ದಾವಣಗೆರೆ: ಹಲವು ಅನಾಥರಿಗೆ ಅಪ್ಪ ಅಮ್ಮ ಎಲ್ಲಿದ್ದಾರೆ ಎಂಬುವುದೇ ತಿಳಿದಿಲ್ಲ. ಅದರಲ್ಲಿ ಕೆಲವು ಅನಾಥ ಹೆಣ್ಣು ಮಕ್ಕಳ ಪಾಲಿಗೆ ಸರ್ಕಾರವೇ ತಂದೆ ತಾಯಿ, ಬಂಧು ಬಳಗ. ಯಾರು ಇಲ್ಲದವರಿಗೆ ದೇವರು ಇದ್ದಾನೆ ಅಂತಾರಲ್ಲ ಅಂತಹ ಮಾತು ಕೆಲವರ ಬಾಳಲ್ಲಿ ಸತ್ಯವಾಗಿದೆ. ಈ ಮಾತಿಗೆ ಜಿಲ್ಲೆಯಲ್ಲಿ ನಡೆದ ಮದುವೆಯೊಂದು ಸಾಕ್ಷಿಯಾಗಿದೆ. ಅಲ್ಲದೇ ನಡೆದ ಅನಾಥ ಹೆಣ್ಣು ಮಗಳ ಕೈ ಹಿಡಿಯಲು ಬಂದಿದ್ದು ಬ್ರಾಹ್ಮಣ ಯುವಕರು ಎನ್ನುವುದೇ ವಿಶೇಷ.
ಬ್ರಾಹ್ಮಣ ಸಮುದಾಯದವರೇ ಹೆಚ್ಚು
ಸಂಪ್ರದಾಯದ ಪ್ರಕಾರ ಅದ್ದೂರಿಯಾಗಿ ಮದುವೆ ಮಾಡಿದ ಸನ್ನಿವೇಶಗಳು ಕಂಡು ಬಂದಿದ್ದು ದಾವಣಗೆರೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅವರಣದಲ್ಲಿ. ಇದು ಈವರಗೆ 40 ಮದುವೆಗಳಿಗೆ ಸಾಕ್ಷಿಯಾಗಿದೆ. ದಾವಣಗೆರೆ ರಾಜ್ಯ ಮಹಿಳಾ ನಿಲಯ ಮತ್ತೆ ನಿನ್ನೆ (ಮಾರ್ಚ್ 17) ಒಂದು ಜೋಡಿಗೆ ಮದುವೆ ಮಾಡಿಸಿದೆ. ಈ ಮದುವೆಯ ನೇತೃತ್ವವನ್ನು ಜಿಲ್ಲಾಢಳಿತ ವಹಿಸಿತ್ತು. ರಾಜ್ಯದ ವಿವಿಧ ಜಿಲ್ಲೆಗಳಿಗೆ ಇಲ್ಲಿನ ಹೆಣ್ಣು ಮಕ್ಕಳನ್ನು ಮದುವೆಯಾಗಿರುವ ಅರ್ಧದಷ್ಟು ಉತ್ತರ ಕನ್ನಡ ಜಿಲ್ಲೆಯವರಾಗಿದ್ದಾರೆ. ಅದರಲ್ಲೂ ಶೇಕಡಾ 70 ರಷ್ಟು ಬ್ರಾಹ್ಮಣ ಸಮುದಾಯದವರೇ ಮುದುವೆಯಾಗಿದ್ದಾರೆ.
ರಾಜ್ಯದ ವಿವಿಧ ಕಡೆಯಿಂದ ಅರ್ಜಿಗಳು ಬರುತ್ತವೆ. ಆದರೆ ಮದುವೆಯಾಗಿ ಹೋದ ಹೆಣ್ಣುಗಳಿಗೆ ತೊಂದರೆ ಆಗಬಾರದೆಂದು ಆದಾಯ ನೋಡಿ ಮದುವೆ ಮಾಡಿಕೊಡುತ್ತೇವೆ. ಇಲ್ಲಿಂದ ಮದುವೆಯಾಗಿ ಹೋದವರು ತುಂಬಾ ಚೆನ್ನಾಗಿ ಜೀವನ ಕಟ್ಟಿಕೊಂಡು ಉತ್ತಮವಾದ ಸಂಸಾರ ನಡೆಸುತ್ತಿದ್ದಾರೆ. ನಾನು ಡಿಸಿಯಾಗಿ ಬಂದಾಗಿನಿಂದ ಆರನೇ ಮದುವೆ ಮಾಡಿಸಿದ್ದು, ಈ ಕೆಲಸ ತೃಪ್ತಿ ನೀಡಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.
ನಿನ್ನೆ ನಡೆದ ಮದುವೆ ಬಹಳ ವಿಶೇಷತೆಯಿಂದ ಕೂಡಿತ್ತು. ದಾವಣಗೆರೆ ಜಿಲ್ಲಾಧಿಕಾರಿಗಳು, ಜಿಲ್ಲಾ ವರಿಷ್ಠಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಇಒ ಅವರು ಮುಂದೆ ನಿಂತು ವಧುವನ್ನು ಕರೆ ತಂದು ಧಾರೆ ಎರೆದುಕೊಟ್ಟರು. 23 ವರ್ಷದ ಸೌಮ್ಯ ಹಾಗೂ ಕುಮುಟಾ ತಾಲೂಕಿನ ಕಡೆಕೋಡಿ ಗ್ರಾಮದ ಸುಬ್ರಾಯ ಮಂಜುನಾಥ ಭಟ್ಟ ಎನ್ನುವವರು ಮದುವೆಯಾಗಿದ್ದು, ವರನ ಕಡೆಯ ಕುಟುಂಬಸ್ಥರು ಮದುವೆಯಲ್ಲಿ ಭಾಗವಹಿಸಿದ್ದರು.
ಅಲ್ಲದೆ ಜಗಳೂರು ತಾಲೂಕಿನ ಅಣಬೂರು ಗೊಲ್ಲರಹಟ್ಟಿಯಲ್ಲಿ ಬಹಿಷ್ಕಾರ ಕ್ಕೆ ಒಳಗಾಗಿದ್ದ ಮಹಿಳೆಯ ಮಗುವಿಗೆ ಜವಳ ತೆಗೆಸಲಾಯಿತು. ಅನಾಥ ಮಗಳ ಮದುವೆಯಲ್ಲಿ ಭಾಗವಹಿಸಿ ನಿಮ್ಮ ಬಾಳು ಬಂಗಾರ ಆಗಲ್ಲೆಂದು ಸರ್ಕಾರಿ ಅಧಿಕಾರಿಗಳು ಹಾರೈಸಿದ್ದರು. ಜೊತೆಗೆ ಮದುವೆಯಾದ ವಧುವಿಗೆ ಯಾವುದೇ ಕಷ್ಟ ಬಾರದ ಹಾಗೇ ನೋಡಿಕೊಳ್ಳಬೇಕೆಂದು ತಿಳಿ ಹೇಳಿದರು.
ಇದನ್ನೂ ಓದಿ
ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಗೆ ರಕ್ಷಾಬಂಧನ ಕಟ್ಟಲು ಆದೇಶ; ಸ್ಟೀರಿಯೊಟೈಪ್ ಬಿಟ್ಟುಬಿಡಿ ಎಂದ ಸುಪ್ರೀಂಕೋರ್ಟ್