ಬಸ್ಗಳಲ್ಲಿ ಹೊಸ ಲಗೇಜ್ ನಿಯಮ ಜಾರಿಗೆ ತಂದಿಲ್ಲ: ಕೆಎಸ್ಆರ್ಟಿಸಿ
ಹೊಸ ಲಗೇಜ್ ನಿಯಮ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿದ ಸುದ್ದಿಗೆ ಪ್ರತಿಕ್ರಿಯಿಸಿ ಕೆಎಸ್ಆರ್ಟಿಸಿ ಸ್ಪಷ್ಟೀಕರಣ ನೀಡಿದೆ. ಹೊಸ ಲಗೇಜ್ ನಿಯಮಗಳನ್ನು ಜಾರಿಗೆ ತಂದಿಲ್ಲ ಎಂದು ಹೇಳಿದೆ. 1999ರಿಂದಲೇ ಲಗೇಜ್ ಸಾಗಣೆಗೆ ನಿಯಮಗಳಿವೆ ಎಂದು ತಿಳಿಸಿದೆ. 2022ರ ಅಕ್ಟೋಬರ್ 28ರಿಂದ ದರ ಪರಿಷ್ಕರಣೆ ಮತ್ತು 30 ಕೆಜಿ ವರೆಗೆ ಉಚಿತ ಲಗೇಜ್ ಸಾಗಣೆಗೆ ಅವಕಾಶವಿದೆ. ಯಾವುದೇ ಹೊಸ ನಿಯಮಗಳಿಲ್ಲ ಎಂದು ಕೆಎಸ್ಆರ್ಟಿಸಿ ಸ್ಪಷ್ಟಪಡಿಸಿದೆ.

ಬೆಂಗಳೂರು, ಜುಲೈ 29: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (KSRTC) ನೂತನ ಲಗೇಜ್ ರೂಲ್ಸ್ (KSRTC New Luggage Rules) ಜಾರಿ ಮಾಡಿದೆ ಎಂದು ಸಾಮಾಜಿಕ ಜಾಲತಾಣ ಮತ್ತು ಕೆಲ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಸಂಬಂಧ ಕೆಎಸ್ಆರ್ಟಿಸಿ ಸ್ಪಷ್ಟೀಕರಣ ನೀಡಿದೆ. ಸಾಮಾಜಿಕ ಜಾಲತಾಣ ಮತ್ತು ಕೆಲವೊಂದು ಮಾಧ್ಯಮಗಳಲ್ಲಿ ಕೆಎಸ್ಆರ್ಟಿಸಿಯಲ್ಲಿ ನೂತನ ಲಗೇಜ್ ನಿಯಮ ಜಾರಿ ಎಂದು ಪ್ರಕಟವಾಗಿರುವುದು ಸತ್ಯಕ್ಕೆ ದೂರವಾಗಿರುತ್ತದೆ. ನಿಗಮ ಯಾವುದೇ ಹೊಸ ಲಗೆಜ್ ನಿಯಮಗಳನ್ನು ಜಾರಿಗೆ ತಂದಿಲ್ಲ ಎಂದು ಹೇಳಿದೆ.
ಕೆಎಸ್ಆರ್ಟಿಸಿ ಸ್ಪಷ್ಟನೆ
“ನಿಗಮದ ಬಸ್ಸುಗಳಲ್ಲಿ ಸಾರ್ವಜನಿಕ ಪ್ರಯಾಣಿಕರ ಲಗೇಜ್ / ಸರಕುಗಳನ್ನು ಸಾಗಿಸಲು ಹಿಂದಿನಿಂದಲೂ ವ್ಯವಸ್ಥೆ ಜಾರಿಯಿದ್ದು, ಅಂದರೆ ವಾಷಿಂಗ್ ಮಷಿನ್, ಫ್ರಿಡ್ಜ್, ಟ್ರಕ್ ಟಯರ್, ಅಲ್ಯೂಮಿನಿಯಂ ಪೈಪ್, ಕಬ್ಬಿಣದ ಪೈಪ್, ಪಾತ್ರೆ, ಬೆಕ್ಕು, ನಾಯಿ, ಮೊಲಗಳನ್ನು ಸಾಗಿಸಲು ಅವಕಾಶಗಳನ್ನು ದಿನಾಂಕ 05-11-1999 ರಿಂದಲೇ (ಬಸ್ಸಿನಲ್ಲಿರುವ ಸ್ಥಳಾವಕಾಶಕ್ಕೆ ಅನುಗುಣವಾಗಿ) ನಿಗಮದಲ್ಲಿ ಜಾರಿಯಲ್ಲಿರುತ್ತದೆ.”
