ಲಂಚ ಸ್ವೀಕರಿಸಿ ಜೈಲು ಪಾಲಾದ ಕಾನೂನು ಮಾಪನ ಶಾಸ್ತ್ರ ಇಲಾಖೆ ಅಧಿಕಾರಿ, ಲಂಚ ನೀಡದಿದ್ದಕ್ಕೆ ದೂರುದಾರರಿಗೆ ಏನು ಮಾಡಿದ್ದರು ಗೊತ್ತಾ?
ಪೆಟ್ರೋಲ್ ಬಂಕ್‌ಗೆ ಆಗಮಿಸಿ ತಪಾಸಣೆ ಮಾಡಲು ಹಾಗೂ ಸ್ಟಾಂಪಿಂಗ್ ಮಾಡಿಕೊಡಲು ಎಸ್. ಮಾಲಾ ಕಿರಣ್, ಪೆಟ್ರೋಲ್ ಬಂಕ್ ಮಾಲಿಕರಿಗೆ 8 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಚಿಕ್ಕಬಳ್ಳಾಪುರದ (Chikkaballapur) ಬಸವೇಶ್ವರ ಜ್ಯೂಯೆಲ್ಸ್ ಪೆಟ್ರೋಲ್ ಬಂಕ್ ನ ಪೆಟ್ರೋಲ್ ಬಂಕ್ ಯಂತ್ರೋಪಕರಣಗಳನ್ನು ತಪಾಸಣೆ ಮಾಡಿ ಪ್ರಮಾಣ ಪತ್ರ ನೀಡಲು ಚಿಕ್ಕಬಳ್ಳಾಪುರ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕರಾದ ಎಸ್. ಮಾಲಾ ಕಿರಣ್ 8 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ (bribe) ಚಿಕ್ಕಬಳ್ಳಾಪುರ ಲೋಕಾಯುಕ್ತ ಅಧಿಕಾರಿಗಳು (lokayukta) ನಿನ್ನೆ ಸಾಯಂಕಾಲ ಕಾರ್ಯಾಚರಣೆ ನಡೆಸಿ ಎಸ್. ಮಾಲಾ ಕಿರಣ್ ರನ್ನು ರೆಡ್ ಹ್ಯಾಂಡಾಗಿ ಟ್ರಾಪ್ ಮಾಡಿ ಬಂಧಿಸಿದ್ರು (arrest).
ಜೈಲು ಪಾಲಾದ ಎಸ್. ಮಾಲಾ ಕಿರಣ್:
ಚಿಕ್ಕಬಳ್ಳಾಪುರದ ಬಸವೇಶ್ವರ ಜ್ಯೂಯೆಲ್ಸ್ ಪೆಟ್ರೋಲ್ ಬಂಕ್ ನ ಮಾಲಿಕರಾದ ಭಾಸ್ಕರ್ ರವರ ಮಗ ಜಯಸೂರ್ಯ ರಿಂದ ಲಂಚ ಸ್ವೀಕರಿಸುತ್ತಿದ್ದ ಎಸ್. ಮಾಲಾ ಕಿರಣ್ ರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸಿದ್ರು. ಮೇಲ್ನೋಟಕ್ಕೆ ಆರೋಪ ಸಾಬೀತಾದ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು 14 ದಿನಗಳ ಕಾಲ ಎಸ್. ಮಾಲಾ ಕಿರಣ್ ರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದ್ರಿಂದ ಎಸ್. ಮಾಲಾ ಕಿರಣ್ ಈಗ ಜಿಲ್ಲೆಯ ಚಿಂತಾಮಣಿ ಉಪ ಕಾರ್ಯಗೃಹದ ಹಕ್ಕಿಯಾಗಿದ್ದಾರೆ.
