Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಇಸ್ರೇಲ್‌ ದೂತಾವಾಸ ಕಚೇರಿ ಸ್ಫೋಟಕ್ಕೆ ಸಂಚು: ಪ್ರಮುಖ ಸಂಚುಕೋರ ನೂರುದ್ದೀನ್ ಮೈಸೂರಿನಲ್ಲಿ ಬಂಧನ

ವಿವಿಧ ಭಯೋತ್ಪಾದಕ ಚಟುವಟಿಕೆಗಳಲ್ಲಿ ಶಾಮೀಲಾಗಿ ತನಿಖಾ ಏಜೆನ್ಸಿಗಳಿಗೆ ಬೇಕಾಗಿದ್ದ ಉಗ್ರ ನೂರುದ್ದೀನ್ ಅಲಿಯಾಸ್ ರಫಿಯನ್ನು ಬಂಧಿಸುವಲ್ಲಿ ಕೊನೆಗೂ ರಾಷ್ಟ್ರೀಯ ತನಿಖಾ ದಳ ಯಶಸ್ವಿಯಾಗಿದೆ. ಈತ ಮೈಸೂರಿನ ರಾಜೀವ್ ನಗರದಲ್ಲಿ ತಲೆಮರೆಸಿಕೊಂಡಿದ್ದ. ಈತ ಬೆಂಗಳೂರಿನಲ್ಲಿರುವ ಇಸ್ರೇಲ್‌ ದೂತಾವಾಸ ಕಚೇರಿ ಸ್ಫೋಟಕ್ಕೆ ಸಂಚು ಹೂಡಿದ್ದವರಲ್ಲಿ ಪ್ರಮುಖನಾಗಿದ್ದಾನೆ.

ಬೆಂಗಳೂರಿನ ಇಸ್ರೇಲ್‌ ದೂತಾವಾಸ ಕಚೇರಿ ಸ್ಫೋಟಕ್ಕೆ ಸಂಚು: ಪ್ರಮುಖ ಸಂಚುಕೋರ ನೂರುದ್ದೀನ್ ಮೈಸೂರಿನಲ್ಲಿ ಬಂಧನ
ಎನ್​ಐಎ
Follow us
Ganapathi Sharma
|

Updated on: May 16, 2024 | 8:11 AM

ಬೆಂಗಳೂರು, ಮೇ 16: ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿರುವ (Bengaluru) ಇಸ್ರೇಲ್‌ ದೂತಾವಾಸ ಕಚೇರಿ (Israel Consulate) ಸ್ಫೋಟಕ್ಕೆ ಮತ್ತು ದೇಶದ ವಿವಿಧ ನಗರಗಳಲ್ಲಿರುವ ವಿದೇಶಗಳ ರಾಯಭಾರ ಕಚೇರಿಗಳಲ್ಲಿ ಸ್ಫೋಟಕ್ಕೆ ಸಂಚು ಹೂಡಿದ್ದ ಪ್ರಮುಖ ಆರೋಪಿ ನೂರುದ್ದೀನ್ ಅಲಿಯಾಸ್ ರಫಿಯನ್ನು (Nuruddin alias Rafi) ರಾಷ್ಟ್ರೀಯ ತನಿಖಾ ದಳದ (NIA) ಅಧಿಕಾರಿಗಳು ಮೈಸೂರಿನಲ್ಲಿ ಬಂಧಿಸಿದ್ದಾರೆ. ಸ್ಫೋಟಕ್ಕೆ ಸಂಚು ಹೂಡಿದ್ದ ಆರೋಪದಲ್ಲಿ ಬಂಧಕ್ಕೊಳಗಾಗಿ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ನೂರುದ್ದೀನ್ ಬಳಿಕ ನಾಪತ್ತೆಯಾಗಿದ್ದ.

