ಕೊರೊನಾ ನಿಯಂತ್ರಣಕ್ಕೆ ಹೊಸ ನಿಯಮ​; ಬಿಎಂಟಿಸಿ ಬಸ್‌ಗಳನ್ನು ತಡೆದು ಪ್ರಯಾಣಿಕರ ವಾಗ್ವಾದ

| Updated By: Skanda

Updated on: Apr 05, 2021 | 1:17 PM

ಕೊರೊನಾ ನಿಯಂತ್ರಣಕ್ಕೆ ಹೊಸ ರೂಲ್ಸ್​ ಬಿಎಂಟಿಸಿಗೆ ದೊಡ್ಡ ತಲೆನೋವಾದಂತಿದೆ. ಹೆಚ್ಚು ಜನರನ್ನು ಬಸ್​ನಲ್ಲಿ ಹತ್ತಿಸಿಕೊಳ್ಳುವುದಿಲ್ಲ ಎಂದಿದ್ದಕ್ಕೆ ಬಸ್‌ಗಳನ್ನು ತಡೆದು ಪ್ರಯಾಣಿಕರು ವಾಗ್ವಾದ ನಡೆಸಿದ್ದಾರೆ.

ಕೊರೊನಾ ನಿಯಂತ್ರಣಕ್ಕೆ ಹೊಸ ನಿಯಮ​; ಬಿಎಂಟಿಸಿ ಬಸ್‌ಗಳನ್ನು ತಡೆದು ಪ್ರಯಾಣಿಕರ ವಾಗ್ವಾದ
ಬಸ್​ ತಡೆ ಹಿಡಿದು ಪ್ರಯಾಣಿಕರ ವಾಗ್ವಾದ
Follow us on

ಬೆಂಗಳೂರು: ಕೊರೊನಾ ಹಾವಳಿ ಎಲ್ಲೆಡೆ ತನ್ನ ಆರ್ಭಟವನ್ನು ಹೆಚ್ಚಿಸಿದೆ. ನಿಯಂತ್ರಣಕ್ಕಾಗಿ ಸರ್ಕಾರ ಹೋರಾಡುತ್ತಿದೆ. ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದೆ. ಅದೇ ರೀತಿ ಬಸ್​ಗಳಲ್ಲಿ ಆಸನ ವ್ಯವಸ್ಥೆ​ ಇದ್ದಷ್ಟೇ ಪ್ರಯಾಣಿಕರನ್ನು ಕರೆದೊಯ್ಯಬೇಕು ಎಂದು ನಿಯಮ​ ಜಾರಿಗೊಳಿಸಲಾಗಿದೆ. ಆದರೆ ಇದಕ್ಕೆ ಪ್ರಯಾಣಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. 10 ನಿಮಿಷದ ಕಾಲ ಬಸ್​ ತಡೆದು ಪ್ರಯಾಣಿಕರು ವಾಗ್ವಾದ ನಡೆಸಿದ ಘಟನೆ ಬೆಂಗಳೂರಿನ ತುಮಕೂರು ರಸ್ತೆಯ ಪಾರ್ಲೇಜಿ ಫ್ಯಾಕ್ಟರಿ ಸ್ಟಾಪ್ ಬಳಿ ನಡೆದಿದೆ.

ಸರ್ಕಾರದ ಹೊರಡಿಸಿರುವ ಹೊಸ ಕೊರೊನಾ ನಿಯಮಾವಳಿಗಳು ಬಸ್​ಗಳಿಗೆ ದೊಡ್ಡ ತಲೆನೋವಾದಂತೆ ಅನಿಸುತ್ತಿದೆ. ಒಂದು ಕಡೆ ಸರ್ಕಾರದ ನಿಯಮ​ ಪಾಲಿಸಲೇ ಬೇಕು ಇನ್ನೊಂದು ಕಡೆ ಪ್ರಯಾಣಿಕರನ್ನೂ ನಿಭಾಯಿಸಬೇಕು ಎಂಬ ಇಕ್ಕಟ್ಟಿಗೆ ಸಿಲುಕಿಕೊಂಡಿದ್ದಾರೆ.

ನಾವು ಕೆಲಸಕ್ಕೆ ಹೋಗಬೇಕು. ಕಾಲೇಜಿಗೆ ಹೋಗಬೇಕು. ಬಸ್ ಹತ್ತಿಸಿಕೊಳ್ಳಿ ಎಂದು ಪ್ರಯಾಣಿಕರು ಹಾಗೂ ಕಾಲೇಜು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ. ಸೀಟ್ ಫುಲ್ ಆಗಿದೆ. ಕೊರೊನಾ ರೂಲ್ಸ್ ಪ್ರಕಾರ ನಾವು ಬಸ್​ ಹತ್ತಿಸಿಕೊಳ್ಳುವುದಿಲ್ಲ ಎಂದು ಬಿಎಂಟಿಸಿ ಸಿಬ್ಬಂದಿ ಹೇಳಿದಾಗ ಮಾತಿನ ಚಕಮಕಿ ಏರ್ಪಟ್ಟಿದೆ. ಇಷ್ಟಾದರೂ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಬಂದಿಲ್ಲ. ಆದರೆ, ನಾವು ಪೊಲೀಸ್​ ಭದ್ರತೆಯಲ್ಲಿ ಬಸ್​ ಓಡಿಸುತ್ತೇವೆ ಎಂದು ಬಿಎಂಟಿಸಿ ಎಂಡಿ ಸಿ.ಶಿಕಾ ಹೇಳಿಕೆ ಮಾತ್ರ ನೀಡಿದ್ದಾರೆ.

ಇದನ್ನೂ ಓದಿ: ಬಿಎಂಟಿಸಿ ಬಸ್ ಪ್ರಯಾಣ ದರ ಸದ್ಯಕ್ಕೆ ಹೆಚ್ಚಳ ಮಾಡಬೇಡಿ: ಸಿಎಂ ಯಡಿಯೂರಪ್ಪ ಸೂಚನೆ

ಬಿಎಂಟಿಸಿ ಚಾಲಕ ಮತ್ತು ನಿರ್ವಾಹಕರಿಗೆ ಉಚಿತ ಕೊರೊನಾ ಲಸಿಕೆ

(passengers have blocked BMTC buses condemning the new Rules for Corona Control in bangalore)

Published On - 1:17 pm, Mon, 5 April 21