ಎಸ್. ಮಾಲಾ ಕಿರಣ್ ಬೆಂಗಳೂರಿನ ಮನೆಯ ಮೇಲೆ ಲೋಕಾಯುಕ್ತ ರೈಡ್:
ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕರಾದ ಶ್ರೀಮತಿ ಎಸ್. ಮಾಲಾ ಕಿರಣ್ ಗೆ ಸೇರಿದ ಮನೆ ಇದೆ. ಮತ್ತೊಂದೆಡೆ ಎಸ್. ಮಾಲಾ ಕಿರಣ್ ಬಗ್ಗೆ ವ್ಯಾಪಕ ಭ್ರಷ್ಟಾಚಾರದ ಆರೋಪ ಕೇಳಿ ಬಂದ ಹಿನ್ನಲೆ ಚಿಕ್ಕಬಳ್ಳಾಪುರದ ಲೋಕಾಯುಕ್ತ ಎಸ್ಪಿ ಪವನ್ ನೆಚ್ಚೂರು ನೇತೃತ್ವದಲ್ಲಿ ಲೋಕಾಯುಕ್ತ ಅಧಿಕಾರಿಗಳು, ಬೆಂಗಳೂರಿನ ನಿವಾಸದ ಮೇಲೂ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಮನೆಯಲ್ಲಿನ ಕೆಲವು ದಾಖಲೆಗಳ ಪರಿಶೀಲನೆ ನಡೆಸುತ್ತಿರುವುದಾಗಿ ಎಸ್ಪಿ ಪವನ್ ನೆಜ್ಜೂರು ಟಿವಿ9 ಗೆ ಮಾಹಿತಿ ನೀಡಿದ್ದಾರೆ.
ಲಂಚ ನೀಡದಿದ್ದಕ್ಕೆ ಹಿಯಾಳಿಸಿದ್ದ ಎಸ್. ಮಾಲಾ ಕಿರಣ್:
ಪೆಟ್ರೋಲ್ ಬಂಕ್‌ಗೆ ಆಗಮಿಸಿ ತಪಾಸಣೆ ಮಾಡಲು ಹಾಗೂ ಸ್ಟಾಂಪಿಂಗ್ ಮಾಡಿಕೊಡಲು ಎಸ್. ಮಾಲಾ ಕಿರಣ್, ಪೆಟ್ರೋಲ್ ಬಂಕ್ ಮಾಲಿಕರಿಗೆ 8 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಆದ್ರೆ ಪೆಟ್ರೋಲ್ ಬಂಕ್ ಮಾಲಿಕ ಲಂಚ ಕೊಡಲು ನೀರಾಕರಿಸಿದ್ದಕ್ಕೆ ಎಸ್. ಮಾಲಾ ಕಿರಣ್ ಬಂಕ್ ಮಾಲಿಕ ಭಾಸ್ಕರ್ ಹಾಗೂ ಅವರ ಮಗ ಜಯಸೂರ್ಯರನ್ನು ಹಿಯಾಳಿಸಿದ್ದರು. ಏನ್ ಲೋಕಾಯುಕ್ತರಿಗೆ ದೂರು ಕೊಡ್ತಿಯಾ, ಕೊಡು ಹೋಗು, ಏನ್ ಹಿಡಿದುಕೊಡ್ತಿಯಾ ಕೊಡು ಹೋಗು, ಸರ್ಕಾರಿ ಪೀಸ್ ಇಷ್ಟು ಇದೆಯೊ ಅಷ್ಟು ಲಂಚ ಕೊಡಬೇಕು ಇಲ್ಲವಾದ್ರೆ ಕೆಲಸ ಮಾಡಿಕೊಡಲ್ಲ ಅಂತ ಹಿಯಾಳಿಸದ್ರಂತೆ.
ಜಿಲ್ಲೆಯ ಪೇಟ್ರೋಲ್ ಬಂಕ್ ಗಳ ಮೇಲೆ ಅನುಮಾನ:
ಸ್ವತಃ ಚಿಕ್ಕಬಳ್ಳಾಪುರ ಜಿಲ್ಲೆಯ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕರಾದ ಎಸ್. ಮಾಲಾ ಕಿರಣ್, ಪೆಟ್ರೋಲ್ ಬಂಕ್ ಗಳಲ್ಲಿ ಮಾಮೂಲು ಹಾಗೂ ಲಂಚ ವಸೂಲಿ ಮಾಡ್ತಿರುವ ಆರೋಪಗಳು ಕೇಳಿ ಬಂದ ಕಾರಣ ಜಿಲ್ಲೆಯ ಪೆಟ್ರೋಲ್ ಬಂಕ್ ಗಳ ಮಾಪನ ತಪಾಸಣೆ ಮಾಡಬೇಕು, ಅಧಿಕಾರಿಗಳು ಹಾಗೂ ಪೆಟ್ರೋಲ್ ಬಂಕ್ ಗಳ ಮಾಲಿಕರು ಶಾಮೀಲಾಗಿ ಗ್ರಾಹಕರಿಗೆ ವಂಚನೆ ಮಾಡ್ತಿರುವ ಆರೋಪಗಳು ಕೇಳಿ ಬಂದಿವೆ.
ವರದಿ: ಭೀಮಪ್ಪ ಪಾಟೀಲ, ಟಿವಿ9, ಚಿಕ್ಕಬಳ್ಳಾಪುರ