ತಬ್ಲಿಘಿ ವಿಚಾರದಲ್ಲಿ ದ್ವೇಷಪೂರಿತ ವರದಿ ಪ್ರಸಾರ: ಸುವರ್ಣ ನ್ಯೂಸ್, ನ್ಯೂಸ್ 18 ಕನ್ನಡ ವಿರುದ್ಧ ಕಠಿಣ ಕ್ರಮ

| Updated By: ganapathi bhat

Updated on: Jun 18, 2021 | 9:08 PM

ನ್ಯೂಸ್ 18 ಕನ್ನಡದಲ್ಲಿ ಏಪ್ರಿಲ್ 1, 2020ರಂದು ಪ್ರಸಾರವಾಗಿದ್ದ ಕಾರ್ಯಕ್ರಮದ ವಿರುದ್ಧ ಹಾಗೂ ಸುವರ್ಣ ನ್ಯೂಸ್​ನಲ್ಲಿ ಮಾರ್ಚ್ 31, 2020 ರಿಂದ ಏಪ್ರಿಲ್ 4, 2020ರ ವರೆಗೆ ಪ್ರಸಾರವಾಗಿದ್ದ ಕೆಲವು ಕಾರ್ಯಕ್ರಮಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ತಬ್ಲಿಘಿ ವಿಚಾರದಲ್ಲಿ ದ್ವೇಷಪೂರಿತ ವರದಿ ಪ್ರಸಾರ: ಸುವರ್ಣ ನ್ಯೂಸ್, ನ್ಯೂಸ್ 18 ಕನ್ನಡ ವಿರುದ್ಧ ಕಠಿಣ ಕ್ರಮ
ವಾಹಿನಿಗಳ ವಿರುದ್ಧ ಕಠಿಣ ಕ್ರಮ
Follow us on

ದೆಹಲಿ: ಕೊರೊನಾ ಮೊದಲ ಅಲೆಯ ಸಂದರ್ಭದಲ್ಲಿ ತಬ್ಲಿಘಿ ಜಮಾತ್ ವಿಚಾರದಲ್ಲಿ ದ್ವೇಷಪೂರಿತ ವರದಿ ಪ್ರಸಾರ ಮಾಡಿರುವುದನ್ನು ಉಲ್ಲೇಖಿಸಿ ಕನ್ನಡದ ಎರಡು ಖಾಸಗಿ ವಾರ್ತಾ ವಾಹಿನಿಗಳು ಹಾಗೂ ಇಂಗ್ಲಿಷ್​ನ ಒಂದು ನ್ಯೂಸ್ ಚಾನಲ್ ವಿರುದ್ಧ ನೇಷನಲ್ ಬ್ರಾಡ್​ಕ್ಯಾಸ್ಟಿಂಗ್ ಸ್ಟಾಂಡರ್ಡ್ಸ್ ಅಥಾರಿಟಿ (NBSA) ಕ್ರಮ ಕೈಗೊಂಡಿದೆ. ದ್ವೇಷ ಹರಡುವಿಕೆ ವಿರುದ್ಧ 2020ರಲ್ಲಿ ನಡೆದ ಚಳುವಳಿ ಹಾಗೂ ದೂರಿನ ಆಧಾರದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಕೊರೊನಾ ಮೊದಲನೇ ಅಲೆ ಕಂಡುಬಂದ ಸಂದರ್ಭದಲ್ಲಿ ಈ ಖಾಸಗಿ ವಾರ್ತಾ ವಾಹಿನಿಗಳು ತಬ್ಲಿಘಿ ಜಮಾತ್ ಹಾಗೂ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ವರದಿ ಮಾಡಿದ್ದವು. ದ್ವೇಷ ಹರಡುವಿಕೆ ನೆಲೆಯಲ್ಲಿ ಸುದ್ದಿ ನೀಡಿದ್ದವು. ಆದ್ದರಿಂದ ಎನ್​ಬಿಎಸ್​ಎ ಈ ವಾಹಿನಿಗಳ ವಿರುದ್ಧ ಕ್ರಮ ಕೈಗೊಂಡಿದೆ.