ವಿಚಾರಣೆಗೂ ಹಾಜರಾಗದೆ ನಾಪತ್ತೆಯಾದ ಕಾರಣ ಆತನನ್ನು ಚೆನ್ನೈನ ನ್ಯಾಯಾಲಯ ಘೋಷಿತ ಅಪರಾಧಿ ಎಂದು ಪ್ರಕಟಿಸಿತ್ತು. ಅದರ ಬೆನ್ನಲ್ಲೇ ಆತ ಮೈಸೂರಿನ ರಾಜೀವ್ ನಗರದಲ್ಲಿ ಅಡಗಿದ್ದಾನೆ ಎಂಬ ಸುಳಿವು ಎನ್​ಐಎ ಅಧಿಕಾರಿಗಳಿಗೆ ದೊರೆತಿತ್ತು. ಸುಳಿವು ದೊರೆತ ಬೆನ್ನಲ್ಲೇ ದಾಳಿ ನಡೆಸಿದ ಎನ್​ಐಎ ತಂಡ ಆತನನ್ನು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದೆ.

ನೂರುದ್ದೀನ್, ಪಾಕಿಸ್ತಾನದ ಅಮಿರ್ ಜುಬೇಗ್‌ ಸಿದ್ದಿಕೆ ಮತ್ತು ಶ್ರೀಲಂಕಾದ ಮುಹಮ್ಮದ್ ಜೊತೆ ಸೇರಿಕೊಂಡು ಚೆನ್ನೈನಲ್ಲಿರುವ ಅಮೆರಿಕ ದೂತಾವಾಸ ಕಚೇರಿ ಮತ್ತು ಬೆಂಗಳೂರಿನಲ್ಲಿರುವ ಇಸ್ರೇಲ್ ದೂತಾವಾಸ ಕಚೇರಿಯನ್ನು ಸ್ಪೋಟಿಸಲು 2014ರಲ್ಲಿ ಸಂಚು ರೂಪಿಸಿದ್ದ. ಈ ಕೃತ್ಯಕ್ಕೆ ಅಗತ್ಯವಾದ ಹಣವನ್ನು ನೂರೂದ್ದೀನ್ ನಕಲಿ ನೋಟು ಚಲಾವಣೆಯ ಮೂಲಕ ನೀಡಿದ್ದ. ಈ ಪ್ರಕರಣದಲ್ಲಿ ಆತನ ಬಂಧನವಾಗಿ ಆತನ ವಿರುದ್ಧ ಬೇಹುಗಾರಿಕೆ ಪ್ರಕರಣ ದಾಖಲಿಸಲಾಗಿತ್ತು. ಆತನಿಗೆ 2023ರಲ್ಲಿ ಷರತ್ತಬದ್ಧ ಜಾಮೀನು ನೀಡಲಾಗಿತ್ತು. ಬಳಿಕ ಈತ ತಲೆಮರೆಸಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಆತನ ಕುರಿತು ಸುಳಿವು ನೀಡಿದವರಿಗೆ 5 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು.

ಇದನ್ನೂ ಓದಿ: ಒಮ್ಮೆ ಟಿಕೆಟ್ ರದ್ದು, ಮತ್ತೆ ಟಿಕೆಟ್ ಕಾಯ್ದಿರಿಸಿ ವಿಮಾನ ಏರದ ಪ್ರಜ್ವಲ್: ಎಸ್​ಐಟಿ ಅಧಿಕಾರಿಗಳು ಬೇಸ್ತು

