New Year Resolution | ನಾನು ಮತ್ತು ನನ್ನ ರಾಜ್ಯ ಹೀಗಾಗಬೇಕು; ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
2021ಕ್ಕೆ ಕಾಲಿಡುತ್ತಿರುವ ಈ ಘಳಿಗೆಯಲ್ಲಿ ನಮ್ಮ ನಾಡಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವೈಯಕ್ತಿಕವಾಗಿ ಎಂಥ ಬದಲಾವಣೆಗಳನ್ನು ಬಯಸುತ್ತಿದ್ದಾರೆ? ಸಮಾಜದಲ್ಲಿ ಏನೆಲ್ಲಾ ಅಂಶಗಳು ಬದಲಾಗಬೇಕೆಂದು ನಿರೀಕ್ಷಿಸುತ್ತಾರೆ? ಅದಕ್ಕಾಗಿ ಅವರೇನು ಮಾಡಬೇಕೆಂದಿದ್ದಾರೆ? 2020ರ ಯಾವ ವಿಷಯವನ್ನು ಮರೆಯಬೇಕೆಂದಿದ್ದಾರೆ ಎಂಬ ಕುರಿತು ಟಿವಿ9 ಕನ್ನಡ ಡಿಜಿಟಲ್ ಜೊತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ವರ್ಷವೊಂದು ಉರುಳಿ ಹೋಗುತ್ತಿರುವ ಹೊತ್ತಿದು. ಪ್ರತಿಬಾರಿಯೂ ಹೀಗೆ ಕಳೆದು ಹೋಗುವ ವರ್ಷಗಳನ್ನು ನೆನಪಿಸಿಕೊಂಡರೆ ಒಂದಷ್ಟು ನಗು, ಸಂಭ್ರಮ, ಗೆಲುವು, ಕೆಲವಷ್ಟು ಸಂತಾಪ ಎಲ್ಲವೂ ಬೆರೆತ ಹೂರಣ ಸಿಗುವುದು ಸಹಜ. ಆದರೆ. 2020 ಇವೆಲ್ಲವಕ್ಕಿಂತಲೂ ಭಿನ್ನ. ಇಲ್ಲಿ ಸಿಹಿಗಿಂತ ಕಹಿ ಜಾಸ್ತಿ, ವಿಶೇಷಕ್ಕಿಂತ ವಿಷಾದವೇ ಜಾಸ್ತಿ..
2021ಕ್ಕೆ ಕಾಲಿಡುತ್ತಿರುವ ಈ ಘಳಿಗೆಯಲ್ಲಿ ನಮ್ಮ ನಾಡಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವೈಯಕ್ತಿಕವಾಗಿ ಎಂಥ ಬದಲಾವಣೆಗಳನ್ನು ಬಯಸುತ್ತಿದ್ದಾರೆ? ಸಮಾಜದಲ್ಲಿ ಏನೆಲ್ಲಾ ಅಂಶಗಳು ಬದಲಾಗಬೇಕೆಂದು ನಿರೀಕ್ಷಿಸುತ್ತಾರೆ? ಅದಕ್ಕಾಗಿ ಅವರೇನು ಮಾಡಬೇಕೆಂದಿದ್ದಾರೆ? 2020ರ ಯಾವ ವಿಷಯವನ್ನು ಮರೆಯಬೇಕೆಂದಿದ್ದಾರೆ ಎಂಬ ಕುರಿತು ಟಿವಿ9 ಕನ್ನಡ ಡಿಜಿಟಲ್ ಜೊತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ವೈಯಕ್ತಿಕವಾಗಿ ನಾನು ಹೀಗೆ ಬದಲಾಗಬೇಕು ಅಂದುಕೊಂಡಿದ್ದೇನೆ ಇನ್ನೂ ಹೆಚ್ಚಿನ ಹುರುಪು ಮತ್ತು ಶಕ್ತಿಯೊಂದಿಗೆ ರಾಜ್ಯವನ್ನು ಅಭಿವೃದ್ಧಿಯಡೆಗೆ ಮುನ್ನಡೆಸುವ ನಿಟ್ಟಿನಲ್ಲಿ ನನ್ನ ಜೀವನ ಕ್ರಮದಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳುವೆ.
ಸಮಾಜ ಅಥವಾ ರಾಜ್ಯ ಅಥವಾ ದೇಶದಲ್ಲಿ ಇಂಥ ಬದಲಾವಣೆ ಆಗಬೇಕು ಎಂದು ನಿರೀಕ್ಷಿಸುತ್ತೇನೆ ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ ಸಾಧ್ಯವಾಗಿಸುವ ಸಮಾಜವನ್ನು ನಿರ್ಮಿಸಿ ಎಲ್ಲ ವರ್ಗದ ಜನರ ಅಭ್ಯುದಯಕ್ಕೆ ನಾಂದಿ ಹಾಡುವಂತಹ ಬದಲಾವಣೆ ನಿರೀಕ್ಷಿಸುತ್ತೇನೆ.
ಅಂಥ ಬದಲಾವಣೆ ಸಮಾಜದಲ್ಲಿ ಕಾಣಲು ನಾನು ಏನು ಮಾಡಬಲ್ಲೆ? ಸಮಾಜದಲ್ಲಿ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ, ಸಮೃದ್ಧಿಯನ್ನು ನೆಲೆಗೊಳಿಸಲು ಪೂರಕ ವಾತಾವರಣ ನಿರ್ಮಾಣಕ್ಕೆ ವೈಯಕ್ತಿಕ ಹಾಗೂ ಸಾಮೂಹಿಕ ಕೊಡುಗೆ ಸಾಧ್ಯವಾಗಿಸುವ ಪ್ರಯತ್ನ
2020 ವರ್ಷದ ಯಾವ ಅಂಶವನ್ನು ಮರೆಯಲು ಇಚ್ಚಿಸುತ್ತೀರಿ? ಕೊರೊನಾ ಸಾಂಕ್ರಾಮಿಕ ಉಂಟುಮಾಡಿದ ಸಂಕಷ್ಟವನ್ನು ಮರೆಯಲು ಇಚ್ಚಿಸುತ್ತೇನೆ.
Published On - 8:13 pm, Thu, 31 December 20