International Yoga Day: ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಆನ್ಲೈನ್ ಮೂಲಕ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ತುಮಕೂರು 1980ರಲ್ಲಿ ಸಂಸ್ಕಾರ, ಸಂಘಟನೆ, ಸೇವೆ ಎಂಬ ಧ್ಯೇಯೋದ್ದೇಶದೊಂದಿಗೆ ಆರಂಭವಾದ ಸಮಿತಿಯಾಗಿದೆ. ಸಮಿತಿಯು ಅಂದಿನಿಂದ ಇಂದಿನವರೆಗೆ ಯೋಗ ಸಹಿತ ಪಂಚಮುಖಿ ಶಿಕ್ಷಣವನ್ನು ಸಂಪೂರ್ಣ ಉಚಿತವಾಗಿ ನೀಡುತ್ತಾ ಬಂದಿದೆ.
ಅಂತಾರಾಷ್ಟ್ರೀಯ ಯೋಗ ದಿನವಾದ ನಾಳೆ (ಜೂನ್ 21) ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ಕೇಂದ್ರ ಸಮಿತಿ ತುಮಕೂರು ಇವರು ಆನ್ಲೈನ್ ಮೂಲಕ ಸಾಮೂಹಿಕ ಯೋಗಾಭ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಆನ್ಲೈನ್ ವಿಧಾನದ ಮೂಲಕ ಫೇಸ್ಬುಕ್ ಹಾಗೂ ಯೂಟ್ಯೂಬ್ನಲ್ಲಿ ಯೋಗ ದಿನ ಆಚರಣೆ ಮಾಡಲಿದ್ದಾರೆ. ಬೆಳಗ್ಗೆ 7 ಗಂಟೆಯಿಂದ 7.45ರ ವರೆಗೆ ಸಾಮೂಹಿಕ ಯೋಗಾಭ್ಯಾಸ ಕಾರ್ಯಕ್ರಮ ನಡೆಯಲಿದೆ. ಬಳಿಕ, ಬೆಳಗ್ಗೆ 7.45ರಿಂದ 8.45 ರ ವರೆಗೆ ಆನ್ಲೈನ್ ವೇದಿಕೆಯಲ್ಲೇ ಸಭಾ ಕಾರ್ಯಕ್ರಮ ನಡೆಸಲಿರುವ ಬಗ್ಗೆ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸದರಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೇಂದ್ರ ಸಂಸದೀಯ ವ್ಯವಹಾರ ಹಾಗೂ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಭಾಗವಹಿಸಲಿದ್ದಾರೆ. ಸಮಿತಿಯ ಅಧ್ಯಕ್ಷ ಸಿ.ವಿ. ಮಹದೇವಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಲು ಈಗಾಗಲೇ ಸಾವಿರಾರು ಜನರು ಆನ್ಲೈನ್ ಮೂಲಕ ನೋಂದಾವಣೆ ಮಾಡಿಕೊಂಡಿರುವ ಬಗ್ಗೆ ಆಯೋಜಕರು ತಿಳಿಸಿದ್ದಾರೆ. ಸಾರ್ವಜನಿಕರು ಕೆಳಕಂಡ ಯೂಟ್ಯೂಬ್ ಲಿಂಕ್ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮುಕ್ತ ಅವಕಾಶವಿದೆ ಎಂದೂ ಮಾಹಿತಿ ನೀಡಲಾಗಿದೆ.
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ: ಅಂತಾರಾಷ್ಟ್ರೀಯ ಯೋಗ ದಿನಾಚರಣೆ
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ತುಮಕೂರು 1980ರಲ್ಲಿ ಸಂಸ್ಕಾರ, ಸಂಘಟನೆ, ಸೇವೆ ಎಂಬ ಧ್ಯೇಯೋದ್ದೇಶದೊಂದಿಗೆ ಆರಂಭವಾದ ಸಮಿತಿಯಾಗಿದೆ. ಸಮಿತಿಯು ಅಂದಿನಿಂದ ಇಂದಿನವರೆಗೆ ಯೋಗ ಸಹಿತ ಪಂಚಮುಖಿ ಶಿಕ್ಷಣವನ್ನು ಸಂಪೂರ್ಣ ಉಚಿತವಾಗಿ ನೀಡುತ್ತಾ ಬಂದಿದೆ. ಸಮಿತಿಯ ಗುಣಮಟ್ಟದ ಹಾಗೂ ಉಚಿತ ಸೇವೆಯನ್ನು ಪರಿಗಣಿಸಿ ಕರ್ನಾಟಕ ರಾಜ್ಯ ಸರ್ಕಾರವು 2019ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸಮಿತಿಯನ್ನು ಗೌರವಿಸಿದೆ.
ಪ್ರಸ್ತುತ ಜಗತ್ತಿನಾದ್ಯಂತ ಹರಡಿರುವ ಸಾಂಕ್ರಾಮಿಕ ಪಿಡುಗಿನ ಹಾಗೂ ಹವಾಮಾನ ವೈಪರಿತ್ಯದ ದುಷ್ಪರಿಣಾಮಗಳನ್ನು ಧನಾತ್ಮಕವಾಗಿ ಎದುರಿಸಲು ಆನ್ಲೈನ್ ಮೂಲಕ 500ಕ್ಕೂ ಹೆಚ್ಚು ಬ್ಯಾಚ್ಗಳಲ್ಲಿ ಯೋಗ, ಪ್ರಾಣಾಯಾಮ, ಧ್ಯಾನದಂತಹ ಕಲಿಕೆಯನ್ನು ಸಂಪೂರ್ಣ ಉಚಿತವಾಗಿ ನೀಡಲಾಗುತ್ತಿದೆ.
ಸಂಸ್ಥೆಯು ಕರ್ನಾಟಕ ಮಾತ್ರವಲ್ಲದೆ, ಹೊರರಾಜ್ಯ ಹಾಗೂ ವಿದೇಶಗಳಲ್ಲಿ ಕೂಡ ಸಾವಿರಾರು ಶಾಖೆಗಳನ್ನು ಹೊಂದಿದೆ. ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಬಹಳಷ್ಟು ಮಂದಿಗೆ ಯೋಗಾಸನ, ಪ್ರಾಣಾಯಾಮ ಹಾಗೂ ಧ್ಯಾನ ಅವಧಿಗಳನ್ನು ನಡೆಸಿಕೊಡುತ್ತಿದೆ. ಜೊತೆಗೆ, ಆರೋಗ್ಯ, ಶಿಕ್ಷಣ, ಸಂಸ್ಕೃತಿ, ಸ್ವಚ್ಛತೆ, ಒತ್ತಡರಹಿತ ವ್ಯವಸ್ಥಿತ ಜೀವನ, ವೃತ್ತಿ ಮತ್ತು ಆಧ್ಯಾತ್ಮಿಕ ಜೀವನ ಮಾರ್ಗದರ್ಶನದಂಥ ಕಾರ್ಯಗಳನ್ನೂ ಮಾಡುತ್ತಿದೆ.
ಇದನ್ನೂ ಓದಿ: Yoga Day 2021: ಕರ್ನಾಟಕದ 311 ಮಂಡಲಗಳ 622 ಕಡೆ ಕೊವಿಡ್ ನಿಯಮ ಅನುಸರಿಸಿ ಯೋಗ ದಿನ ಆಚರಣೆ
World Yoga Day 2021: 1 ಲಕ್ಷ ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಂದ ವಿಶ್ವ ಯೋಗ ದಿನಾಚರಣೆಯಂದು ವರ್ಚುವಲ್ ಯೋಗ
Published On - 7:22 pm, Sun, 20 June 21