Noise Smart Products| ನಾಯ್ಸ್ ಸ್ಮಾರ್ಟ್ ಉತ್ಪನ್ನಗಳು ಈಗ ರಿಲಯನ್ಸ್ ಡಿಜಿಟಲ್ ಮಳಿಗೆಯಲ್ಲಿಯೂ ಲಭ್ಯ!

Noise smartly partners with Reliance Retail| ಈ ಪಾಲುದಾರಿಕೆ ಅಡಿ, ನಾಯ್ಸ್‌ನ ಸಂಪೂರ್ಣ ಸ್ಮಾರ್ಟ್ ಉತ್ಪನ್ನಗಳು ರಿಲಯನ್ಸ್ ಡಿಜಿಟಲ್‌ನ ಆನ್‌ಲೈನ್ ಮತ್ತು ಆಫ್‌ಲೈನ್ ಮಳಿಗೆಗಳಲ್ಲಿ ಈಗ ಲಭ್ಯವಾಗುತ್ತಿವೆ. ನೂತನವಾಗಿ ಪರಿಚಯಿಸಲಾದ 1.55" ಟ್ರೂ ವೀವ್ ಡಿಸ್‌ಪ್ಲೇ ಸಾಧನವನ್ನು ಒಳಗೊಂಡ ಕಲರ್‌ಫಿಟ್ ಪ್ರೋ 3 ಸ್ಮಾರ್ಟ್ ವಾಚ್‌ಗಳ ಶ್ರೇಣಿಯ ಉತ್ಪನ್ನಗಳೂ ರಿಲಯನ್ಸ್ ಡಿಜಿಟಲ್ ಸ್ಟೋರ್‌ಗಳಲ್ಲಿ ಲಭ್ಯ.

Noise Smart Products| ನಾಯ್ಸ್ ಸ್ಮಾರ್ಟ್ ಉತ್ಪನ್ನಗಳು ಈಗ ರಿಲಯನ್ಸ್ ಡಿಜಿಟಲ್ ಮಳಿಗೆಯಲ್ಲಿಯೂ ಲಭ್ಯ!
ಅಗ್ರಗಣ್ಯ ನಾಯ್ಸ್ ಸ್ಮಾರ್ಟ್ ಉತ್ಪನ್ನಗಳು ಈಗ ರಿಲಯನ್ಸ್ ಡಿಜಿಟಲ್ ಮಳಿಗೆಯಲ್ಲಿಯೂ ಲಭ್ಯ
Follow us
ಸಾಧು ಶ್ರೀನಾಥ್​
|

Updated on: Mar 18, 2021 | 10:51 AM

ಆಧುನಿಕ ಸ್ಮಾರ್ಟ್​ ಜೀವನಶೈಲಿ ಹಾಸುಹೊಕ್ಕಿರುವ ಪ್ರಮುಖ ಬ್ರಾಂಡ್​ಗಳಲ್ಲಿ ನಾಯ್ಸ್ ಕಂಪನಿಯ ಸ್ಮಾರ್ಟ್​ ಉತ್ಪನ್ನಗಳು ಅಗ್ರಗಣ್ಯ ಸ್ಥಾನದಲ್ಲಿವೆ. ಅದೀಗ ಭಾರತದ ಅತಿದೊಡ್ಡ ಮತ್ತು ಮುಂಚೂಣಿ ರೀಟೇಲ್‌ಗಳಲ್ಲಿ ಒಂದಾದ ರಿಲಯನ್ಸ್ ರಿಟೇಲ್ ಜೊತೆಗಿನ ಪಾಲುದಾರಿಕೆ ಸಾಧಿಸಿರುವುದಾಗಿ ಪ್ರಕಟಿಸಿದೆ. ಈ ಮೂಲಕ ರಿಲಯನ್ಸ್ ರಿಟೇಲ್ ಕಂಪನಿಯು ಭಾರತದಲ್ಲಿನ ತನ್ನ ರೀಟೇಲ್ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸಲು ಮುಂದಾಗಿದೆ.

ಈ ಪಾಲುದಾರಿಕೆ ಅಡಿ, ನಾಯ್ಸ್‌ನ ಸಂಪೂರ್ಣ ಸ್ಮಾರ್ಟ್ ಉತ್ಪನ್ನಗಳು ರಿಲಯನ್ಸ್ ಡಿಜಿಟಲ್‌ನ ಆನ್‌ಲೈನ್ ಮತ್ತು ಆಫ್‌ಲೈನ್ ಮಳಿಗೆಗಳಲ್ಲಿ ಈಗ ಲಭ್ಯವಾಗುತ್ತಿವೆ. ನೂತನವಾಗಿ ಪರಿಚಯಿಸಲಾದ 1.55″ ಟ್ರೂ ವೀವ್ ಡಿಸ್‌ಪ್ಲೇ ಸಾಧನವನ್ನು ಒಳಗೊಂಡ ಕಲರ್‌ಫಿಟ್ ಪ್ರೋ 3 ಸ್ಮಾರ್ಟ್ ವಾಚ್‌ಗಳ ಶ್ರೇಣಿಯ ಉತ್ಪನ್ನಗಳೂ ರಿಲಯನ್ಸ್ ಡಿಜಿಟಲ್ ಸ್ಟೋರ್‌ಗಳಲ್ಲಿ ಲಭ್ಯ.

