. ಈ ಪ್ರಕ್ರಿಯೆಯು ಸೆಪ್ಟೆಂಬರ್ 23ರಂದು ಮುಕ್ತಾಯಗೊಂಡಿದೆ.
ಅರ್ಜಿ ಭರ್ತಿಯಲ್ಲಿ ದೋಷ: ಬಿಎಲ್‌ಒ ಗಳ ಮೂಲಕ ಸಲ್ಲಿಸಿದ ಅರ್ಜಿಯಲ್ಲಿ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡದಿರುವುದು.
2002ರ ಮತದಾರರ ಪಟ್ಟಿಯೊಂದಿಗೆ ಹೊಂದಾಣಿಕೆ ಇಲ್ಲದಿರುವುದು: ನಿಮ್ಮ ಮತದಾರರ ಗುರುತು 2002ರ ಪಟ್ಟಿಯೊಂದಿಗೆ ಹೊಂದಾಣಿಕೆ ಆಗದಿರುವುದು.
ಹೆಸರು ಹೊಂದಾಣಿಕೆ ಇಲ್ಲದಿರುವುದು: ನಿಮ್ಮ ಹೆಸರು ಅಥವಾ ಇತರ ವಿವರಗಳು ಇತರೆ ದಾಖಲೆಗಳೊಂದಿಗೆ ಹೊಂದಾಣಿಕೆಯಾಗದಿರುವುದು.
ಇಂತಹ ಕಾರಣಗಳಿಗಾಗಿ ನೋಟಿಸ್ ಬಂದಿದ್ದರೆ, ಆತಂಕ ಪಡಬೇಕಾಗಿಲ್ಲ. ಇಆರ್‌ಒ ಅನ್ನು ಸಂಪರ್ಕಿಸಿ ಅಗತ್ಯ ದಾಖಲೆಗಳನ್ನು ಒದಗಿಸುವ ಮೂಲಕ ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. ಉದಾಹರಣೆಗೆ, ಬೆಂಗಳೂರಿನಲ್ಲಿ ಸುಮಾರು 45 ಲಕ್ಷ ಜನರಿಗೆ ನೋಟಿಸ್ ಬಂದಿದ್ದು, ಅದರಲ್ಲಿ 13 ಲಕ್ಷ ಜನರು ಈಗಾಗಲೇ ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಿದ್ದಾರೆ.
ಇಲ್ಲಿದೆ ನೋಡಿ ವಿಡಿಯೋ:
ಮತದಾರರ ಪಟ್ಟಿಗೆ ಸಂಬಂಧಿಸಿದ ಯಾವುದೇ ಬದಲಾವಣೆ ಅಥವಾ ಸೇರ್ಪಡೆಗಾಗಿ ಮೂರು ಪ್ರಮುಖ ನಮೂನೆಗಳನ್ನು ಬಳಸಲಾಗುತ್ತದೆ:
ಫಾರಂ 6:
ಫಾರಂ 7:
ಫಾರಂ 8:
ಇದನ್ನೂ ಓದಿ: ‘ಬೆಂಗಳೂರಿಗೆ ಬಂದ ಹಲವು ಶಾಸಕರು ಎರಡೆರಡು ಮದುವೆ ಆಗಿದ್ದಾರೆ’: ತೀವ್ರ ಕುತೂಹಲ ಮೂಡಿಸಿದ ಸಿಎಂ ಡಿಕೆ ಶಿವಕುಮಾರ್ ಹೇಳಿಕೆ
ಸೆಪ್ಟೆಂಬರ್ 23: ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವ ಅಂತಿಮ ದಿನಾಂಕ ಮುಗಿದಿದೆ.
ಅಕ್ಟೋಬರ್ 24: ಈ ದಿನಾಂಕದವರೆಗೂ ಹೊಸದಾಗಿ ಅರ್ಜಿ ಸಲ್ಲಿಸಲು ಅಥವಾ ಹಿಂದಿನ ಗೊಂದಲಗಳನ್ನು ಸ್ಪಷ್ಟಪಡಿಸಿಕೊಳ್ಳಲು ಅವಕಾಶವಿದೆ.
ಅಕ್ಟೋಬರ್ 27: ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು.
ಆಧಾರ್ ಕಾರ್ಡ್
ಎಸ್ಎಸ್ಎಲ್ಸಿ ಮಾರ್ಕ್ಸ್ ಕಾರ್ಡ್
ಫೋಟೋ
ಬಾಡಿಗೆದಾರರರು ಆಗಿದ್ರೆ ಅದರ ದಾಖಲೆಗಳು
ಪ್ರಸ್ತುತ ನಿಮ್ಮಲ್ಲಿರುವ ವೋಟರ್ ಐಡಿ
ನೀವು ವಿದೇಶದಲ್ಲಿದ್ದರೆ ಅಥವಾ ಪ್ರಸ್ತುತ ಲಭ್ಯವಿಲ್ಲದಿದ್ದರೆ, ನಿಮ್ಮ ಕುಟುಂಬದ ಪ್ರಮುಖ ಸದಸ್ಯರು ನಿಮ್ಮ ಪರವಾಗಿ ಅಗತ್ಯ ದಾಖಲೆಗಳೊಂದಿಗೆ ಇಆರ್‌ಒ ಅವರನ್ನು ಸಂಪರ್ಕಿಸಬಹುದು. ಯಾವುದೇ ಗೊಂದಲಗಳಿದ್ದರೆ, ಕೂಡಲೇ ನಿಮ್ಮ ವಾರ್ಡ್ ಅಥವಾ ಬೂತ್ ಮಟ್ಟದ ಇಆರ್‌ಒ ಅನ್ನು ಸಂಪರ್ಕಿಸಿ. ಈ ಪ್ರಕ್ರಿಯೆಯಲ್ಲಿ ಭಾಗವಹಿಸಿ, ಸರಿಯಾದ ದಾಖಲೆಗಳನ್ನು ಒದಗಿಸುವ ಮೂಲಕ ನಿಮ್ಮ ಮತದಾನದ ಹಕ್ಕನ್ನು ಖಚಿತಪಡಿಸಿಕೊಳ್ಳುವುದು ಪ್ರತಿಯೊಬ್ಬ ಕರ್ನಾಟಕದ ನಾಗರಿಕನ ಕರ್ತವ್ಯವಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:13 pm, Fri, 25 September 26