ಬೆಂಗಳೂರು ಬೈಕ್ ಸವಾರರೇ ಎಚ್ಚರ; ದಂಡ ವಸೂಲಿಗಾಗಿ ಪೊಲೀಸರಿಗೆ ಸಿಕ್ಕಿದೆ ಹೊಸ ಅಸ್ತ್ರ
New Traffic Rules: ನಿಯಮಗಳು ಹೀಗಿವೆ ಎಂಬುದು ಗೊತ್ತಿಲ್ಲದೆ ಕೆಲವೊಮ್ಮೆ ಟ್ರಾಫಿಕ್ ಪೊಲೀಸರ ಎದುರು ಬೈಕ್ ಸವಾರರು ವಾದಕ್ಕೆ ಇಳಿಯುತ್ತಾರೆ. ನಿಯಮ ತಿಳಿದ ನಂತರದಲ್ಲಿ ಸುಮ್ಮನಾಗುತ್ತಾರೆ. ಹೀಗಾಗಿ, ಈಗ ಬದಲಾವಣೆ ತಂದ ನಿಯಮವನ್ನೂ ನೀವು ಗಮನಿಸಲೇಬೇಕು.

ಬೆಂಗಳೂರು: ಬೈಕ್ನಲ್ಲಿ ಸಂಚರಿಸುವಾಗ ಹೆಲ್ಮೆಟ್ ಧರಿಸದಿದ್ದರೆ, ಇನ್ಸುರೆನ್ಸ್, ಬೈಕ್ ಆರ್ಸಿ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಇಲ್ಲದಿದ್ದರೆ ದಂಡ ಹಾಕಲಾಗುತ್ತದೆ. ಏನೂ ಸಿಕ್ಕಿಲ್ಲ ಎಂದರೆ ಪೊಲೀಸರು ಯಾವುದಾದರೂ ಚಿಕ್ಕ ವಿಚಾರಗಳನ್ನು ಇಟ್ಟುಕೊಂಡು ದಂಡ ವಸೂಲಿ ಮಾಡುತ್ತಾರೆ ಎಂಬುದು ಜನಸಾಮಾನ್ಯರ ಆರೋಪ. ಆದರೆ, ಕೆಲ ವಿಚಾರಗಳು ಟ್ರಾಫಿಕ್ ರೂಲ್ಸ್ನಲ್ಲೇ ಇರುತ್ತದೆ. ಈಗ ತರಲಾದ ಹೊಸ ನಿಯಮದಲ್ಲಿ ಎರಡು ಮಹತ್ವದ ಬದಲಾವಣೆ ಮಾಡಲಾಗಿದೆ. ಅಷ್ಟೇ ಅಲ್ಲ, ಆ ತಪ್ಪುಗಳನ್ನು ಮಾಡಿದರೆ ದೊಡ್ಡ ಮೊತ್ತದ ದಂಡ ತೆತ್ತಬೇಕಾಗುತ್ತದೆ.
ನಿಯಮಗಳು ಹೀಗಿವೆ ಎಂಬುದು ಗೊತ್ತಿಲ್ಲದೆ ಕೆಲವೊಮ್ಮೆ ಟ್ರಾಫಿಕ್ ಪೊಲೀಸರ ಎದುರು ಬೈಕ್ ಸವಾರರು ವಾದಕ್ಕೆ ಇಳಿಯುತ್ತಾರೆ. ನಿಯಮ ತಿಳಿದ ನಂತರದಲ್ಲಿ ಸುಮ್ಮನಾಗುತ್ತಾರೆ. ಹೀಗಾಗಿ, ಈಗ ಬದಲಾವಣೆ ತಂದ ನಿಯಮವನ್ನೂ ನೀವು ಗಮನಿಸಲೇಬೇಕು.
ಬೆಂಗಳೂರು ನಗರ ಸಂಚಾರ ಪೊಲೀಸ್ ವಿಭಾಗ ಹೊಸ ಟ್ರಾಫಿಕ್ ನಿಯಮ ಜಾರಿಗೆ ತಂದಿದೆ. ಇದರ ಪ್ರಕಾರ ನಿಮ್ಮ ಬೈಕ್ ರಸ್ತೆಗೆ ಇಳಿಸುವ ಮೊದಲು ಸೈಡ್ ಮಿರರ್ ಹಾಗೂ ಇಂಡಿಕೇಟರ್ ಇರಲೇಬೇಕು. ಬೈಕ್ನಲ್ಲಿ ಸಂಚಾರ ಮಾಡುವಾಗ ಸೈಡ್ ಮಿರರ್ ಇದ್ದರೆ ಹಿಂಬದಿಯಿಂದ ಬರುವ ವಾಹನವನ್ನು ಗಮನಿಸಬಹುದು. ಈ ಮೂಲಕ ಆಗಬಹುದಾದ ಅಪಘಾತವನ್ನು ತಪ್ಪಿಸಬಹುದು. ಎಡಕ್ಕೆ ಅಥವಾ ಬಲಕ್ಕೆ ತಿರುಗುವಾಗ ಇಂಡಿಕೇಟರ್ ಹಾಕಿದರೆ ಹಿಂಬದಿಯಿಂದ ಬರುತ್ತಿರುವವರಿಗೆ ನಾವು ಎತ್ತ ತಿರುಗುತ್ತೇವೆ ಎನ್ನುವ ಸೂಚನೆ ಸಿಗುತ್ತದೆ. ಇದು ಕೂಡ ಅಪಘಾತ ತಡೆಯಲು ಸಹಕಾರಿ.
ಹೊಸ ಸುತ್ತೋಲೆಯ ಪ್ರಕಾರ ಸೈಡ್ ಮಿರರ್ ಅಳವಡಿಸದೆ ಮತ್ತು ಇಂಡಿಕೇಟರ್ ಇಲ್ಲದೆ ನಗರದಲ್ಲಿ ವಾಹನಗಳನ್ನು ಓಡಿಸಿದರೆ ಅದು ನಿಯಮಗಳ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಎರಡನ್ನೂ ಪ್ರತ್ಯೇಕ ತಪ್ಪು ಎಂದು ಪರಿಗಣಿಸಲಾಗುವುದು ಮತ್ತು ಪ್ರತಿ ಉಲ್ಲಂಘನೆಗೆ ರೂ 500 ದಂಡ ವಿಧಿಸಲಾಗುವುದು ಎಂದು ಆದೇಶದಲ್ಲಿ ಎಚ್ಚರಿಸಲಾಗಿದೆ.
(New Traffic Rules in Bangalore 2021 rule traffic rules change in Bengaluru)
ಇದನ್ನೂ ಓದಿ: ಮುಂಬೈನಲ್ಲಿ ಕೊವಿಡ್ ನಿರ್ಬಂಧ: ರೈಲು ಸಂಚಾರ ಸ್ಥಗಿತಗೊಳ್ಳುವ ಭಯದಿಂದ ಊರಿನತ್ತ ಹೆಜ್ಜೆ ಹಾಕಿದ ವಲಸೆ ಕಾರ್ಮಿಕರು
ಇದನ್ನೂ ಓದಿ: ಟ್ರಾಫಿಕ್ನಿಂದ ಬೇಸತ್ತ ರಾಹುಲ್ ದ್ರಾವಿಡ್; ಬ್ಯಾಟ್ನಿಂದ ಎದುರು ಬದಿ ಕಾರಿನ ಗಾಜು ಪುಡಿಪುಡಿ; ವಿಡಿಯೋ ವೈರಲ್