ವಿಜಯಪುರ: ಹೊಸ ವರ್ಷ ಬಂದರೆ ಸಾಕು ಎಲ್ಲೆಡೆ ಸಂಭ್ರಮ ಸಡಗರ ಮನೆ ಮಾಡಿರುತ್ತದೆ. ನ್ಯೂ ಇಯರ್ ವೆಲ್ಕಮ್ ಮಾಡೋಕೆ ಡಿಫರೆಂಟ್ ಪ್ಲ್ಯಾನ್ ಮಾಡಿಕೊಳ್ಳಲಾಗುತ್ತದೆ. ಇನ್ನು ಹಣವಿದ್ದವರು ವಿದೇಶಕ್ಕೆ ಹೋಗಿ ಅಲ್ಲಿಯೇ ಹೊಸ ವರ್ಷದ ಸೆಲಬ್ರೇಷನ್ ಮಾಡುತ್ತಾರೆ. ಆದರೆ ಈ ಬಾರಿ ರೂಪಾಂತರ ಕೊರೊನಾದ ಕಾರಣ ಸರ್ಕಾರ ಇವಕ್ಕೆಲ್ಲಾ ಬ್ರೇಕ್ ಬಿದ್ದಿದ್ದು, ಈ ಬಾರಿ ಸಿಂಪಲ್ ಆಗಿ ಹೊಸ ವರ್ಷಾಚರಣೆ ಮಾಡಲಾಯಿತು.
ಆದರೆ ಇವೆಲ್ಲವನ್ನೂ ಮೀರಿದ ರೀತಿಯಲ್ಲಿ ಒಂದು ಕಾರ್ಯಕ್ರಮ ನಡೆದಿದ್ದು, ಹೊಸ ವರ್ಷಾಚರಣೆಯ ಪರಿಕಲ್ಪನೆಯೇ ಇಲ್ಲದ ಮಕ್ಕಳು ಸಹ ಈ ಬಾರಿ ನೂತನ ವರ್ಷಾಚರಣೆ ಮಾಡಿದ್ದಾರೆ. ಇದಕ್ಕೆಲ್ಲಾ ಕಾರಣವಾಗಿದ್ದು ಜಿಲ್ಲಾ ಆಸ್ಪತ್ರೆಯ ಹಿರಿಯ ಆಪ್ತ ಸಮಾಲೋಚಕ ರವಿ ಕಿತ್ತೂರ.
ಹೌದು ಈ ಹಿಂದೆ ಅಖಂಡವಾಗಿದ್ದ ವಿಜಯಪುರ-ಬಾಗಲಕೋಟೆ ಜಿಲ್ಲೆಗಳಲ್ಲಿ ಎಚ್ಐವಿ ರೋಗಿಗಳ ಸಂಖ್ಯೆ ಆಧಿಕವಾಗಿತ್ತು. ಅವಳಿ ಜಿಲ್ಲೆಗಳು ಇಬ್ಭಾಗವಾದ ಬಳಿಕವೂ ವಿಜಯಪುರ ಜಿಲ್ಲೆಯಲ್ಲಿ ಸಾಕಷ್ಟು ಎಚ್ಐವಿ ರೋಗಿಗಳಿದ್ದು, ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಈ ಮಾರಕ ರೋಗವನ್ನು ಓಡಿಸಬೇಕು. ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲು ರವಿ ಕಿತ್ತೂರು ಆಪ್ತ ಸಮಾಲೋಚಕರಾಗಿ ಸೇವೆ ಮಾಡುತ್ತಿದ್ದಾರೆ. ಇಲ್ಲಿನ ದೇವದಾಸಿ ಮಹಿಳೆಯರಿಗೆ ಹಾಗೂ ಲೈಂಗಿಕ ಕಾರ್ಯಕರ್ತೆಯರಿಗೆ ಸೂಕ್ತ ತಿಳುವಳಿಕೆ ನೀಡಿದ್ದು ಸುರಕ್ಷತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿ ಮಹಾಮಾರಿ ರೋಗ ತಡೆಗಟ್ಟಲು ಮುಂದಾಗಿದ್ದಾರೆ.