ಅಗ್ರಗಣ್ಯ ನಾಯ್ಸ್ ಸ್ಮಾರ್ಟ್ ಉತ್ಪನ್ನಗಳು ಈಗ ರಿಲಯನ್ಸ್ ಡಿಜಿಟಲ್ ಮಳಿಗೆಯಲ್ಲಿಯೂ ಲಭ್ಯ

Reliance Retail Noise partners

ರಿಲಯನ್ಸ್ ರೀಟೇಲ್ ಜತೆ ಕೈಜೋಡಿಸಿದ ಅಗ್ರಗಣ್ಯ ಸ್ಮಾರ್ಟ್ ಉತ್ಪನ್ನಗಳ ನಾಯ್ಸ್ ಪಾಲುದಾರಿಕೆ!

ಭಾರತದ ಅತಿ ದೊಡ್ಡ ಮಾದರಿ ರೀಟೇಲ್ (ಎಲ್‌ಎಫ್‌ಆರ್) ಸರಣಿಯಾದ ರಿಲಯನ್ಸ್ ರಿಟೇಲ್‌ನ ವಿಶಾಲ ನೆಟ್​ವರ್ಕ್​ ಸಾಮರ್ಥ್ಯದಿಂದಾಗಿ ನಾಯ್ಸ್, ಆಫ್‌ಲೈನ್ ಮತ್ತು ಆನ್‌ಲೈನ್ ವೇದಿಕೆಗಳ ಮೂಲಕ ಭಾರತದಲ್ಲಿ ತಳಮಟ್ಟದಲ್ಲಿ ತನ್ನ ಅಸ್ತಿತ್ವ ಭದ್ರಪಡಿಸಿಕೊಳ್ಳಲು ಹಾಗೂ ಬೃಹತ್ ಗ್ರಾಹಕ ನೆಲೆಯ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ಉದ್ದೇಶಿಸಿದೆ.

Reliance Retail Noise partners

ರಿಲಯನ್ಸ್ ರೀಟೇಲ್ ಜತೆ ಕೈಜೋಡಿಸಿದ ಅಗ್ರಗಣ್ಯ ಸ್ಮಾರ್ಟ್ ಉತ್ಪನ್ನಗಳ ನಾಯ್ಸ್ ಪಾಲುದಾರಿಕೆ!

ಈ ಸಹಭಾಗಿತ್ವದ ಬಗ್ಗೆ ಮಾತನಾಡಿರುವ ನಾಯ್ಸ್ ಸಹ ಸಂಸ್ಥಾಪಕ ಗೌರವ್ ಖತ್ರಿ, ರಿಲಯನ್ಸ್ ಡಿಜಿಟಲ್‌ನ ರೀಟೇಲ್ ಜತೆ ದೇಶಾದ್ಯಂತ ನಮ್ಮ ಪ್ರಸ್ತುತ ಆನ್‌ಲೈನ್ ಪಾಲುದಾರಿಕೆ ಪಡೆದುಕೊಳ್ಳಲು ಸಂತಸವಾಗುತ್ತಿದೆ. ಈ ಸಹಭಾಗಿತ್ವದಿಂದ, ನಾವು ನಮ್ಮ ಆಫ್‌ಲೈನ್ ಅಸ್ತಿತ್ವವನ್ನು ಬಲಪಡಿಸಿಕೊಂಡಿರುವುದು ಮಾತ್ರವಲ್ಲದೆ, ಮತ್ತಷ್ಟು ಗ್ರಾಹಕರಿಗೆ ಸೇವೆ ಸಲ್ಲಿಸಲು ನಮಗೆ ಸಾಧ್ಯವಾಗಲಿದೆ. ನಾವು ಮಾಡಿಕೊಳ್ಳುವ ಪ್ರತಿ ಪಾಲುದಾರಿಕೆಯಿಂದಲೂ ನಮ್ಮ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗುವುದು ಮತ್ತು ಸ್ಮಾರ್ಟ್ ಉತ್ಪನ್ನಗಳು ದೇಶದೆಲ್ಲೆಡೆ ಪ್ರತಿಯೊಬ್ಬರಿಗೂ ಲಭ್ಯವಂತಾಗುವುದು ನಮ್ಮ ಉದ್ದೇಶವಾಗಿದೆ ಎಂದಿದ್ದಾರೆ.

