ಕರ್ನಾಟಕದ ನಾಲ್ವರಿಗೆ ಎನ್​ಎಸ್​ಎಸ್​ ರಾಷ್ಟ್ರ ಪ್ರಶಸ್ತಿ ಘೋಷಣೆ

| Updated By: guruganesh bhat

Updated on: Sep 17, 2021 | 4:40 PM

ಸೆಪ್ಟೆಂಬರ್ 24ರಂದು ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ.

ಕರ್ನಾಟಕದ ನಾಲ್ವರಿಗೆ ಎನ್​ಎಸ್​ಎಸ್​ ರಾಷ್ಟ್ರ ಪ್ರಶಸ್ತಿ ಘೋಷಣೆ
ಸಾಂಕೇತಿಕ ಚಿತ್ರ
Follow us on

ಬೆಂಗಳೂರು: ರಾಷ್ಟ್ರೀಯ ಸೇವಾ ಯೋಜನೆಯ ರಾಷ್ಟ್ರ ಪ್ರಶಸ್ತಿ ಘೋಷಣೆಯಾಗಿದ್ದು, ರಾಜ್ಯದ ನಾಲ್ವರಿಗೆ ಎನ್‌ಎಸ್‌ಎಸ್ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಕರ್ನಾಟಕದ ಡಾ.ಬಿ.ವಸಂತ ಶೆಟ್ಟಿ, ಸುರೇಶಪ್ಪ ಕೆ.ಸಜ್ಜನ, ಬಿಂದಿಯಾ ಶೆಟ್ಟಿ ಸಿರೀಶ್ ಗೋವರ್ಧನ್‌ ಅವರುಗಳಿಗೆ ಎನ್‌ಎಸ್‌ಎಸ್ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಸೆಪ್ಟೆಂಬರ್ 24ರಂದು ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ.

ಡಾ.ಬಿ.ವಸಂತ ಶೆಟ್ಟಿ, ರಾಜೀವ್ ಗಾಂಧಿ ಆರೋಗ್ಯ ವಿವಿ ಎನ್‌ಎಸ್‌ಎಸ್ ಕಾರ್ಯಕ್ರಮದ ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸುರೇಶಪ್ಪ ಕೆ.ಸಜ್ಜನ, ಧಾರವಾಡ ಜೆಎಸ್ಎಸ್ ಬನಶಂಕರಿ ಕಾಲೇಜಿನ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿಯಾಗಿದ್ದಾರೆ. ಸಿರೀಶ್ ಗೋವರ್ಧನ್ ಅವರು ಬೆಂಗಳೂರಿನ ಕೆಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಎನ್‌ಎಸ್‌ಎಸ್ ಸ್ವಯಂಸೇವಕರಾಗಿದ್ದಾರೆ. ಬಿಂದಿಯಾ ಶೆಟ್ಟಿ ಅವರು ಮಂಗಳೂರಿನ ಸುರತ್ಕಲ್ ಗೋವಿಂದದಾಸ ಕಾಲೇಜಿನ ಎನ್‌ಎಸ್‌ಎಸ್ ಸ್ವಯಂಸೇವಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇದನ್ನೂ ಓದಿ:

ಏಸೊಂದು ಮುದವಿತ್ತು : ನಿಮ್ಮಂಥವರು ಬೇಕೀಗ ಏನಿಗದಲೆಯ ಸುಬ್ಬಮ್ಮಜ್ಜಿ, ಕೈವಾರದ ಕೊರಸಪ್ಪ, ಸಾವಿತ್ರಮ್ಮ, ಬಂಗಾಳಿ ರೀತಾ

Satish On Sanchari Vijay : ವಿಜಯ್‌ ರಾಷ್ಟ್ರಪ್ರಶಸ್ತಿ ನಂತರ ಬಂದ 3ಕೋಟಿ ಆಫರ್‌ ರಿಜೆಕ್ಟ್‌ ಮಾಡಿದ: ನಿನಾಸಂ ಸತೀಶ್‌

(NSS National Award announced for 4 Karnataka members)