New Year 2026 Celebration Live: ನ್ಯೂ ಇಯರ್ ಫೀವರ್, ಸಂಭ್ರಮಾಚರಣೆ ಶುರು
ಕಹಿನೆನಪುಗಳನ್ನ ಮರೆತು, ಸಿಹಿ ನೆನೆಪುಗಳನ್ನ ಮನದಲ್ಲೇ ಇರಿಸಿಕೊಂಡು ಹೊಸ ವರ್ಷವನ್ನ ಸ್ವಾಗತಿಸುವುದಕ್ಕೆ ರಾಜ್ಯದ ಜನ ಕಾತರರಾಗಿದ್ದಾರೆ. ಅದರಲ್ಲೂ ಬೆಂಗಳೂರಿನಲ್ಲಿ ಪಾರ್ಟಿ ಗಮ್ಮತ್ತು ಜೋರಾಗಿದೆ. ಪಬ್, ಬಾರ್, ರೆಸ್ಟೋರೆಂಟ್‌ಗಳು ಝಗಮಗ ಅಂತಿವೆ. 2026 ರ ಆಗಮನಕ್ಕೆ ಕ್ಷಣಗಣನೆ ಶುರುವಾಗಿದೆ. ಹೊಸ ವರ್ಷದ ಸಂಭ್ರಮಾಚರಣೆ ಲೈವ್ ನೋಡಿ.
ಬೆಂಗಳೂರು, ಡಿಸೆಂಬರ್ 31: ಇನ್ನೇನು ಕೆಲವೇ ಕ್ಷಣದಲ್ಲಿ 2025 ರ ಅಧ್ಯಾಯ ಮುಗಿಯಲಿದೆ. 2026ರ ಹೊಸ ಪರ್ವ ಶುರುವಾಗಲಿದೆ. ಇಂದು ಬೆಳಗಿನಿಂದಲೇ ರಾಜ್ಯದ ಉದ್ದಗಲಕ್ಕೂ ಜನ ಮೋಜುಮಸ್ತಿಯಲ್ಲಿ ತೊಡಗಿದ್ದಾರೆ. ಹೊಸ ವರ್ಷವನ್ನ ಸ್ವಾಗತಿಸೋಕೆ ರಾಜ್ಯದ ಜನ ಕಾತರರಾಗಿದ್ದಾರೆ. ಅದರಲ್ಲೂ ಸಿಲಿಕಾನ್ ಸಿಟಿಯಲ್ಲಿ ಪಾರ್ಟಿ ಗಮ್ಮತ್ತು ಜೋರಾಗಿದೆ. ನಗರದ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ಸ್ಟ್ರೀಟ್, ಕೋರಮಂಗಲ, ಇಂದಿರಾ ನಗರದ ಸೆಲೆಬ್ರೇಷನ್ ಸ್ಪಾಟ್ಗಳು ಲಕ ಲಕ ಅಂತಿವೆ. ಹೊಸ ವರ್ಷದ ಸಂಭ್ರಮಾಚರಣೆ ಲೈವ್ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Dec 31, 2025 10:21 PM
Latest Videos

