ನೇಹಾ ತಂದೆ ನಿರಂಜನ್ ಆಪ್ತ ಸಹಾಯಕನ ಕಿಡ್ನ್ಯಾಪ್‌ಗೆ ಯತ್ನ: ಹುಬ್ಬಳ್ಳಿಯಲ್ಲಿ ಏನಾಗ್ತಿದೆ?
ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣ ದೇಶಾದ್ಯಂತ ಸಾಕಷ್ಟು ಸುದ್ದಿ ಮಾಡಿತ್ತು. ಸದ್ಯ ಮೃತ ನೇಹಾ ತಂದೆ ನಿರಂಜನ್ ಹಿರೇಮಠ ಅವರ ಆಪ್ತ ಸಹಾಯಕ ವಿಜಯ್ ಅಲಿಯಾಸ್ ಈರಣ್ಣ ಅವರನ್ನು ಮೂವರ ಗ್ಯಾಂಗ್ನಿಂದ ಅಪಹರಣಕ್ಕೆ ಯತ್ನಿಸಿರುವಂತಹ ಘಟನೆ ಇಂದು ಮುಂಜಾನೆ ನಗರದಲ್ಲಿ ನಡೆದಿದೆ. ಹುಬ್ಬಳ್ಳಿಯ ಘಂಟಿಕೇರಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹುಬ್ಬಳ್ಳಿ, ಜೂನ್ 19: ಪಾಲಿಕೆ ಸದಸ್ಯ ನೇಹಾ (Neha) ತಂದೆ ನಿರಂಜನ್ ಹಿರೇಮಠ ಆಪ್ತ ಸಹಾಯಕ ವಿಜಯ್ ಅಲಿಯಾಸ್ ಈರಣ್ಣ ಅವರನ್ನು ಮೂರವ ಗ್ಯಾಂಗ್ನಿಂದ ಅಪಹರಣಕ್ಕೆ (kidnap) ಯತ್ನಿಸಿರುವಂತಹ ಘಟನೆ ಇಂದು ಮುಂಜಾನೆ ನಡೆದಿದೆ. ಬೆಳಿಗ್ಗೆ 5 ಗಂಟೆ ಸುಮಾರಿಗೆ ಕರೆಂಟ್ ಬಾಕ್ಸ್ ಬಂದ್ ಮಾಡಿ ವಾಲ್ವೇಕರ್ ಗಲ್ಲಿ ಗಜಾನನ ಬ್ಯಾಂಕ್ ಎದುರುಗಡೆ ಅಪಹರಣಕ್ಕೆ ಯತ್ನಿಸಲಾಗಿದೆ. ಕಾರಲ್ಲಿ ಬಂದ ಮೂವರು ಕಾರು ಹತ್ತುವಂತೆ ಒತ್ತಾಯಿಸಿದ್ದಾರೆ. ನಾನು ಯಾಕೆ ಕಾರ್ ಹತ್ತುಬೇಕೆಂದು ವಿಜಯ್ ಭಯಗೊಂಡು ಜೇಬಿನಲ್ಲಿದ್ದ ಮೊಬೈಲ್ ತೆಗೆದು ವಿಡಿಯೋ ಮಾಡಲು ಮುಂದಾಗಿದ್ದಾರೆ. ಬಳಿಕ ಮೂವರು ವಿಜಯ್ ಕೈಯಿಂದ ತಪ್ಪಿಸಿಕೊಂಡ ಓಡಿ ಹೋಗಿದ್ದಾರೆ. ಹುಬ್ಬಳ್ಳಿಯ ಘಂಟಿಕೇರಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬಳಿಕ 112 ನಂಬರ್ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿಜಯ್ ನನ್ನು ಸೇಫ್ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ. ಸದ್ಯ ಘಟನೆ ಕುರಿತು ಪರಿಶೀಲನೆ ಮಾಡಲಾಗುತ್ತಿದೆ.
