ನಿಮ್ಮ ಆಶೀರ್ವಾದ ಇರೋವರೆಗೂ ಯಾರೂ ನನ್ನ ಏನೂ ಮಾಡೋಕಾಗಲ್ಲ: ವೇದಿಕೆ ಮೇಲೆ ಗುಡುಗಿದ ಸಿಎಂ ಸಿದ್ದರಾಮಯ್ಯ

| Updated By: ಗಂಗಾಧರ​ ಬ. ಸಾಬೋಜಿ

Updated on: Sep 29, 2024 | 6:23 PM

ಮೈಸೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಿಮ್ಮ ಆಶೀರ್ವಾದ ಇರೋವರೆಗೂ ಯಾರೂ ನನ್ನ ಏನೂ ಮಾಡೋಕಾಗಲ್ಲ ಎಂದು ವಿಶ್ವಸ ವ್ಯಕ್ತಪಡಿಸಿದ್ದಾರೆ. ನಾನು ಯಾರಿಗೂ ಹೆದರಲ್ಲ ಜಗ್ಗಲ್ಲ, ಬಗ್ಗಲ್ಲ. ನನ್ನ ಆತ್ಮಸಾಕ್ಷಿಗೆ ಗೊತ್ತಿದೆ ನಾನು ಕ್ಲಿಯರ್ ಇದ್ದೇನೆ ಎಂದು ಹೇಳಿದ್ದಾರೆ.

ನಿಮ್ಮ ಆಶೀರ್ವಾದ ಇರೋವರೆಗೂ ಯಾರೂ ನನ್ನ ಏನೂ ಮಾಡೋಕಾಗಲ್ಲ: ವೇದಿಕೆ ಮೇಲೆ ಗುಡುಗಿದ ಸಿಎಂ ಸಿದ್ದರಾಮಯ್ಯ
ನಿಮ್ಮ ಆಶೀರ್ವಾದ ಇರೋವರೆಗೂ ಯಾರೂ ನನ್ನ ಏನೂ ಮಾಡೋಕಾಗಲ್ಲ: ವೇದಿಕೆ ಮೇಲೆ ಗುಡುಗಿದ ಸಿಎಂ ಸಿದ್ದರಾಮಯ್ಯ
Follow us on

ಮೈಸೂರು, ಸೆಪ್ಟೆಂಬರ್​ 29: ನಿಮ್ಮ ಆಶೀರ್ವಾದ ಇರೋವರೆಗೂ ಯಾರೂ ನನ್ನ ಏನೂ ಮಾಡೋಕಾಗಲ್ಲ ಎಂದು ವೇದಿಕೆಯಲ್ಲಿ ಗಟ್ಟಿ ಧ್ವನಿಯಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಗುಡುಗಿದ್ದಾರೆ. ನಗರದ ಅಶೋಕಪುರಂನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, ಸ್ವಲ್ಪದಿನ ತೊಂದ್ರೆ ಕೊಡಬಹುದು ಅಷ್ಟೇ. ಕಾನೂನು ಮೂಲಕ ಏನು‌ ಮಾಡುವುದಕ್ಕೆ ಆಗಲ್ಲ ಎಂದು ಹೇಳಿದ್ದಾರೆ.

ವಿಪಕ್ಷದವರು ರಾಜೀನಾಮೆ ಕೇಳುತ್ತಿದ್ದಾರಂದು ನನಗೆ ಎಷ್ಟೋ ಜನ ಹೇಳುತ್ತಿದ್ದಾರೆ. ನಾನು ಯಾರಿಗೂ ಹೆದರಲ್ಲ ಜಗ್ಗಲ್ಲ, ಬಗ್ಗಲ್ಲ. ನನ್ನ ಆತ್ಮಸಾಕ್ಷಿಗೆ ಗೊತ್ತಿದೆ ನಾನು ಕ್ಲಿಯರ್ ಇದ್ದೇನೆ ಎಂದು. ನಾನು ಹೆದರುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಸಿಎಂ ಮಾತು ಕೇಳಿ ನೆರದಿದ್ದ ಜನರು ಹೌದು ಹುಲಿಯಾ ಎಂದಿದ್ದಾರೆ.

ಇದನ್ನೂ ಓದಿ: ಮುಡಾ ಪ್ರಕರಣ ನಿಭಾಯಿಸುವಲ್ಲಿ ಸಿಎಂ ಫೇಲ್​​, ಸಿದ್ದರಾಮಯ್ಯ ವಿರುದ್ಧ ಸಚಿವರು ಬೇಸರ

ಈ ಬಾರಿ ಶ್ರೀವತ್ಸ ಗೆದಿದ್ದಾನೆ ಸೋಮಶೇಖರ್ ಸೋತಿದ್ದಾನೆ. ನಾನು, ಮಹದೇವಪ್ಪ, ಶ್ರೀನಿವಾಸ ಪ್ರಸಾದ್ ಎಲ್ಲರೂ ಅಂಬೇಡ್ಕರ್ ವಾದಿಗಳು. ಅಂಬೇಡ್ಕರ್ ಸಂವಿಧಾನವನ್ನು ದಲಿತರಿಗೆ ಮಾತ್ರ ಮಾಡಲಿಲ್ಲ. ಅವಕಾಶ ವಂಚಿತರೆಲ್ಲರಿಗೂ ಮಾಡಿದ್ದಾರೆ.

ಅಂಬೇಡ್ಕರ್ ಸಂವಿಧಾನದಿಂದ ನಾನು ಮುಖ್ಯಮಂತ್ರಿಯಾಗಲು ಸಾಧ್ಯವಾಯಿತು. ಪೌರಕಾರ್ಮಿಕರು ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಯಾಗಲು ಅವಕಾಶ ಕೊಟ್ಟಿರುವುದು ಸಂವಿಧಾನ. ದಲಿತರ ಆರ್ಥಿಕ ಸಾಮಾಜಿಕ ಬದಲಾವಣೆಯಾಗಬೇಕಾದರೇ ಜನಸಂಖ್ಯೆಗೆ ಅನುಗುಣವಾಗಿ ಖರ್ಚು ಮಾಡಬೇಕು ಎಂದಿದ್ದಾರೆ. ಗ್ಯಾರಂಟಿ ಯೋಜನೆ ವಿಚಾರವಾಗಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆ ಯಾವುದಕ್ಕೆ ಕಾರಣಕ್ಕೂ ನಿಲ್ಲಿಸಲ್ಲ ಎಂದು ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ಮೇಲೆ ರಾಜಕೀಯ ದಾಳಿ ನಡೆಯುತ್ತಿದೆ: ಡಾ.ಹೆಚ್​.ಸಿ.ಮಹದೇವಪ್ಪ

ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್​.ಸಿ.ಮಹದೇವಪ್ಪ ಮಾತನಾಡಿದ್ದು, ಸಿಎಂ ಸಿದ್ದರಾಮಯ್ಯ ಮೇಲೆ ರಾಜಕೀಯ ದಾಳಿ ನಡೆಯುತ್ತಿದೆ. ಯಾವುದೇ ತಪ್ಪು ಮಾಡದ, ಭ್ರಷ್ಟಾಚಾರ ಮಾಡದಿರುವ ಸಿಎಂ ಮೇಲೆ ರಾಜಕೀಯ ದಾಳಿ ನಡೆಯುತ್ತಿದೆ. ಹೀಗಾಗಿ ಹಿಂದುಳಿದ ವರ್ಗಗಳು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಕಾರ್ಯಕ್ರಮದಲ್ಲಿ ಜನರಿಗೆ ಕರೆ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.