Bhatkal: ಅಕ್ರಮವಾಗಿ ಭಾರತಕ್ಕೆ ನುಸುಳಿ, ಬಂಧನದಲ್ಲಿದ್ದ ಪಾಕಿಸ್ತಾನ ಮಹಿಳೆಯ ಗಂಡ ಭಟ್ಕಳದಲ್ಲಿ ಸಾವು

Bhatkal: ಅಕ್ರಮವಾಗಿ ಭಾರತಕ್ಕೆ ನುಸುಳಿ, ಬಂಧನದಲ್ಲಿದ್ದ ಪಾಕಿಸ್ತಾನ ಮಹಿಳೆಯ ಗಂಡ ಭಟ್ಕಳದಲ್ಲಿ ಸಾವು
ಅಕ್ರಮವಾಗಿ ಭಾರತಕ್ಕೆ ನುಸುಳಿ, ಬಂಧನದಲ್ಲಿದ್ದ ಪಾಕಿಸ್ತಾನ ಮಹಿಳೆಯ ಪತಿ ಭಟ್ಕಳದಲ್ಲಿ ಸಾವು

ಮಹಿಳೆಯ ಪತಿ ಮೊಹಮ್ಮದ್ ರುಕ್ನುದ್ದಿನನ ಆರೋಗ್ಯದಲ್ಲಿ ಏರುಪೇರಾಗಿ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ. ಮೃತನಿಗೆ ಎರಡು ಹೆಣ್ಣುಮಕ್ಕಳು ಮತ್ತು ಒಂದು ಗಂಡು ಮಗುವಿದೆ. ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ನವಾಯತ್ ಕಾಲೋನಿಯಲ್ಲಿ ವಾಸವಾಗಿದ್ದರು.

TV9kannada Web Team

| Edited By: sadhu srinath

Apr 22, 2022 | 6:25 PM

ಉತ್ತರ ಕನ್ನಡ: ಭಟ್ಕಳದಲ್ಲಿ ಬಂಧನಕ್ಕೆ ಒಳಗಾದ ಪಾಕಿಸ್ತಾನ ಮಹಿಳೆ ಖತೀಜಾ ಎಂಬುವವರ ಪತಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಜಾವೇದ್ ಮೊಹಮ್ಮದ್ ರುಕ್ನುದ್ದಿನ (50) ಸಾವನ್ನಪ್ಪಿದ ವ್ಯಕ್ತಿ (Husband). 2014 ರಲ್ಲಿ ಕಾನೂನುಬಾಹಿರವಾಗಿ ಭಾರತಕ್ಕೆ ನುಸುಳಿದ್ದ ಖತೀಜಾ ಎಂಬ ಮಹಿಳೆ ಭಟ್ಕಳದಲ್ಲಿ ವಾಸವಿದ್ದರು (Bhatkal). ಖತೀಜಾ ಮೆಹ್ರುನ್ನಿಸ್ ಪಾಕಿಸ್ತಾನದ ಮಹಿಳೆ, ರುಕ್ನುದ್ದಿನನ ಪತ್ನಿ (Pakistan Woman).

ಮೃತನಿಗೆ ಎರಡು ಹೆಣ್ಣುಮಕ್ಕಳು ಮತ್ತು ಒಂದು ಗಂಡು ಮಗು: ಪಾಕಿಸ್ತಾನ ಮಹಿಳೆ ಖತೀಜಾ ಮೆಹ್ರುನ್ನಿಸ್ ಭಟ್ಕಳದ ನವಾಯತ್ ಕಾಲೋನಿ ವೈಟ್ ಹೌಸ್‌ನಲ್ಲಿ ವಾಸವಿದ್ದರು. ಕಳೆದ ವರ್ಷ ಜೂನ್ 9 ರಂದು ಖತೀಜಾ ರನ್ನ ಬಂಧಿಸಿ ನ್ಯಾಯಾಲಕ್ಕೆ ಒಪ್ಪಿಸಲಾಗಿತ್ತು. ಈ ಮಹಿಳೆಯ ಪತಿ ಮೊಹಮ್ಮದ್ ರುಕ್ನುದ್ದಿನನ ಆರೋಗ್ಯದಲ್ಲಿ ಏರುಪೇರಾಗಿ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ. ಮೃತನಿಗೆ ಎರಡು ಹೆಣ್ಣುಮಕ್ಕಳು ಮತ್ತು ಒಂದು ಗಂಡು ಮಗುವಿದೆ. ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ನವಾಯತ್ ಕಾಲೋನಿಯಲ್ಲಿ ವಾಸವಾಗಿದ್ದರು.

