Nitin Gadkari: ರಾಜ್ಯದ ವಿವಿಧೆಡೆ ಹೆದ್ದಾರಿ ಕಾಮಗಾರಿಗಳಿಗೆ ನಿತಿನ್ ಗಡ್ಕರಿ ಅನುದಾನ ಬಿಡುಗಡೆ: ಸಿಎಂ ಬೊಮ್ಮಾಯಿ ಧನ್ಯವಾದ
National Highways Development in Karnataka: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಇಂದು ಕರ್ನಾಟಕದ ವಿವಿಧ ಹೆದ್ದಾರಿ ಯೋಜನೆ ಕಾಮಗಾರಿಗಳಿಗೆ 3 ಸಾವಿರ ಕೋಟಿ ರೂಗೂ ಹೆಚ್ಚು ಅನುದಾನ ಪ್ರಕಟಿಸಿದ್ದಾರೆ.
ಬೆಂಗಳೂರು: ಈ ಬಾರಿ ಬಜೆಟ್ನಲ್ಲಿ ಹೆದ್ದಾರಿ ಇಲಾಖೆಗೆ ಬಹಳಷ್ಟು ಅನುದಾನ ಕೊಡಲಾಗಿದೆ. ಇದರಲ್ಲಿ ಕರ್ನಾಟಕದಲ್ಲಿ ಬಹಳಷ್ಟು ಹೆದ್ದಾರಿ ಯೋಜನೆಗಳಿಗೆ ಅನುದಾನ ಕೊಡಲಾಗಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಇಂದು ಕರ್ನಾಟಕದ ವಿವಿಧ ಹೆದ್ದಾರಿ ಯೋಜನೆ ಕಾಮಗಾರಿಗಳಿಗೆ 3 ಸಾವಿರ ಕೋಟಿ ರೂಗೂ ಹೆಚ್ಚು ಅನುದಾನ ಪ್ರಕಟಿಸಿದ್ದಾರೆ. ಇವುಗಳ ಪೈಕಿ ಬಿಜಾರಪುದ ಮಹಾರಾಷ್ಟ್ರ ಗಡಿಭಾಗದ ಕನಮಡಿ–ಬಿಜ್ಜರಗಿ–ತಿಕೋಟ ಸೆಕ್ಷನ್ನಲ್ಲಿ ದ್ವಿಪಥ ರಸ್ತೆಯ ಅಗಲೀಕರಣಕ್ಕೆ 196 ಕೋಟಿ ರೂ ಅನುದಾನ ನೀಡಲಾಗಿರುವ ವಿಚಾರವನ್ನು ತಿಳಿಸಿ ಗಡ್ಕರಿ ಟ್ವೀಟ್ ಮಾಡಿದ್ದಾರೆ.
ಇದೇ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಕೇಂದ್ರ ಸಚಿವರ ಈ ಟ್ವೀಟ್ಗೆ ಪ್ರತಿಕ್ರಿಯಿಸಿ, ವಿಶ್ವದರ್ಜೆಯ ಇನ್ಫ್ರಾಸ್ಟ್ರಕ್ಚರ್ ಅನ್ನು ಒದಗಿಸಿರುವುದಕ್ಕೆ ಧನ್ಯವಾದ ಹೇಳಿದ್ದಾರೆ.
Thanks to Union Minister for Road Transport & Highways @nitin_gadkari Ji,under the aegis of Hon’ble PM @narendramodi Ji, for world class infrastructure. Rs.196.05 Crores sanctioned for widening the 2 lane of Kanamadi – Bijjaragi – Tikota section (Maharashtra – Karnataka Border). https://t.co/fVTS2PKO6I
— Basavaraj S Bommai (@BSBommai) February 8, 2023
ಯಾವ್ಯಾವ ಯೋಜನೆಗೆ ಎಷ್ಟೆಷ್ಟು ಅನುದಾನ?
* ಕನಮಡಿ ಬಿಜ್ಜರಗಿ ಟಿಕೋಟಾ ಸೆಕ್ಷನ್ನಲ್ಲಿ (ಬಿಜಾಪುರ) ದ್ವಿಪಥ ರಸ್ತೆಯ ಅಗಲೀಕರಣ: 196.05 ಕೋಟಿ ರೂ
* ವಿಜಯಪುರ ಕಲಬುರ್ಗಿಯ ಮಹಾರಾಷ್ಟ್ರ ಗಡಿಭಾಗದ ರಾಹೆ-548ಬಿಗೆ ಸೇರುವ ಮುರುಂನಿಂದ ಐಬಿ ಸರ್ಕಲ್ವರೆಗಿನ ದ್ವಿಪಥ ರಸ್ತೆಯ ಅಗಲೀಕರಣ ಯೋಜನೆ: 957.09 ಕೋಟಿ ರೂ
* ಕೊಪ್ಪಳ ಮತ್ತು ಗದಗ್ನಲ್ಲಿ ರಾಹೆ-367ರ ಗಡ್ಡನಕೇರಿ ಸೆಕ್ಷನ್ನಲ್ಲಿ ಕುಕುನೂರ, ಯಲಬುರ್ಗ, ಗಜೇಂದ್ರಗಡದಲ್ಲಿ ಬೈಪಾಸ್ ರಸ್ತೆ ನಿರ್ಮಾಣ ಯೋಜನೆ: 333.96 ಕೋಟಿ ರೂ.
* ಬಾಗಲಕೋಟೆ ಜಿಲ್ಲೆ ರಾಹೆ-367: ಸರ್ಜಾಪುರದಿಂದ ಪಟ್ಟದಕಲ್ಲು ರಸ್ತೆ ಅಗಲೀಕರಣ ಯೋಜನೆ: 445.62 ಕೋಟಿ ರೂ
* ಮೈಸೂರಿನಿಂದ ಕುಶಾಲನಗರದರೆಗಿನ ರಾಹೆ 275, ಗುಡ್ಡೆಹೊಸೂರು ಬಳಿ ನಾಲ್ಕು ಪಥ ರಸ್ತೆ ಅಗಲೀಕರಣ ಯೋಜನೆ: 909.86 ಕೋಟಿ ರೂ
* ಮೈಸೂರು ಜಿಲ್ಲೆ ಯಲವಾಲ ಕೆಆರ್ ನಗರ ರಸ್ತೆ ಜಂಕ್ಷನ್ನಲ್ಲಿ ನಾಲ್ಕು ಲೇನ್ ರಸ್ತೆ ನಿರ್ಮಾಣ ಯೋಜನೆ: 739.39 ಕೋಟಿ ರೂ.