AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದೇಶಿ ಟ್ರಾವೆಲ್ ಹಿಸ್ಟರಿ ಇಲ್ಲ! ಭದ್ರಾವತಿಯಲ್ಲಿ ನರ್ಸಿಂಗ್ ವಿದ್ಯಾರ್ಥಿನಿಗೆ, ಉಡುಪಿಯಲ್ಲಿ ವೃದ್ಧ ದಂಪತಿಗೆ ಒಮಿಕ್ರಾನ್!

omicron in karnataka: ಮತ್ತೆ ಹೊಸದಾಗಿ ಐದು ಒಮಿಕ್ರಾನ್ ಕೇಸ್ ಪತ್ತೆಯಾಗಿದೆ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಈ ಬಾರಿ ಬೆಂಗಳೂರು ಬಿಟ್ಟು ರಾಜ್ಯದ ಇತರೆ ಜಿಲ್ಲೆಗಳಲ್ಲಿ ಒಮಿಕ್ರಾನ್ ಟಾರ್ಗೆಟ್ ಮಾಡಿಕೊಂಡಿದೆ.

ವಿದೇಶಿ ಟ್ರಾವೆಲ್ ಹಿಸ್ಟರಿ ಇಲ್ಲ! ಭದ್ರಾವತಿಯಲ್ಲಿ ನರ್ಸಿಂಗ್ ವಿದ್ಯಾರ್ಥಿನಿಗೆ, ಉಡುಪಿಯಲ್ಲಿ ವೃದ್ಧ ದಂಪತಿಗೆ ಒಮಿಕ್ರಾನ್!
ಡಾ. ಕೆ. ಸುಧಾಕರ್ (ಸಂಗ್ರಹ ಚಿತ್ರ)
TV9 Web
| Updated By: ಸಾಧು ಶ್ರೀನಾಥ್​|

Updated on:Dec 20, 2021 | 10:07 AM

Share

ಶಿವಮೊಗ್ಗ: ಭದ್ರಾವತಿಯಲ್ಲಿ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದ 20 ವರ್ಷದ ನರ್ಸಿಂಗ್ ವಿದ್ಯಾರ್ಥಿನಿಗೆ ಒಮಿಕ್ರಾನ್ ಬಂದಿದೆ! ಇನ್ನು, ಉಡುಪಿಯಲ್ಲಿ ಒಂದೇ ಕುಟುಂಬದ ಇಬ್ಬರಿಗೆ ಒಮಿಕ್ರಾನ್ ಸೋಂಕು ತಗುಲಿದೆ! ದಿನ ಬಿಟ್ಟು ದಿನ ರಾಜ್ಯದಲ್ಲಿ ಒಮಿಕ್ರಾನ್ ಸೋಂಕು ಪ್ರಕರಣಗಳು ಸ್ಫೋಟಗೊಳ್ಳುತ್ತಿವೆ. ಮತ್ತೆ ಹೊಸದಾಗಿ ಐದು ಒಮಿಕ್ರಾನ್ ಕೇಸ್ ಪತ್ತೆಯಾಗಿದೆ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಈ ಬಾರಿ ಬೆಂಗಳೂರು ಬಿಟ್ಟು ರಾಜ್ಯದ ಇತರೆ ಜಿಲ್ಲೆಗಳಲ್ಲಿ ಒಮಿಕ್ರಾನ್ ಟಾರ್ಗೆಟ್ ಮಾಡಿಕೊಂಡಿದೆ. ಧಾರವಾಡದಲ್ಲಿ 1 ಒಮಿಕ್ರಾನ್ ಕೇಸ್, ಧಾರವಾಡದ 54 ವರ್ಷದ ಪುರುಷನಲ್ಲಿ ಒಮಿಕ್ರಾನ್ ಪತ್ತೆಯಾಗಿದೆ. ಉಡುಪಿಯ 82 ವರ್ಷ ಮತ್ತು 73 ವರ್ಷದ ವೃದ್ಧ ದಂಪತಿಗಳಿಗೆ ಸೋಂಕು ತಗುಲಿದೆ. ಮಂಗಳೂರಿನ 19 ವರ್ಷದ ಯುವತಿಯಲ್ಲಿಯೂ ಒಮಿಕ್ರಾನ್ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ರಾಜ್ಯದಲ್ಲಿ ಓಮಿಕ್ರಾನ್ ಸೋಂಕು ಪ್ರಕರಣಗಳು 19ಕ್ಕೆ ಏರಿವೆ.

ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಗೆ ಡಿಸೆಂಬರ್ 9ರಂದು ಕೊರೊನಾ ಸೋಂಕು ದೃಢವಾಗಿದ್ದ ಹಿನ್ನೆಲೆ ಸೋಂಕಿತಳ ಸ್ಯಾಂಪಲ್ಸ್ ಅನ್ನು ಜಿನೋಮಿಕ್ ಸೀಕ್ವೆನ್ಸಿಂಗ್‌ಗೆ ರವಾನೆ ಮಾಡಲಾಗಿತ್ತು. ನಿನ್ನೆ ಇದರ ವರದಿ ಬಂದಿದ್ದು ಒಟ್ಟು 27 ವಿದ್ಯಾರ್ಥಿಗಳಲ್ಲಿ ಪೈಕಿ ಒಬ್ಬರಲ್ಲಿ ಮಾತ್ರ ರೂಪಾಂತರಿ ಒಮಿಕ್ರಾನ್ ಪತ್ತೆಯಾಗಿದೆ. ವಿದ್ಯಾರ್ಥಿನಿಗೆ ಸೋಂಕು ಕಂಡು ಬಂದಿರುವುದನ್ನು ದೃಢಪಡಿಸಿದ ಜಿಲ್ಲಾ ವೈದ್ಯಾಧಿಕಾರಿ (ಡಿಎಚ್ಒ) ಸೋಂಕಿತ ವಿದ್ಯಾರ್ಥಿನಿಗೆ ಯಾವುದೇ ಟ್ರಾವಲ್ ಹಿಸ್ಟರಿ ಇಲ್ಲ. ಆದರೂ ಒಮಿಕ್ರಾನ್ ದೃಢಪಟ್ಟಿರುವುದು ಅಚ್ಚರಿ ಮೂಡಿಸಿದೆ. ಸೋಂಕಿತ ವ್ಯಕ್ತಿಗೆ ಐಸೋಲೇಷನ್ ನಲ್ಲೇ ಚಿಕಿತ್ಸೆ ಮುಂದುವರಿಯಲಿದೆ ಎಂದಿದ್ದಾರೆ.

ಇಬ್ಬರೂ ವೃದ್ಧರಿಗೆ ಯಾವುದೇ ವಿದೇಶಿ ಪ್ರಯಾಣದ ಹಿನ್ನೆಲೆ ಇಲ್ಲ!

ಉಡುಪಿ ಜಿಲ್ಲೆಯ ಒಂದೇ ಕುಟುಂಬದ ಇಬ್ಬರಿಗೆ ಒಮಿಕ್ರಾನ್ ದೃಢಪಟ್ಟಿದೆ. 82 ವರ್ಷದ ಪುರುಷ, 73 ವರ್ಷದ ವೃದ್ಧೆಗೆ ಒಮಿಕ್ರಾನ್ ಸೋಂಕು ತಗುಲಿದೆ. 82 ವರ್ಷದ ವೃದ್ಧನಿಗೆ ಡಿಸೆಂಬರ್ 1ರಂದು ಮತ್ತು 73 ವರ್ಷದ ವೃದ್ಧೆಗೆ ಡಿಸೆಂಬರ್ 2ರಂದು ಕೊರೊನಾ ಸೋಂಕು ದೃಢಪಟ್ಟಿತ್ತು. ಸೋಂಕಿತರಿಗೆ ಯಾವುದೇ ವಿದೇಶಿ ಪ್ರಯಾಣದ ಹಿನ್ನೆಲೆ ಇಲ್ಲ. ಇಬ್ಬರೂ ಸೋಂಕಿತರು ತಲಾ ಎರಡೆರಡು ಕೊವಿಡ್ ಲಸಿಕೆ ಸಹ ಪಡೆದಿದ್ದಾರೆ. ಪ್ರಾಥಮಿಕ ಸಂಪರ್ಕದಲ್ಲಿದ್ದ ನಾಲ್ವರಿಗೆ ಟೆಸ್ಟ್ ನಡೆಸಲಾಗಿದ್ದು, ಮೂವರಿಗೆ ಕೊವಿಡ್ ದೃಢಪಟ್ಟಿದೆ. ವೃದ್ಧರ ಈ ಕುಟುಂಬದ 11 ವರ್ಷದ ಬಾಲಕನಿಗೆ ಕೊರೊನಾ ದೃಢವಾಗಿದೆ. ಮೂವರದೂ ಸ್ಯಾಂಪಲ್‌ ಜಿನೋಮಿಕ್ ಸೀಕ್ವೆನ್ಸಿಂಗ್‌ಗೆ ಕಳಿಸಲಾಗಿದೆ.

ಆರೋಗ್ಯ ಸಚಿವ ಡಾ ಕೆ ಸುಧಾಕರ್ ಟ್ವೀಟ್

Published On - 9:46 am, Mon, 20 December 21