ಈ ನಿಟ್ಟಿನಲ್ಲಿ ಈ ಬಾರಿ ಹೊಸ ವರ್ಷವನ್ನು ದೇವದಾಸಿ ಹಾಗೂ ಅವರ ಮಕ್ಕಳೊಂದಿಗೆ ಏಕೆ ವರ್ಷಾಚರಣೆ ಮಾಡಬಾರದು ಎಂದು ಯೋಚನೆ ಮಾಡಿದ್ದ ರವಿ ಈ ಕಾರ್ಯದಲ್ಲಿ ಹೆಜ್ಜೆ ಇಟ್ಟಿದ್ದಾರೆ. ಇವರ ಆಲೋಚನೆಗೆ ಸಾಥ್ ನೀಡಿ ಜಿಲ್ಲಾ ಪಂಚಾಯತಿ ಆಧ್ಯಕ್ಷೆ ಸುಜಾತಾ ಕಳ್ಳಿಮನಿ, ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮ ಪಂಚಾಯತಿ ಹಾಗೂ ಡಾ. ಅಂಬೇಡ್ಕರ್ ರೂರಲ್ ಡೆವಲಪ್ಮೆಂಟ್ ಸೋಸೈಟಿಯವರು ಜೊತೆಯಾದರು. ಈ ನಿಟ್ಟಿನಲ್ಲಿ ಮಾಜಿ ದೇವದಾಸಿಯರು ಹಾಗೂ ಅವರ ಮಕ್ಕಳೊಂದಿಗೆ ಜಿಲ್ಲಾ ಪಂಚಾಯತಿ ಅಧ್ಯಕ್ಷರು ಹೊಸ ವರ್ಷಾಚರಣೆ ಕಾರ್ಯಕ್ರಮ ಮಾಡಿದರು.
ಮಾಜಿ ದೇವದಾಸಿಯರು ಹಾಗೂ ಅವರ ಮಕ್ಕಳೊಂದಿಗೆ ಕೇಕ್ ಕತ್ತರಿಸಿ ನೂತನ ವರ್ಷವನ್ನು ಬರ ಮಾಡಿಕೊಳ್ಳಲಾಗಿದ್ದು, ಇದೇ ವೇಳೆ ಮಾಜಿ ದೇವದಾಸಿಯರು ಮಾತನಾಡಿ ಇಂತಹ ಕಾರ್ಯಕ್ರಮ ಆಯೋಜನೆ ಮಾಡಿದ್ದಕ್ಕೆ ಸಂತಸವಾಗಿದ್ದು, ವೇಶ್ಯಾವೃತ್ತಿಯನ್ನು ಮಾಡುತ್ತಿದ್ದ ನಮ್ಮನ್ನು ನಮ್ಮ ಮಕ್ಕಳನ್ನು ಸಮಾಜ ನೋಡುವ ದೃಷ್ಟಿಕೋನವೇ ಬೇರೆಯಿದೆ. ಇಂತಹದ್ದರಲ್ಲಿ ನಮ್ಮೊಂದಿಗೆ ಹೊಸ ವರ್ಷ ಆಚರಣೆ ಮಾಡಿದ್ದು ತುಂಬಾ ಸಂತೋಷದ ಸಂಗತಿ ಎಂದು ಹೇಳಿದರು.
ಚಿಕ್ಕಿ ಘಟಕದಿಂದ ಬದುಕು ರೂಪಿಸಿಕೊಂಡ ಮಾಜಿ ದೇವದಾಸಿಯರಿಗೆ ರಾಜ್ಯೋತ್ಸವ ಪ್ರಶಸ್ತಿ ಸಿಹಿ!