
ಅಹಮದಾಬಾದ್: ಬಿಡದಿ ನಿತ್ಯಾನಂದ ಸ್ವಾಮಿಯ ಶಿಷ್ಯೆಯರ ನಾಪತ್ತೆ ಪ್ರಕರಣ ಮತ್ತೊಂದು ಹಂತ ತಲುಪಿದೆ. ಫೋನ್ ಮೂಲಕ ಪೊಲೀಸರು ನಿತ್ಯಾನಂದನ ಶಿಷ್ಯೆಯರನ್ನು ಸಂಪರ್ಕಿಸಿದ್ದಾರೆ. ಆ ಶಿಷ್ಯೆಯರಿಬ್ಬರೂ ಕೊರಿಯಾ ಮೂಲದ ನಂಬರ್ ಮೂಲಕ ಮಾತಾಡಿದ್ದಾರೆ. ಕೋರಿಯಾದ ಪ್ರಾಕ್ಸಿ ನಂಬರ್ ನಲ್ಲಿ ಮಾತನಾಡಿದಾರೆ ಎಂದು ತಿಳಿದುಬಂದಿದೆ.
ಹೀಗೆ ಗುಜರಾತ್ ಪೊಲೀಸರನ್ನ ಸಂಪರ್ಕಿಸಿರುವ ಶಿಷ್ಯೆಯರಿಬ್ಬರೂ ಬಂಧಿಸಿರುವ ಇನ್ನಿಬ್ಬರನ್ನು ಬಿಡುಗಡೆಗೊಳಿಸುವಂತೆ ಷರತ್ತು ವಿಧಿಸಿದ್ದಾರೆ. ಅವರಿಬ್ಬರನ್ನು ಬಿಡುಗಡೆಗೊಳಿಸಿದ್ರೆ ಮಾತ್ರ ತಾವು ಪೊಲೀಸರೆದುರು ಹಾಜರಾಗುವುದಾಗಿ ಫೋನ್ನಲ್ಲಿ ತಿಳಿಸಿದ್ದಾರೆ. ನಾವಿಬ್ಬರು ಪ್ರಾಪ್ತ ವಯಸ್ಕರು ಎಂದೂ ಆ ಸಹೋದರಿಯರಿಬ್ಬರೂ ಪೊಲೀಸರಿಗೆ ಖಡಕ್ಕಾಗಿ ಹೇಳಿದ್ದಾರೆ.
Published On - 5:10 pm, Tue, 3 December 19