ಕ್ಯಾಂಪೇನ್ ಅಗೈನ್ಸ್ಟ್ ಹೇಟ್ ಸ್ಪೀಚ್ (CAHS) ಫೆಬ್ರವರಿ 2020ರಲ್ಲಿ ನಿಯೋಜನೆಗೊಂಡಿದ್ದು, ಮಾಧ್ಯಮದಲ್ಲಿ ವರದಿಯಾಗುವ ಧ್ವೇಷಪೂರಿತ ಸುದ್ದಿಗಳನ್ನು ಗಮನಿಸಿ, ಕ್ರಮ ಕೈಗೊಳ್ಳುತ್ತದೆ. ಇದೀಗ ಸಿಎಎಚ್​ಎಸ್ ದೂರಿನ ಅನ್ವಯ ಒಟ್ಟು ಮೂರು ಸುದ್ದಿ ವಾಹಿನಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಕನ್ನಡದ ನ್ಯೂಸ್ ಚಾನಲ್​ಗಳಾದ ಸುವರ್ಣ ನ್ಯೂಸ್ ಹಾಗೂ ನ್ಯೂಸ್ 18 ಕನ್ನಡ, ಇಂಗ್ಲಿಷ್​ನ ಟೈಮ್ಸ್ ನೌ ವಾಹಿನಿಯ ಮೇಲೂ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ. ನ್ಯೂಸ್ 18 ಕನ್ನಡ ಚಾನಲ್ ಮೇಲೆ 1 ಲಕ್ಷ ಹಾಗೂ ಸುವರ್ಣ ನ್ಯೂಸ್ ಮೇಲೆ 50,000 ದಂಡ ವಿಧಿಸಲಾಗಿದೆ. ಹಾಗೂ ಜೂನ್ 23ರಂದು 9 ಗಂಟೆಯ ನ್ಯೂಸ್​ಗೂ ಮುನ್ನ ಬಹಿರಂಗವಾಗಿ ಕ್ಷಮಾಪಣೆ ಕೋರಬೇಕು ಎಂದು ಕೇಳಲಾಗಿದೆ.

ಎರಡೂ ಚಾನಲ್​ಗಳು ಈ ಕಾರ್ಯಕ್ರಮಕ್ಕೆ ಸಂಬಂಧಿಸಿದ ವರದಿ ಅಥವಾ ವಿಡಿಯೋಗಳು ತಮ್ಮ ವೆಬ್​ಸೈಟ್ ಅಥವಾ ಯೂಟ್ಯೂಬ್​ನಲ್ಲಿ ಇದ್ದರೆ, ಅದನ್ನು ಕೂಡಲೇ ಡಿಲೀಟ್ ಮಾಡಬೇಕು ಹಾಗೂ 7 ದಿನಗಳ ಒಳಗಾಗಿ ಈ ಬಗ್ಗೆ ಲಿಖಿತ ದಾಖಲೆ ಸಲ್ಲಿಸಬೇಕು ಎಂದು ಕೇಳಲಾಗಿದೆ.

ನ್ಯೂಸ್ 18 ಕನ್ನಡದಲ್ಲಿ ಏಪ್ರಿಲ್ 1, 2020ರಂದು ಪ್ರಸಾರವಾಗಿದ್ದ ಕಾರ್ಯಕ್ರಮದ ವಿರುದ್ಧ ಹಾಗೂ ಸುವರ್ಣ ನ್ಯೂಸ್​ನಲ್ಲಿ ಮಾರ್ಚ್ 31, 2020 ರಿಂದ ಏಪ್ರಿಲ್ 4, 2020ರ ವರೆಗೆ ಪ್ರಸಾರವಾಗಿದ್ದ ಕೆಲವು ಕಾರ್ಯಕ್ರಮಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ತಬ್ಲಿಘಿ ಜಮಾತ್​​​ನಲ್ಲಿ ಪಾಲ್ಗೊಂಡಿದ್ದ ವಿದೇಶಿಯರು ತವರಿಗೆ ಮರಳಲು ನೆರವಾಗಿ: ಕೇಂದ್ರಕ್ಕೆ ಸುಪ್ರೀಂಕೋರ್ಟ್ ಸೂಚನೆ

ಕೋವಿಡ್ ಮಾರ್ಗಸೂಚಿ ಉಲ್ಲಂಘನೆ: ತಬ್ಲಿಘಿ ಜಮಾತ್​ನಲ್ಲಿ ಪಾಲ್ಗೊಂಡಿದ್ದ 36 ವಿದೇಶಿಯರು ಆರೋಪ ಮುಕ್ತ

Published On - 5:59 pm, Fri, 18 June 21