ಕೆಲವೇ ದಿನಗಳ ಹಿಂದೆ, ಅಂದರೆ ಮೇ 7ರಂದು ನೂರುದ್ದೀನ್​ನನ್ನು ಎನ್‌ಐಎ ವಿಶೇಷ ನ್ಯಾಯಾಲಯ ಅಪರಾಧಿ ಎಂದು ಘೋಷಿಸಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ಹಾರಿ ಬಿದ್ದ ಯುವಕ
ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ಹಾರಿ ಬಿದ್ದ ಯುವಕ
ಅಜಯ್ ರಾವ್ ಓದಿದ್ದು ಎಸ್​ಎಸ್​ಎಲ್​ಸಿ ತನಕ ಮಾತ್ರ; ಅಚ್ಚರಿ ವಿಷಯ ಹೇಳಿದ ನಟ
ಅಜಯ್ ರಾವ್ ಓದಿದ್ದು ಎಸ್​ಎಸ್​ಎಲ್​ಸಿ ತನಕ ಮಾತ್ರ; ಅಚ್ಚರಿ ವಿಷಯ ಹೇಳಿದ ನಟ
ಒಬ್ಬ ಸಿಬ್ಬಂದಿ ತಪ್ಪಿನಿಂದ 20,000 ಶಿಕ್ಷಕರು ನೋವಿಗೀಡಾಗಿದ್ದಾರೆ: ಪ್ರಸನ್ನ
ಒಬ್ಬ ಸಿಬ್ಬಂದಿ ತಪ್ಪಿನಿಂದ 20,000 ಶಿಕ್ಷಕರು ನೋವಿಗೀಡಾಗಿದ್ದಾರೆ: ಪ್ರಸನ್ನ
ಪ್ರತಿಭಟನೆ ಕಾರಣ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್
ಪ್ರತಿಭಟನೆ ಕಾರಣ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್
ನಾವು 75 ಲಕ್ಷ ಇದ್ರೂ 7 ಜನ ಮಾತ್ರ ಶಾಸಕರಿದ್ದೇವೆ: ಸಿಎಂ ಇಬ್ರಾಹಿಂ ಬೇಸರ
ನಾವು 75 ಲಕ್ಷ ಇದ್ರೂ 7 ಜನ ಮಾತ್ರ ಶಾಸಕರಿದ್ದೇವೆ: ಸಿಎಂ ಇಬ್ರಾಹಿಂ ಬೇಸರ
ಉಡುಪಿ, ತಿರುಪತಿಗೆ ಮುಸ್ಲಿಮರನ್ನ ಸೇರಿಸಿಕೊಳ್ಳುತ್ತೀರಾ? ಇಬ್ರಾಹಿಂ ಪ್ರಶ್ನೆ
ಉಡುಪಿ, ತಿರುಪತಿಗೆ ಮುಸ್ಲಿಮರನ್ನ ಸೇರಿಸಿಕೊಳ್ಳುತ್ತೀರಾ? ಇಬ್ರಾಹಿಂ ಪ್ರಶ್ನೆ
ಹೃಷಿಕೇಶದಲ್ಲಿ ರಿವರ್ ರಾಫ್ಟಿಂಗ್ ವೇಳೆ ಗಂಗಾ ನದಿಯಲ್ಲಿ ಮುಳುಗಿದ ಯುವಕ
ಹೃಷಿಕೇಶದಲ್ಲಿ ರಿವರ್ ರಾಫ್ಟಿಂಗ್ ವೇಳೆ ಗಂಗಾ ನದಿಯಲ್ಲಿ ಮುಳುಗಿದ ಯುವಕ
ಲಿಂಗಾಯತ ಸಚಿವರೆಲ್ಲ ಚರ್ಚೆಗೆ ಪೂರ್ವಸಿದ್ಧತೆ ಮಾಡಿಕೊಂಡಿದ್ದೆವು: ಪಾಟೀಲ್
ಲಿಂಗಾಯತ ಸಚಿವರೆಲ್ಲ ಚರ್ಚೆಗೆ ಪೂರ್ವಸಿದ್ಧತೆ ಮಾಡಿಕೊಂಡಿದ್ದೆವು: ಪಾಟೀಲ್
ಮಾಲೀಕನ ಮೇಲೆ ನಡೆದ ದಾಳಿ ತಪ್ಪಿಸಿ ಹೀರೋ ಆದ ಸಾಕುನಾಯಿ!
ಮಾಲೀಕನ ಮೇಲೆ ನಡೆದ ದಾಳಿ ತಪ್ಪಿಸಿ ಹೀರೋ ಆದ ಸಾಕುನಾಯಿ!
ನನ್ನನ್ನು ರಾಜಕೀಯವಾಗಿ ಬೆಳೆಸಿದ್ದು ಡಿಕೆ ಶಿವಕುಮಾರ್: ಸೋಮಶೇಖರ್
ನನ್ನನ್ನು ರಾಜಕೀಯವಾಗಿ ಬೆಳೆಸಿದ್ದು ಡಿಕೆ ಶಿವಕುಮಾರ್: ಸೋಮಶೇಖರ್