“ಈ ವ್ಯವಸ್ಥೆಯ ಅನುಷ್ಠಾನದಲ್ಲಿ ಕಾಲದಿಂದ ಕಾಲಕ್ಕೆ ದರಗಳ ಪರಿಷ್ಕರಣೆ, 30 ಕೆಜಿ ವರೆಗೆ ಲಗೇಜ್ ಕೊಂಡೊಯ್ಯಲು ಉಚಿತ ಅವಕಾಶ, ಸಾಗಿಸಬಹುದಾದ ವಸ್ತುಗಳ ಪ್ರಯಾಣ ಇತ್ಯಾದಿಗಳನ್ನು ಉಲ್ಲೇಖಿಸಿ ಪ್ರಸ್ತುತ ದಿನಾಂಕ: 28-10-2022 ರಿಂದ ಲಗೇಜ್ ನಿಯಮ / ಸುತ್ತೋಲೆ ಜಾರಿಯಲ್ಲಿರುತ್ತದೆ.”
“ದಿನಾಂಕ: 28-10-2022 ರ ನಂತರ ಇತ್ತೀಚೆಗೆ ಯಾವುದೇ ಹೊಸ ಲಗೇಜ್ ನಿಯಮ / ಸುತ್ತೋಲೆಯನ್ನು ನಿಗಮದಲ್ಲಿ ಜಾರಿಗೆ ತಂದಿರುವುದಿಲ್ಲ ಎಂಬುದನ್ನು ತಮ್ಮ ಆದ್ಯ ಗಮನಕ್ಕೆ ತರಲಾಗಿದೆ” ಎಂದು ಪತ್ರಿಕಾ ಪ್ರಕರಟಣೆಯಲ್ಲಿ ತಿಳಿಸಿದೆ.
ಏನಿದು ನಿಯಮ ವಿವಾದ
ಕೆಎಸ್ಆರ್ಟಿಸಿ ಬಸ್ನಲ್ಲಿ 30 ಕೆಜಿಯವರೆಗೂ ಪ್ರಯಾಣಿಕರು ಉಚಿತವಾಗಿ ಲಗೇಜು ಉಚಿತವಾಗಿ ತೆಗೆದುಕೊಂಡು ಹೋಗಬಹುದಾಗಿದೆ. 30 ಕೆಜಿ ಮೇಲೆ ಲಗೇಜ್ ಇದ್ದರೆ ಹಣ ಪಾವತಿ ಮಾಡಬೇಕಿದೆ. 40 ಕೆಜಿ ತೂಕವಿರುವ ವಾಷಿಂಗ್ ಮಿಷಿನ್, ಫ್ರಿಡ್ಜ್, 25 ಕೆಜಿ ತೂಕದ ಖಾಲಿ ಕಂಟೈನರ್ ಬಸ್ನಲ್ಲಿ ಸಾಗಿಸಲೂ ಅವಕಾಶ ನೀಡಲಾಗಿದೆ ಎಂದು ವರದಿಯಾಗಿತ್ತು.
ಇದನ್ನೂ ಓದಿ: ಆಗಸ್ಟ್ 5ರಂದು ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿ 4 ನಿಗಮಗಳಿಂದ ಸಾರಿಗೆ ಮುಷ್ಕರಕ್ಕೆ ಕರೆ
ಕಬ್ಬಿಣ ಪೈಪ್ ಮೋಟಾರ್ಗಳನ್ನೂ ಸಾಗಿಸಬಹುದು. ಮೊಲ, ನಾಯಿ ಮರಿ, ಬೆಕ್ಕು, ಪಕ್ಷಿಯನ್ನೂ ಸಾಗಿಸಬಹದು. ನಾಯಿಯನ್ನು ಸಾಗಿಸಬಹುದು. ನಾಯಿಯನ್ನು ಚೈನ್ನಲ್ಲಿ ಬಿಗಿದು ಕಾಳಜಿಯೊಂದಿಗೆ ಬಸ್ನಲ್ಲಿ ಸಾಗಿಸಬಹುದು ಎಂದು ವರದಿಯಾಗಿತ್ತು. ಈ ವರದಿ ಸತ್ಯಕ್ಕೆ ದೂರವಾಗಿದೆ ಎಂದು ಕೆಎಸ್ಆರ್ಟಿಸಿ ಹೇಳಿದ್ದು, ಸ್ಪಷ್ಟೀಕರಣ ನೀಡಿದೆ.