ಶಿಕ್ಷಕಿಯ ಅಪಹರಿಸಿ ಲವ್ ಜಿಹಾದ್ ಆರೋಪ: ಪೊಲೀಸರು ಮತ್ತು ಅನ್ಯಕೋಮಿನ ಯುವಕನ ವಿರುದ್ಧ ಹಿಂದೂ ಕಾರ್ಯಕರ್ತರಿಂದ ಪ್ರತಿಭಟನೆ ಹಾವೇರಿ ಜಿಲ್ಲೆ ಸವಣೂರಿನಲ್ಲಿ ಲವ್ ಜಿಹಾದ್ ಆರೋಪ ಕೇಳಿಬಂದಿದೆ. ಇದರ ವಿರುದ್ಧ ಯುವತಿಯ ಚಿಕ್ಕಪ್ಪನಿಂದ ದೂರು ದಾಖಲಾಗಿದ್ದು, ಹಿಂದೂ ಸಂಘಟನೆಗಳ ಕಾರ್ಯಕರ್ತರ ಕಡೆಯಿಂದ ಪ್ರತಿಭಟನೆ ನಡೆದಿದೆ. ಏಪ್ರಿಲ್ 13ರಂದು ಅತಿಥಿ ಶಿಕ್ಷಕಿಯನ್ನು ಅನ್ಯಕೋಮಿನ ಯುವಕ ಅಪಹರಿಸಿದ್ದಾನೆಂದು ಪ್ರತಿಭಟನೆ ನಡೆದಿದೆ. 24 ವರ್ಷದ ಅತಿಥಿ ಶಿಕ್ಷಕಿ, ಸವಣೂರು ತಾಲೂಕಿನ ಕಡಕೋಳ ಗ್ರಾಮದ ಯುವತಿ ಎಂದು ತಿಳಿದುಬಂದಿದೆ. ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ಭಾಷಾ ರತನಖಾನ ಎಂಬ ಯುವಕನಿಂದ ಅಪಹರಣ ನಡೆದಿದೆ ಎನ್ನಲಾಗಿದೆ.

ಯುವತಿಯ ಚಿಕ್ಕಪ್ಪ ಏಪ್ರಿಲ್ 13ರಂದೇ ಪ್ರಕರಣ ದಾಖಲಿಸಿದ್ದಾರೆ. ಆದರೂ ಕೇಸ್ ದಾಖಲಿಸಿ 10 ದಿನಗಳಾದರೂ ಭಾಷಾ ರತನಖಾನ್ ವಿರುದ್ಧ ಪೊಲೀಸರು ಕ್ರಮಕೈಗೊಂಡಿಲ್ಲವೆಂದು ಹಿಂದೂ ಕಾರ್ಯಕರ್ತರು ಆರೋಪಿಸಿದ್ದಾರೆ. ಯುವತಿಯನ್ನು ಪತ್ತೆ ಹಚ್ಚದ ಸವಣೂರು ಠಾಣೆ ಪೊಲೀಸರ ವಿರುದ್ಧ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದಾರೆ. ಹಿಂದೂ ಯುವತಿಯನ್ನ ಅಪಹರಿಸಿ, ಲವ್ ಜಿಹಾದ್ ಮಾಡಿದ್ದಾರೆ ಅಂತಾ ಹಿಂದೂ ಸಂಘಟನೆಗಳ ಕಾರ್ಯಕರ್ತರು ಆರೋಪ ಮಾಡಿದ್ದಾರೆ. ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow us on

Related Stories

Most Read Stories

Click on your DTH Provider to Add TV9 Kannada