ಗೊಂದಲದ ಗೂಡಾದ ರಾಷ್ಟ್ರೀಯ ಅರ್ಹತಾ ಪರೀಕ್ಷೆ ಎನ್​ಇಟಿ, ಪರಿಕ್ಷಾರ್ಥಿಗಳ ಕಣ್ಣೀರು

ವರ್ಷದಲ್ಲಿ 4 ಬಾರಿ ಮುಂದೂಡಲಾಗಿದ್ದ ಎನ್​ಇಟಿ ಪರೀಕ್ಷೆಯನ್ನು ಇದೀಗ ಏಕಾಏಕಿ ನಿಗದಿ ಮಾಡಿರುವುದರಿಂದ ಅಭ್ಯರ್ಥಿಗಳು ಗೊಂದಲಕ್ಕೆ ಒಳಗಾಗಿದ್ದು, ಕಣ್ಣೀರು ಸುರಿಸುತ್ತಿದ್ದಾರೆ.

ಗೊಂದಲದ ಗೂಡಾದ ರಾಷ್ಟ್ರೀಯ ಅರ್ಹತಾ ಪರೀಕ್ಷೆ ಎನ್​ಇಟಿ, ಪರಿಕ್ಷಾರ್ಥಿಗಳ ಕಣ್ಣೀರು
ಗೊಂದಲದ ಗೂಡಾದ ರಾಷ್ಟ್ರೀಯ ಅರ್ಹತಾ ಪರೀಕ್ಷೆ ಎನ್​ಇಟಿ
Image Credit source: सोशल मीडिया
Edited By: Rakesh Nayak Manchi

Updated on: Oct 11, 2022 | 12:36 PM

ಹಾಸನ: ವರ್ಷದಲ್ಲಿ 4 ಬಾರಿ ಮುಂದೂಡಿಕೆಯಾಗಿದ್ದ ರಾಷ್ಟ್ರೀಯ ಅರ್ಹಾತಾ ಪರೀಕ್ಷೆ (NET)ಗೆ ಕೊನೆಗೂ ದಿನಾಂಕ ನಿಗದಿಯಾಗಿದೆ. ಆದರೆ ತಕ್ಷಣಕ್ಕೆ ಪರೀಕ್ಷೆ ನಿಗದಿ ಮಾಡಿರುವುದು ಅಭ್ಯರ್ಥಿಗಳನ್ನು ಗೊಂದಲಕ್ಕೆ ತಳ್ಳಿದ್ದು, ಪರೀಕ್ಷೆ ಬಗ್ಗೆ ಸೂಕ್ತ ಮಾಹಿತಿ ಸಿಗದೆ ಕಣ್ಣೀರು ಸುರಿಸುತ್ತಿದ್ದಾರೆ. ರಾಷ್ಟ್ರೀಯ ಅರ್ಹಾತಾ ಪರೀಕ್ಷೆಯನ್ನು ಅ.14ರಂದು ನಿಗದಿ ಮಾಡಲಾಗಿದ್ದು, ಪರೀಕ್ಷಾ ಕೇಂದ್ರಗಳನ್ನು ಬದಲಾವಣೆ ಮಾಡಲಾಗಿದೆ. ಈ ಅವ್ಯವಸ್ಥೆ ಕುರಿತು ಹಾಸನದ ಪರೀಕ್ಷಾರ್ಥಿ ನಾಗಶ್ರೀ ಅಳಲು ತೋಡಿಕೊಂಡಿದ್ದಾರೆ. ನಾವು ಆಯ್ಕೆ ಮಾಡಿದ್ದ ಪರೀಕ್ಷಾ ಕೇಂದ್ರ ಬದಲಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಜ್ಯೂನಿಯರ್ ರೀಸರ್ಚ್ ಫೆಲೋಷಿಪ್ ಪಿಎಚ್​ಡಿಗಾಗಿ ಯುಜಿಸಿ ಅರ್ಜಿ ಆಹ್ವಾನಿಸಲಾಗಿತ್ತು. ಈ ಪರೀಕ್ಷೆ ನಾಲ್ಕು ಬಾರಿ ಮುಂದೂಡಿಕೆ (ಜೂನ್, ಜುಲೈ, ಅಗಸ್ಟ್, ಸೆಪ್ಟೆಂಬರ್)ಯಾಗಿ ಇದೀಗ ಅ.14ಕ್ಕೆ ನಿಗದಿಯಾಗಿದ್ದು, ಯಾವುದೇ ಸುಳಿವನ್ನು ನೀಡದೆ ಪರೀಕ್ಷೆಗೆ ಮೂರು ದಿನ ಬಾಕಿ ಇರುವಾಗಲೇ ಪರೀಕ್ಷಾ ಕೇಂದ್ರಗಳನ್ನು ಬದಲಾಯಿಸಿರುವುದು ಬೇಜವಾಬ್ದಾರಿತನ ಎಂದು ಪರೀಕ್ಷಾರ್ಥಿಗಳು ಕಣ್ಣೀರು ಸುರಿಸುತ್ತಿದ್ದಾರೆ.

ಬೆಂಗಳೂರು, ಮೈಸೂರು, ಮಂಗಳೂರು ಪರೀಕ್ಷಾ ಕೇಂದ್ರಗಳನ್ನು ಆಯ್ಕೆ ಮಾಡಿಕೊಂಡಿದ್ದ ನಾಗಶ್ರೀ, ತಮ್ಮ ಕೇಂದ್ರ ಬದಲಾವಣೆ ಬಗ್ಗೆ ಅಳಲುತೋಡಿಕೊಂಡಿದ್ದಾರೆ. ನಾವು ಆಯ್ಕೆ ಮಾಡಿದ್ದ ಪರೀಕ್ಷಾ ಕೇಂದ್ರ ಬದಲಿಸಿ ಬೆಳಗಾವಿಗೆ ನಿಗದಿ ಮಾಡಿದ್ದಾರೆ. ಪರೀಕ್ಷೆ ಮೂರು ದಿನ ಬಾಕಿ ಇರುವಾಗ ಪರೀಕ್ಷಾ ಕೇಂದ್ರ ಬದಲಿಸಿದ್ದಾರೆ. ಬೆಳಗಾವಿಯಲ್ಲಿ ಯಾವ ಶಾಲೆ ಅಥವಾ ಕಾಲೇಜಿನಲ್ಲಿ ಪರೀಕ್ಷಾ ಕೇಂದ್ರ ಎಂಬ ಮಾಹಿತಿಯೂ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಆಗಿರುವ ಅವ್ಯವಸ್ಥೆ ಸರಿಮಾಡಿ ಮುಕ್ತವಾಗಿ ಪರೀಕ್ಷೆ ಎದುರಿಸಲು ಅವಕಾಶ ನೀಡಿ ಎಂದು ಅಭ್ಯರ್ಥಿಗಳು ಒತ್ತಾಯಿಸುತ್ತಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:36 pm, Tue, 11 October 22

TV9 Web

TV9 Kannada

Read More
Loading...
Unable to load recommendations.
Follow Us