ಕರ್ನಾಟಕಕ್ಕೂ ನಿಫಾ ವೈರಸ್ ಆತಂಕ: ಕೇರಳಕ್ಕೆ ತೆರಳುವ ಪ್ರಯಾಣಿಕರಿಗೆ ಮಹತ್ವದ ಸೂಚನೆ ನೀಡಿದ ಆರೋಗ್ಯ ಇಲಾಖೆ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 25, 2024 | 7:44 PM

ಪಕ್ಕದ ರಾಜ್ಯ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಜುಲೈ 21ರಂದು ನಿಫಾ ವೈರಸ್ ಪ್ರಕರಣ ಪತ್ತೆಯಾಗಿದ್ದು, 14 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಇದರ ಬೆನ್ನಲ್ಲೇ ಕರ್ನಾಟಕಕ್ಕೂ ನಿಫಾ ವೈರಸ್​ ಕಂಟಕ ಶುರುವಾಗಿದೆ. ಹಾಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯ ಇಲಾಖೆಯಿಂದ ಸುತ್ತೋಲೆ ಹೊರಡಿಸಿದ್ದು, ಕೇರಳದ ಮಲಪ್ಪುರಂ ಜಿಲ್ಲೆಗೆ ತೆರಳದಂತೆ ಸೂಚಿಸಲಾಗಿದೆ.ಇದೀಗ ಎಚ್ಚೆತೆಕೊಂಡಿರುವ

ಕರ್ನಾಟಕಕ್ಕೂ ನಿಫಾ ವೈರಸ್ ಆತಂಕ: ಕೇರಳಕ್ಕೆ ತೆರಳುವ ಪ್ರಯಾಣಿಕರಿಗೆ ಮಹತ್ವದ ಸೂಚನೆ ನೀಡಿದ ಆರೋಗ್ಯ ಇಲಾಖೆ
ಕರ್ನಾಟಕಕ್ಕೂ ನಿಫಾ ವೈರಸ್ ಆತಂಕ: ಕೇರಳಕ್ಕೆ ತೆರಳುವ ಪ್ರಯಾಣಿಕರಿಗೆ ಮಹತ್ವದ ಸೂಚನೆ ನೀಡಿದ ಆರೋಗ್ಯ ಇಲಾಖೆ
Follow us on

ಬೆಂಗಳೂರು, ಜುಲೈ 25: ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಡೆಂಗ್ಯೂ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಮಧ್ಯೆ ನೆರೆಯ ಕೇರಳ ರಾಜ್ಯದಲ್ಲಿ ನಿಫಾ ವೈರಸ್‌ಗೆ (Nipah) ಬಾಲಕ ಮೃತಪಟ್ಟಿದ್ದಾನೆ. ಹಾಗಾಗಿ ರಾಜ್ಯಕ್ಕೂ ನಿಫಾ ವೈರಸ್ ಆತಂಕ ಶುರುವಾಗಿದೆ. ಈ ಹಿನ್ನೆಲೆ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮವಾಗಿ ಸುತ್ತೋಲೆ ಹೊರಡಿಸಿದ್ದು, ನಿಫಾ ಸುರಕ್ಷಿತ ಎಂದು ಘೋಷಿಸುವವರೆಗೂ ಕೇರಳದ ಮಲಪ್ಪುರಂ ಜಿಲ್ಲೆಗೆ ತೆರಳದಂತೆ ಸೂಚನೆ ನೀಡಿದೆ.

ಸುತ್ತೋಲೆಯಲ್ಲೇನಿದೆ?

ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಜುಲೈ 21ರಂದು ನಿಫಾ ವೈರಸ್ ಪ್ರಕರಣ ಪತ್ತೆಯಾಗಿತ್ತು. ಎಇಎಸ್​ (AES) ರೋಗಲಕ್ಷಣಗಳನ್ನು ಹೊಂದಿದ್ದ ಮಲಪ್ಪುರಂನ 14 ವರ್ಷದ ಬಾಲಕ ಪರಿಂತಲ್ಮನ್ನಾದಲ್ಲಿನ ಆರೋಗ್ಯ ಕೇಂದ್ರದಲ್ಲಿ ತೋರಿಸಿಕೊಂಡು ಹೆಚ್ಚಿನ ಚಿಕಿತ್ಸೆಗೆ ಕೋಝಿಕ್ಕೋಡ್ನ ಉನ್ನತ ಆರೋಗ್ಯ ಕೇಂದ್ರಕ್ಕೆ ವರ್ಗಾಯಿಸುವ ಮೊದಲು ಸಾವನ್ನಪ್ಪಿದ್ದಾನೆ. ರೋಗಿಯ ಮಾದರಿಗಳನ್ನು ಎನ್‌ಐವಿ ವುಣೆಗೆ ಕಳುಹಿಸಲಾಗಿ, ನಿಫಾ ವೈರಸ್ ದೃಢಪಟ್ಟಿದೆ.

