AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿರುಬಿಸಿಲಿಗೆ ಬಳಲಿದ ಗಣಿನಾಡು ಬಳ್ಳಾರಿ.. ಡಿ ಹೈಡ್ರೇಷನ್​ನಿಂದ ನವಜಾತ ಶಿಶುಗಳು ಅಸ್ವಸ್ಥ

ಗಣಿನಾಡು ಬಳ್ಳಾರಿಯಲ್ಲಿ ಕೆಂಡದಂತ ಬಿಸಿಲು. ಸೂರ್ಯನ ಪ್ರತಾಪಕ್ಕೆ ಜನ ಹೈರಾಣಾಗಿದ್ದಾರೆ. ಭಾರಿ ಬಿಸಿಲಿನಿಂದಾಗಿ ನವಜಾತ ಶಿಶುಗಳು ಮಕ್ಕಳು ಬಸವಳಿದಿದ್ದಾರೆ. ಇದೇ ಕಾರಣಕ್ಕೆ ನವಜಾತ ಶಿಶುಗಳಲ್ಲಿ ಡೀಹೈಡ್ರೇಷನ್ ಉಂಟಾಗ್ತಿದೆ.

ಬಿರುಬಿಸಿಲಿಗೆ ಬಳಲಿದ ಗಣಿನಾಡು ಬಳ್ಳಾರಿ.. ಡಿ ಹೈಡ್ರೇಷನ್​ನಿಂದ ನವಜಾತ ಶಿಶುಗಳು ಅಸ್ವಸ್ಥ
ಡಿ ಹೈಡ್ರೇಷನ್​ನಿಂದ ನವಜಾತ ಶಿಶುಗಳು ಅಸ್ವಸ್ಥ
ಆಯೇಷಾ ಬಾನು
ಆಯೇಷಾ ಬಾನು|

Updated on: Apr 13, 2021 | 8:48 AM

Share

ಗಣಿನಾಡು ಬಳ್ಳಾರಿಯಲ್ಲಿ ಈಗಾಗಲೇ 40 ಡಿಗ್ರಿಗೂ ಹೆಚ್ಚು ಉಷ್ಣಾಂಶ ದಾಖಲಾಗುತ್ತಿದೆ. ಬಿರು ಬಿಸಿಲಿನಿಂದಾಗಿ ಭೂಮಿ ಕಾದ ಕಬ್ಬಿಣವಾಗಿದೆ. ಹೀಗಾಗಿಯೇ ಬಿಸಿಲಿನ ಎಫೆಕ್ಟ್ ನವಜಾತ ಶಿಶುಗಳ ಮೇಲೆ ಹಾಗೂ ಚಿಕ್ಕಚಿಕ್ಕ ಮಕ್ಕಳ ಮೇಲೆ ಆಗುತ್ತಿದೆ. ಪೋಷಕರು ಸಾಕಷ್ಟು ಮುಂಜಾಗ್ರತೆ ವಹಿಸಿದ್ರೂ ಬಿಸಿಲಿನಿಂದ ಶಿಶುಗಳನ್ನು ರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಬಳ್ಳಾರಿಯಲ್ಲಿ ಭಾರಿ ಬಿಸಿಲಿನ ಪರಿಣಾಮ ನವಜಾತ ಶಿಶುಗಳು ನಿರ್ಜಲೀಕರಣ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮಾಹಿತಿ ಪ್ರಕಾರ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ನಿತ್ಯ 6ರಿಂದ 7 ಶಿಶುಗಳು ಬಿಸಿಲಿನ ಸಮಸ್ಯೆಯಿಂದ ಚಿಕಿತ್ಸೆಗೋಸ್ಕರ ದಾಖಲಾಗುತ್ತಿದ್ದಾರಂತೆ. ವಿಮ್ಸ್​ನ ನವಜಾತ ಶಿಶುಗಳ ಸ್ಪೇಷಲ್ ಕೇರ್ ಘಟಕದಲ್ಲಿ ನವಜಾತ ಶಿಶುಗಳಿಗೆ ಸಮರ್ಪಕ ಚಿಕಿತ್ಸೆ ನೀಡಲಾಗುತ್ತಿದೆ. 20 ದಿನದಲ್ಲಿ 70 ಕ್ಕೂ ಹೆಚ್ಚು ನವಜಾತ ಶಿಶುಗಳಿಗೆ ಚಿಕಿತ್ಸೆ ನೀಡಲಾಗಿದೆ. ಬಿಸಿಲಿನ ಪ್ರಮಾಣ ಜಾಸ್ತಿಯಾಗಿದ್ದರಿಂದ ಇನ್ನಷ್ಟು ಶಿಶುಗಳು ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇನ್ನು ಮಕ್ಕಳಲ್ಲಿ ಈ ರೀತಿ ಸಮಸ್ಯೆ ಎದುರಾಗಿರುವುದು ಬಳ್ಳಾರಿ ಜಿಲ್ಲೆಯ ಪೋಷಕರಲ್ಲಿ ಆತಂಕ ಮೂಡಿಸಿದೆ. ಬಿಸಿಲು ಮತ್ತಷ್ಟು ಹೆಚ್ಚಾದರೆ ಪರಿಸ್ಥಿತಿ ಏನಪ್ಪಾ ಅನ್ನೋ ಭಯವೂ ಪೋಷಕರನ್ನ ಕಾಡುತ್ತಿದೆ. ಮಕ್ಕಳು ಮಾತ್ರವಲ್ಲ ವೃದ್ಧರಿಗೂ ಬಿಸಿಲಿನಿಂದ ನಾನಾ ಸಮಸ್ಯೆ ಎದುರಾಗುತ್ತಿವೆ. ಒಟ್ನಲ್ಲಿ ಬೇಸಿಗೆ ಮುಗಿಯುವ ತನಕ ಜನರು ಒಂದಷ್ಟು ಅಲರ್ಟ್ ಆಗಿದ್ರೆ ಒಳ್ಳೆಯದು. ಇಲ್ಲವಾದ್ರೆ ಮತ್ತಷ್ಟು ಸಮಸ್ಯೆ ಎದುರಾಗುವ ಅಪಾಯ ಇದೆ.

Dehydration in Babies

ವಿಮ್ಸ್​ನ ನವಜಾತ ಶಿಶುಗಳ ಸ್ಪೇಷಲ್ ಕೇರ್ ಘಟಕ

ಇದನ್ನೂ ಓದಿ: ಕೊರೊನಾ ವಿರುದ್ಧ ಹೋರಾಟಕ್ಕೆ ಸಜ್ಜಾಗಿಯೇ ಹುಟ್ಟಿದ ಶಿಶು; ಅಮ್ಮ ಪಡೆದ ವ್ಯಾಕ್ಸಿನ್​ನಿಂದ ಶಕ್ತಿ ಪಡೆದ ಅಮೆರಿಕದ ಮೊದಲ ಮಗು ಇದು..

(Newly Born Babies Facing Dehydration Problems Due to Heavy Summer in Bellary)

Follow Us
ಆಯೇಷಾ ಬಾನು
ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್