ಹಾಸನ, ಮೇ 09: ರಾಜ್ಯ ರಾಜಕೀಯದಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರದ್ದು (Prajwal Revanna) ಎಂದು ಹೇಳಲಾಗುತ್ತಿರುವ ಅಶ್ಲೀಲ ವಿಡಿಯೋ ವೈರಲ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಬೆನ್ನೆಲ್ಲೇ ಪ್ರಜ್ವಲ್ ಮಾಜಿ ಕಾರು ಚಾಲಕ ಕಾರ್ತಿಕ್ (Kartik), ಪುಟ್ಟಿ ಆಲಿಯಾಸ್ ಪುಟ್ಟರಾಜ್, ನವೀನ್ ಗೌಡ ಹಾಗೂ ಚೇತನ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಹೀಗಾಗಿ ಇದೀಗ ಎಲ್ಲರಿಗೂ ಬಂಧನದ ಭೀತಿ ಶುರುವಾಗಿದೆ. ನಿನ್ನೆ ಹಾಸನದ ಮೂರನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಅರ್ಜಿ ವಜಾ ಮಾಡಲಾಗಿದೆ.
ಎಡಿಟ್ ಮಾಡಿ ಸಂಸದ ಪ್ರಜ್ವಲ್ ಅವರ ಅಶ್ಲೀಲ ವಿಡಿಯೋ, ಫೋಟೋ ಸೃಷ್ಟಿ ಮಾಡಿ ಪೆನ್ ಡ್ರೈ ವ್ ಮೂಲಕ ಹಂಚಿಕೆ ಆರೋಪ ಮಾಡಲಾಗಿತ್ತು. ಅತ್ತ ಆರೋಪ ಕೇಳಿಬರುತ್ತಿದ್ದಂತೆ ಇತ್ತ ಏಪ್ರಿಲ್ 23 ರಂದು ಹಾಸನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಕಾರ್ತಿಕ್, ಪುಟ್ಟರಾಜ್, ನವೀನ್ ಗೌಡ, ಶರತ್ ಆಲಿಯಾಸ್ ಕ್ವಾಲಿಟಿ ಬಾರ್ ಶರತ್ ವಿರುದ್ದ ಜೆಡಿಎಸ್ ದೂರು ನೀಡಿತ್ತು. ನವೀನ್ ಗೌಡ ಮತ್ತು ಇತರರು ಎಂದು ಸೆನ್ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.
ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನಲ್ಲಿ ಒಂದು ರಾತ್ರಿ ಕಳೆದ ರೇವಣ್ಣ: ಹೀಗಿದೆ ಐಷಾರಾಮಿ ರಾಜಕಾರಣಿಯ ಸೆರೆವಾಸ!
ನ್ಯಾಯಾಲಯಕ್ಕೆ ರಿಮೈಂಡರ್ ಅರ್ಜಿ ಮೂಲಕ ಕಾರ್ತಿಕ್, ಪುಟ್ಟರಾಜು ಹಾಗೂ ಚೇತನ್ ಎಂಬ ಹೆಸರು ಉಲ್ಲೇಖಿಸಿ ಮಾಹಿತಿ ರವಾನಿಸಲಾಗಿತ್ತು. ತಮ್ಮ ವಿರುದ್ದ ಕೇಸ್ ದಾಖಲಾಗುತ್ತಲ್ಲೇ ಆರೋಪಿಗಳು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಅರ್ಜಿ ವಜಾ ಬೆನ್ನಲ್ಲೇ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಪೆನ್ ಡ್ರೈವ್ ವೈರಲ್ ಆರೋಪ ಪ್ರಕರಣ ಇನ್ನೂ ಎಸ್ಐಟಿಗೆ ಹಸ್ತಾಂತರವಾಗಿಲ್ಲ. ಕೇಸ್ ಹಸ್ತಾಂತರ ಆಗದ ಹಿನ್ನೆಲೆಯಲ್ಲಿ ಹಾಸನ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನಲ್ಲಿ ಒಂದು ರಾತ್ರಿ ಕಳೆದ ರೇವಣ್ಣ: ಹೀಗಿದೆ ಐಷಾರಾಮಿ ರಾಜಕಾರಣಿಯ ಸೆರೆವಾಸ!
ಹೆಚ್ಚಿನ ವಿಚಾರಣೆಗೆ ಹಾಜರಾಗುವಂತೆ ಕಾರು ಚಾಲಕ ಕಾರ್ತಿಕ್ ಗೌಡಗೆ ಈಗಾಗಲೇ ಎಸ್ಐಟಿ ನೋಟಿಸ್ ನೀಡಿದೆ. ಕಾರ್ತಿಕ್ ಗೌಡ ಮಲೇಷ್ಯಾ ಹೋಗಿದ್ದಾನೆ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಆರೋಪಿಸಿದ್ದರು. ಬಳಿಕ ಪ್ರತ್ಯಕ್ಷವಾಗಿದ್ದ ಕಾರ್ತಿಕ್ ಗೌಡ ನಾನು ಎಲ್ಲಿಯೂ ಹೋಗಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.
ಪ್ರಜ್ವಲ್ ರೇವಣ್ಣ ಡ್ರೈವರ್ ಆಗಿದ್ದ ಕಾರ್ತಿಕ್ ಜತೆ ಕೈ ಅಭ್ಯರ್ಥಿ ಶ್ರೇಯಸ್ ಪಟೇಲ್ ಇರುವ ಫೋಟೋಗಳು ವೈರಲ್ ಆಗಿವೆ. ಈ ಬಗ್ಗೆ ಮಾತನಾಡಿದ್ದ ಶ್ರೇಯಸ್, ದೇವರಾಜೇಗೌಡ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಆದರೆ ಈಗ ಡಿಕೆ ಶಿವಕುಮಾರ್ಗೆ ಪೆನ್‌ಡ್ರೈವ್ ತಲುಪಿಸಿದ್ದ ಆರೋಪ ಹೊತ್ತಿರುವ ಪುಟ್ಟರಾಜು ಜೊತೆಗೂ ಕಾಣಿಸಿಕೊಂಡಿದ್ದಾರೆ. ಪುಟ್ಟರಾಜ್ ಮನೆಯಲ್ಲಿ ಊಟ ಮಾಡಿದ್ದಾರೆ ಎನ್ನಲಾದ ಫೋಟೋ ವೈರಲ್ ಆಗಿವೆ.
ವರದಿ: ದಶರಥ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.