ಭಾರತದಲ್ಲಿನ ತನ್ನ ಅಸ್ತಿತ್ವವನ್ನು ವಿಸ್ತರಿಸಲು ರಿಲಯನ್ಸ್ ರೀಟೇಲ್ ಜತೆ ನಾಯ್ಸ್ ಪಾಲುದಾರಿಕೆ

ಪಾಲುದಾರಿಕೆ ಕುರಿತು ಮಾತನಾಡಿರುವ ರಿಲಯನ್ಸ್ ಡಿಜಿಟಲ್‌ನ ಮುಖ್ಯ ಕಾರ್ಯನಿರ್ವಾಹಕ ಬ್ರಿಯಾನ್ ಬೇಡ್, ನಮ್ಮ ಮಳಿಗೆಗಳಲ್ಲಿ ನಾಯ್ಸ್‌ ಸ್ಮಾರ್ಟ್​ ಉತ್ಪನ್ನಗಳನ್ನು ತರುತ್ತಿರುವುದಕ್ಕೆ ಮತ್ತು ನಮ್ಮಲ್ಲಿನ ವೇರಬಲ್ ಶ್ರೇಣಿಯ ವಿಭಾಗವನ್ನು ವಿಸ್ತರಿಸುತ್ತಿರುವುದಕ್ಕೆ ಸಂತಸವಾಗುತ್ತಿದೆ. ನಾಯ್ಸ್ ನಿರಂತರವಾಗಿ ಅತ್ಯಧಿಕ ಗುಣಮಟ್ಟದ ಉತ್ಪನ್ನಗಳನ್ನು ನೀಡುತ್ತಿದೆ. ಎಲ್ಲ ಗ್ರಾಹಕರಿಗೂ ತಮ್ಮ ತಂತ್ರಜ್ಞಾನ ಲಭ್ಯವಾಗುವಂತೆ ಮಾಡುವ ಅವರ ಉದ್ದೇಶವು, ಪ್ರತಿಯೊಬ್ಬರಿಗೂ ತಂತ್ರಜ್ಞಾನ ದೊರಕುವಂತೆ ಮಾಡುವ ರಿಲಯನ್ಸ್ ಡಿಜಿಟಲ್‌ನ ಬದ್ಧತೆಯೊಂದಿಗೆ ನಿಜಕ್ಕೂ ಪೂರಕವಾಗಿದೆ. ಮುಂದಿನ ವರ್ಷಗಳಲ್ಲಿ ಪ್ರಬಲ, ಅರ್ಥವತ್ತಾದ ಪಾಲುದಾರಿಕೆಯನ್ನು ನಾವು ನಿರೀಕ್ಷಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

Noise smartly partners with Reliance Retail

ರಿಲಯನ್ಸ್ ರೀಟೇಲ್ ಜತೆ ಕೈಜೋಡಿಸಿದ ಅಗ್ರಗಣ್ಯ ಸ್ಮಾರ್ಟ್ ಉತ್ಪನ್ನಗಳ ನಾಯ್ಸ್ ಪಾಲುದಾರಿಕೆ!

ಭಾರತದಲ್ಲಿ ಹಿಯರಬಲ್ ಮತ್ತು ವೇರಬಲ್ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ನಾಯ್ಸ್ ಪೂರೈಕೆ ಮಾಡುತ್ತಿದೆ ಮತ್ತು ಎರಡೂ ವಿಭಾಗಗಳಲ್ಲಿ ಮಾರುಕಟ್ಟೆ ನಾಯಕನಾಗಿ ಬೆಳೆದಿದೆ. ಈ ಕಂಪೆನಿಯು ಇತ್ತೀಚೆಗೆ ಭಾರತದ ನಂಬರ್ 1 ವಾಚ್ ಬ್ರ್ಯಾಂಡ್ ಎಂದು ಐಡಿಸಿಯ ವರ್ಲ್ಡ್‌ವೈಡ್ ಕ್ವಾರ್ಟರ್ಲಿ ವೇರಬಲ್ ಡಿವೈಸ್ ಟ್ರ್ಯಾಕರ್, ಕ್ಯೂ4, 2020 ಗುರುತಿಸಿದೆ. ಪ್ರಸ್ತುತ ಈ ಬ್ರಾಂಡ್‌ನ ಮಾರುಕಟ್ಟೆ ಷೇರು ವರದಿಯಲ್ಲಿ ಉಲ್ಲೇಖಿಸಿರುವಂತೆ ಯುನಿಟ್ ಶಿಪ್‌ಮೆಂಟ್ ಆಧಾರದಲ್ಲಿ ಶೇ 24.5ರಷ್ಟಿದೆ. ನಾಯ್ಸ್ ಕಳೆದ 24 ತಿಂಗಳಲ್ಲಿ ವರ್ಷದಿಂದ ವರ್ಷಕ್ಕೆ 30 ಪಟ್ಟು ಹೆಚ್ಚು ಗಮನಾರ್ಹ ಪ್ರಗತಿ ಸಾಧಿಸಿದೆ.

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