ವೈಕುಂಠ ಏಕಾದಶಿಯಂದು.. ಸ್ವಾಮಿಯ ದರ್ಶನ ಪಡೆದ ವಿಪಕ್ಷ ನಾಯಕ ಸಿದ್ದರಾಮಯ್ಯ, ಶಾಸಕ ಜಮೀರ್ ಅಹ್ಮದ್
ರಾಜಾಜಿನಗರದಲ್ಲಿರುವ ವೈಕುಂಠ ಸ್ವಾಮಿ ದೇಗುಲಕ್ಕೆ ಭೇಟಿಕೊಟ್ಟ ವಿಪಕ್ಷ ನಾಯಕ ಸಿದ್ದರಾಮಯ್ಯ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದರು. ಸ್ವಾಮಿಗೆ ವಿಶೇಷ ಪೂಜೆ ಸಹ ಸಲ್ಲಿಸಿದರು.ಈ ವೇಳೆ, ಶಾಸಕ ಜಮೀರ್ ಅಹ್ಮದ್ ಸಹ ಉಪಸ್ಥಿತರಿದ್ದರು.
ಬೆಂಗಳೂರು: ವೈಕುಂಠ ಏಕಾದಶಿಯಂದು ಕೇವಲ ಜನಸಾಮಾನ್ಯರಲ್ಲದೆ ರಾಜಕೀಯ ನಾಯಕರು ಸಹ ದೇವರ ದರ್ಶನ ಪಡೆದರು.
ಹೌದು, ಇತ್ತ ನಗರದ ರಾಜಾಜಿನಗರದಲ್ಲಿರುವ ವೈಕುಂಠ ಸ್ವಾಮಿ ದೇಗುಲಕ್ಕೆ ಭೇಟಿಕೊಟ್ಟ ವಿಪಕ್ಷ ನಾಯಕ ಸಿದ್ದರಾಮಯ್ಯ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದರು. ಸ್ವಾಮಿಗೆ ವಿಶೇಷ ಪೂಜೆ ಸಹ ಸಲ್ಲಿಸಿದರು.ಈ ವೇಳೆ, ಶಾಸಕ ಜಮೀರ್ ಅಹ್ಮದ್ ಸಹ ಉಪಸ್ಥಿತರಿದ್ದರು.
ದೇವರ ದರ್ಶನ ಪಡೆದ ಬಳಿಕ ಕ್ರಿಸ್‌ಮಸ್ ಹಬ್ಬದ ಅಂಗವಾಗಿ ತಮ್ಮ ಸರ್ಕಾರಿ ನಿವಾಸದಲ್ಲಿ ಕ್ರೈಸ್ತ ಸಮುದಾಯದ ಧರ್ಮಗುರುಗಳನ್ನು ಭೇಟಿ ಮಾಡಿದರು. ಈ ವೇಳೆ, ಸಂತ ಕ್ಲಾಸ್ ವೇಷಧಾರಿಯೊಬ್ಬರೊಂದಿಗೆ ಸೇರಿ ಕೇಕ್ ಕತ್ತರಿಸಿ ಹಬ್ಬ ಆಚರಿಸಿದರು. ಸಮಸ್ತ ಕ್ರೈಸ್ತ ಸಮುದಾಯಕ್ಕೆ ಹಬ್ಬದ ಶುಭಾಶಯ ಸಹ ತಿಳಿಸಿದರು.
ಇತ್ತ, ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಆರ್ಚ್ಬಿಷಪ್ ರೆವರೆಂಡ್ ಡಾ.ಪೀಟರ್ ಮೆಕಾಡೋ ಅವರನ್ನು ಭೇಟಿ ಮಾಡಿದರು. ಈ ವೇಳೆ ಆರ್ಚ್ಬಿಷಪ್ ಅವರಿಗೆ ಸಚಿವ ಸುಧಾಕರ್ ಕ್ರಿಸ್‌ಮಸ್ ಹಬ್ಬದ ಶುಭಾಶಯ ತಿಳಿಸಿದರು.
ತಿಮ್ಮಪ್ಪನ ದರ್ಶನ ಪಡೆದ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ ವೈಕುಂಠ ಏಕಾದಶಿ ಪ್ರಯುಕ್ತ ಇಂದು ಶಿವಮೊಗ್ಗದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಸಂಸದ ಬಿ.ವೈ. ರಾಘವೇಂದ್ರ ವೆಂಕಟೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು. ಜಿಲ್ಲೆಯ ಭದ್ರಾವತಿ ನಗರದಲ್ಲಿರುವ ಅಷ್ಟಲಿಂಗೇಶ್ವರ ಮತ್ತು ವೆಂಕಟೇಶ್ವರರ ದೇವಸ್ಥಾನಕ್ಕೆ ಭೇಟಿಕೊಟ್ಟು ದರ್ಶನ ಪಡೆದರು.