ಇದನ್ನೂ ಓದಿ: ನೇಹಾ, ಅಂಜಲಿ ಕೊಲೆಯಿಂದ ಹುಬ್ಬಳ್ಳಿಯ ವಿದ್ಯಾರ್ಥಿನಿಯರ ಮೇಲೆ ಬೀರಿದ ಪ್ರಭಾವ ಹೀಗಿದೆ ಟಿವಿ9 ವಿಶೇಷ ಸಂದರ್ಶನ
ಕಿಡ್ನಾಪ್ ಮಾಡಲು ಯತ್ನಿಸಿದ ಘಟನೆ ಬ್ಯಾಂಕ್ನ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಅಪಹರಣ ಮಾಡಲು ಬಂದವರು ಯಾರು? ಯಾವ ಕಾರಣಕ್ಕೆ ಅಪಹರಣ ಮಾಡಲು ಯತ್ನಿಸಿದರು? ಎಲ್ಲವನ್ನೂ ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ.
ನಮಗೆ ಆತಂಕ ಶುರುವಾಗಿದೆ ಎಂದ ನಿರಂಜನ ಹಿರೇಮಠ
ಹುಬ್ಬಳ್ಳಿಯಲ್ಲಿ ಪಾಲಿಕೆ ಕಾಂಗ್ರೆಸ್ ಸದಸ್ಯ ನಿರಂಜನ ಹಿರೇಮಠ ಪ್ರತಿಕ್ರಿಯಿಸಿದ್ದು, ಬೀದಿ ದೀಪ ಆಫ್ ಮಾಡಲು ಹೋದಾಗ ನನ್ನ ಆಪ್ತ ಸಹಾಯಕ ಅಪಹರಣ ಮಾಡಲು ಪ್ರಯತ್ನ ಮಾಡಿದ್ದಾರೆ. ಮೂವರು ಬಂದು ಅಟ್ಯಾಕ್ ಮಾಡಿ ಅಪಹರಣಗೆ ಯತ್ನ ಮಾಡಿದ್ದಾರೆ. ಈ ಸಂಬಂಧ ಈಗಾಗಲೇ ಪೊಲೀಸರು ತನಿಖೆ ಆರಂಭಿಸಿದ್ದಾರೆ. ನಮಗೆ ಆತಂಕ ಶುರುವಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ನೇಹಾ ಜಾತಿ ಸರ್ಟಿಫಿಕೇಟ್ ವೈರಲ್! ಹಾಗಾದ್ರೆ ಇದ್ದದ್ದು ಎಲ್ಲಿ? ಅಂಜಲಿ ಕೊಲೆ ಕೇಸ್ಗೂ ಲಿಂಕ್
ಏಕೆ ನಿರಂಜನ ಹಿರೇಮಠ ಮತ್ತು ಆಪ್ತ ಸಹಾಯಕನ ಮೇಲೆ ಕಣ್ಣು. ಕಳೆದ ಕೆಲ ದಿನಗಳ ಹಿಂದೆಯೂ ಓರ್ವ ನಮ್ಮ ಮನೆ ತನಕ ಬಂದಿದ್ದ. ಅವನ ಮೇಲೂ ಕೂಡ ಕೇಸ್ ದಾಖಲಿಸಿದ್ದೇವೆ. ಮೂರು ಜನ ಇವತ್ತು ಅಪಹರಣ ಮಾಡಲು ಪ್ರಯತ್ನ ಮಾಡಿದ್ದಾರೆ. ಕಾಣದ ಕೈಗಳ ಕೈವಾಡ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ: ರೇಣುಕಾ ಸುಕುಮಾರ್
ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ್ ಮಾಹಿತಿ ನೀಡಿದ್ದು, ನೇಹಾ ತಂದೆ ನಿರಂಜನ್ ಆಪ್ತ ಸಹಾಯಕನ ಕಿಡ್ನ್ಯಾಪ್‌ಗೆ ಯತ್ನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಈ ಬಗ್ಗೆ ಘಂಟಿಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.