ಇದನ್ನೂ ಓದಿ: Nipah Virus: ನಿಫಾ ವೈರಸ್ ಸೋಂಕಿತ 14 ವರ್ಷದ ಕೇರಳ ಬಾಲಕ ಹೃದಯಸ್ತಂಭನದಿಂದ ನಿಧನ

ಈ ಹಿನ್ನೆಲೆಯಲ್ಲಿ ಕೇಂದ್ರವು ಮಲಪ್ಪುರಂನಲ್ಲಿ ರೋಗವನ್ನು ತಡೆಗಟ್ಟಲು ತಕ್ಷಣದ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಸೂಚಿಸಿದೆ. ಪ್ರಕರಣದ ತನಿಖೆ, ಸಾಂಕ್ರಾಮಿಕ ರೋಗಗಳ ಸಂಬಂಧಗಳ ಗುರುತಿಸುವಿಕೆ ಮತ್ತು ತಾಂತ್ರಿಕ ಬೆಂಬಲದೊಂದಿಗೆ ಕೇರಳ ರಾಜ್ಯಕ್ಕೆ ಸಹಾಯ ಮಾಡಲು ಕೇಂದ್ರ ತಂಡದೊಂದಿಗೆ ರಾಷ್ಟ್ರೀಯ ‘ಒನ್ ಹೆಲ್ತ್ ಮಿಷನ್’ ಬಹು ಸದಸ್ಯರ ಜಂಟಿ ಏಕಾಏಕಿ ಪ್ರಕರಣ ಪ್ರತಿಕ್ರಿಯಾ ತಂಡವನ್ನು ನಿಯೋಜಿಸಲಾಗಿದೆ.

ಕೇರಳ ರಾಜ್ಯ ಸರ್ಕಾರವು ತಕ್ಷಣದ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರವು ಸಲಹೆ ನೀಡಿದೆ. ಹಣ್ಣಿನ ಬಾವಲಿಗಳು ನಿಫಾ ವೈರಸ್‌ನ ಸಾಮಾನ್ಯ ಜಲಾಶಯವಾಗಿದ್ದು ಬಾವಲಿಯಿಂದ ಕಲುಷಿತಗೊಂಡ ಹಣ್ಣುಗಳನ್ನು ಆಕಸ್ಮಿಕವಾಗಿ ಸೇವಿಸುವುದರಿಂದ ಮನುಷ್ಯರು ಸೋಂಕಿಗೆ ಒಳಗಾಗಬಹುದು.

ಈ ಹಿಂದೆ, 2023 ದಲ್ಲಿ ಕೇರಳದ ಕೋಝಿಕೋಡ್ ಜಿಲ್ಲೆಯಲ್ಲಿ ಪ್ರಕರಣ ವರದಿಯಾಗುವುದರೊಂದಿಗೆ, ಕೇರಳದಲ್ಲಿ, ನಿಫಾ ವೈರಸ್ ಕಾಯಿಲೆ (NIVD) ಯ ಅನೇಕ ಏಕಾಏಕಿ ಪ್ರಕರಣಗಳು ವರದಿಯಾಗಿದ್ದರೂ, ಇಲ್ಲಿಯವರೆಗೆ ಕರ್ನಾಟಕ ರಾಜ್ಯದಿಂದ ಯಾವುದೇ ಪ್ರಕರಣಗಳು ವರದಿಯಾಗಿಲ್ಲ ಕೇರಳದಲ್ಲಿ ಏಕಾಏಕಿ ಪ್ರಕರಣ ವರದಿಯಾದಾಗಲೆಲ್ಲಾ ಕೇರಳದಿಂದ ಗಡಿಯಾಚೆಗಿನ ಸೋಂಕು ಹರಡುವುದನ್ನು ತಡೆಯಲು ರಾಜ್ಯವು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ಇದನ್ನೂ ಓದಿ: ಕರ್ನಾಟಕಕ್ಕೆ ಡೆಂಗ್ಯೂ ಆತಂಕದ ಜೊತೆ ನಿಫಾ ಕಂಟಕ? ಕೇರಳದಲ್ಲಿ ಬಾಲಕನಿಗೆ ವೈರಸ್ ದೃಢ

ಮಲಪ್ಪುರಂನ ವರದಿ ಪ್ರಕರಣವು ಅಕ್ಯೂಟ್ ಎನ್ನೆಫಾಲಿಟಿಸ್ ಸಿಂಡೋಮ್ (ಎಇಎಸ್) ಪ್ರಕರಣವಾಗಿದ್ದು ಹೆಚ್ಚಿನ ಅಪಾಯದ ಸಂಪರ್ಕಗಳನ್ನು ಪರೀಕ್ಷೆಗೊಳಪಡಿಸಲಾಗಿ ನಿಫಾ ಸೋಂಕು, ಪತ್ತೆಯಾಗಿಲ್ಲದಿರುವುದರಿಂದ ಮನುಷ್ಯರಿಂದ ಮನುಷ್ಯನಿಗೆ ಹರಡುವ ಸಾಧ್ಯತೆಯು ತುಂಬಾ ಕಡಿಮೆಯಾಗಿದೆ. ಹಾಗಾಗಿ ಭಯಪಡುವ ಅಗತ್ಯವಿಲ್ಲ, ಆದರೆ ಮುನ್ನೆಚ್ಚರಿಕೆಯ ಕ್ರಮವಾಗಿ, ಕೇರಳದ ರೋಗ ಪೀಡಿತ ಪ್ರದೇಶವನ್ನು ನಿಫಾ ವೈರಸ್ ಸೋಂಕಿನಿಂದ ಸುರಕ್ಷಿತ ಎಂದು ಘೋಷಿಸುವವರೆಗೆ ಕೇರಳದ ಪೀಡಿತ ಪ್ರದೇಶಗಳಿಗೆ (ಮಲ್ಲಪುರಂ ಜಿಲ್ಲೆ) ಪ್ರಯಾಣವು ಅತ್ಯಂತ ಅವಶ್ಯಕವಾಗಿದಿದ್ದಲ್ಲಿ ಪ್ರಯಾಣವನ್ನು ತಪ್ಪಿಸಬಹುದಾಗಿದೆ ಎಂದು ಸೂಚಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.