ಕೊರೊನಾ ಹೊಸ ಪ್ರಭೇದ ಆರ್ಭಟ: ಹೊಸ ವರ್ಷಾರಂಭದಿಂದ ಶಾಲೆ ಶುರುವಾಗುತ್ತಾ..? ಸಚಿವ ಸುರೇಶ್ ಕುಮಾರ್ ಹೇಳಿದ್ದೇನು?

ಯುಕೆಯಲ್ಲಿ ಕೊರೊನಾದ ಹೊಸ ಪ್ರಭೇದ ಪತ್ತೆಯಾಗಿದೆ. ಕರ್ನಾಟಕ ಸಹ ಕೊರೊನಾದ ಹೊಸ ರೂಪಾಂತರಕ್ಕೆ ಬೆಚ್ಚಿ ಬಿದ್ದಿದೆ. ಹೀಗಾಗಿ ರಾಜ್ಯದಲ್ಲಿ ಮುಂದಿನ ವರ್ಷವೂ ಶಾಲೆ ಬಾಗಿಲು ತೆರೆಯೋದು ಡೌಟಾ ಎಂಬ ಪ್ರಶ್ನೆ ಉದ್ಭವಿಸಿದೆ.

ಕೊರೊನಾ ಹೊಸ ಪ್ರಭೇದ ಆರ್ಭಟ: ಹೊಸ ವರ್ಷಾರಂಭದಿಂದ ಶಾಲೆ ಶುರುವಾಗುತ್ತಾ..? ಸಚಿವ ಸುರೇಶ್ ಕುಮಾರ್ ಹೇಳಿದ್ದೇನು?
ಆಯೇಷಾ ಬಾನು

Updated on: Dec 23, 2020 | 11:44 AM

ಬೆಂಗಳೂರು: ಬ್ರಿಟನ್ನಿನಲ್ಲಿ ಕೊರೊನಾದ ಹೊಸ ಪ್ರಭೇದ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ಆತಂಕ ಹೆಚ್ಚಾಗಿದೆ. ಕರ್ನಾಟಕ ಸಹ ಕೊರೊನಾದ ಹೊಸ ರೂಪಾಂತರಕ್ಕೆ ಬೆಚ್ಚಿ ಬಿದ್ದಿದೆ. ಹೀಗಾಗಿ ರಾಜ್ಯದಲ್ಲಿ ವಿದೇಶದಿಂದ ಬರುವವರ ಮೇಲೆ ಹೆಚ್ಚಿನ ಗಮನವಹಿಸಲಾಗುತ್ತಿದೆ. ಸದ್ಯ ಇದರ ನಡುವೆ ಹೊಸ ಗೊಂದಲ ಸೃಷ್ಟಿಯಾಗಿದೆ.

ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿ ಸುಧಾರಿಸಿದ ಹಿನ್ನೆಲೆಯಲ್ಲಿ ಸರ್ಕಾರ ಜನವರ 1ರಿಂದ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿ ತರಗತಿ ಹಾಗೂ 6ರಿಂದ 9ನೇ ತರಗತಿಗೆ ವಿದ್ಯಾಗಮ ಪ್ರಾರಂಭಿಸಲು ತೀರ್ಮಾನಿಸಿತ್ತು. ಆದ್ರೆ ಈಗ ಮತ್ತೆ ಕೊರೊನಾದ ಹೊಸ ಪ್ರಭೇದದ ಅಟ್ಟಹಾಸ ಶುರುವಾಗಿದೆ. ಹೀಗಾಗಿ ರಾಜ್ಯದಲ್ಲಿ ಮುಂದಿನ ವರ್ಷವೂ ಶಾಲೆ ಬಾಗಿಲು ತೆರೆಯೋದು ಡೌಟಾ ಎಂಬ ಪ್ರಶ್ನೆ ಉದ್ಭವಿಸಿದೆ.

ಇದೀಗ ಮತ್ತೆ.. 2020-21 ಕೂಡ ಝೀರೋ ಶೈಕ್ಷಣಿಕ ವರ್ಷ ಆಗುತ್ತಾ? ಎಂಬ ಆತಂಕ ಪೋಷಕರಲ್ಲಿ ಮನೆ ಮಾಡಿದೆ. ಇನ್ನು 3 ತಿಂಗಳು ಕಳೆದ್ರೆ ಶೈಕ್ಷಣಿಕ ವರ್ಷವೇ ಕ್ಲೋಸ್ ಆಗುತ್ತೆ. ಇತ್ತ SSLC, PUC ವಿದ್ಯಾರ್ಥಿಗಳಿಗೆ ಎಕ್ಸಾಂ ಟೆನ್ಷನ್ ಕೂಡ ಇದೆ. ಕೊರೊನಾದಿಂದ ಈಗಾಗಲೇ 2020 ಶಾಲೆಗಳಿಲ್ಲದೆ ವಿದ್ಯಾರ್ಥಿಗಳು ಮನೆಯಲ್ಲೇ ಕೂರುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು.

ಇದರ ನಡುವೆ ಈಗ 2021ಕ್ಕೆ ಕೊರೊನಾದ ಹೊಸ ಪ್ರಭೇದದ ಕಂಟಕ ಎದುರಾಗಿದೆ. ಈ ಸಂದರ್ಭದಲ್ಲಿ ಶಾಲೆಗಳನ್ನು ತೆರೆಯುವ ಈ ಹಿಂದಿನ ನಿರ್ಧಾರಕ್ಕೆ ರಾಜ್ಯ ಸರ್ಕಾರ ಅಂಟಿಕೊಳ್ಳುತ್ತದಾ? ಅಥವಾ ತರಗತಿಗಳನ್ನು ಪುನರಾರಂಭಿಸುವ ಗೋಜಿಗೆ ಹೋಗುವುದಿಲ್ಲವಾ? ಎಂಬ ಚಿಂತೆಯ ಗೆರೆಗಳು ಮೂಡಿವೆ. ಹಿಂದಿನ ಸೂಚನೆಯಂತೆ ಹೊಸ ವರ್ಷಕ್ಕೆ ಶಾಲೆ ಆರಂಭವಾಗುತ್ತಾ.. ಅಥವಾ ಬ್ರಿಟನ್ ಭೂತಕ್ಕೆ ಹೆದರಿ ನಿರ್ಧಾರ ಬದಲಾಯಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ.

ಹೊಸ ಪ್ರಭೇದದ ಬಗ್ಗೆ ಆತಂಕಪಡುವ ಅವಶ್ಯಕತೆ ಇಲ್ಲ
ಈಗಾಗಲೇ ನಿರ್ಧಾರವಾದಂತೆ ಜ.1ರಿಂದ ಶಾಲೆ ಆರಂಭವಾಗುತ್ತೆ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ. ಕೊರೊನಾ ಹೊಸ ಪ್ರಭೇದದ ಬಗ್ಗೆ ತಜ್ಞರ ಜತೆ ಚರ್ಚೆ ನಡೆಸುತ್ತಿದ್ದೇವೆ. ಹೊಸ ಪ್ರಭೇದದ ಬಗ್ಗೆ ಕೇಂದ್ರ ಸಚಿವರಿಂದ ಮಾಹಿತಿ ಸಿಕ್ಕಿದೆ. ಇದರ ಬಗ್ಗೆ ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ರು.

ಜನವರಿ 1ರಿಂದ ವಿದ್ಯಾಗಮ ಶಿಕ್ಷಣ ತರಗತಿ ಆರಂಭ: ನಿಯಮಗಳೇನು ಗೊತ್ತೇ?

Published On - 10:45 am, Wed, 23 December 20

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us