ಸಾಮಾಜಿಕ ಜಾಲತಾಣಗಳಲ್ಲಿ ಕೊರೊನಾ ಸುಳ್ಳು ಸುದ್ದಿಗಳ ಹಾವಳಿ: ಧಾರವಾಡ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಆತಂಕ

ಒಂದು ತಿಂಗಳ ಅವಧಿಯಲ್ಲಿ ಈ ಗ್ರಾಮದಲ್ಲಿ ಮೃತಪಟ್ಟವರು 50 ಕ್ಕೂ ಹೆಚ್ಚು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದರಿಂದ, ಅದನ್ನು ನೋಡಿದ ಅನೇಕರು ಹೌಹಾರಿದ್ದಾರೆ. ಅಸಲಿಗೆ ಕೊರೊನಾದಿಂದ ಒಂದು ತಿಂಗಳ ಅವಧಿಯಲ್ಲಿ ಮೃತಪಟ್ಟವರು 8 ಜನರು ಎಂದು ಅಧಿಕೃತ ಅಂಕಿ-ಅಂಶದ ಪ್ರಕಾರ ಗ್ರಾಮ ಪಂಚಾಯತಿಯಲ್ಲಿ ನಮೂದಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಕೊರೊನಾ ಸುಳ್ಳು ಸುದ್ದಿಗಳ ಹಾವಳಿ: ಧಾರವಾಡ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಆತಂಕ
ಕೊರೊನಾ ಸುಳ್ಳು ಸುದ್ದಿಗಳ ಬಗ್ಗೆ ಜಾಗೃತಿ ಮೂಡಿಸುತ್ತಿರುವ ದೃಶ್ಯ
Follow us
preethi shettigar
|

Updated on: May 24, 2021 | 1:50 PM

ಧಾರವಾಡ: ರಾಜ್ಯದಲ್ಲಿ ಕೊರೊನಾ ಇದೀಗ ಹಳ್ಳಿಗಳಿಗೂ ದಾಳಿ ಮಾಡಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಜನರು ಸಾವಿಗೀಡಾಗುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿನ ಜನರಿಗೆ ಕೊರೊನಾ ಬಗ್ಗೆ ಜಾಗೃತಿ ಇಲ್ಲದೇ ಇರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಇನ್ನು ಇದೇ ವೇಳೆ ಕೆಲವರು ಕೊರೊನಾವನ್ನೇ ಬಂಡವಾಳ ಮಾಡಿಕೊಂಡಿದ್ದು, ಜನರಲ್ಲಿ ಭಯ ಹುಟ್ಟಿಸುವ ಕಾರ್ಯ ಮಾಡುತ್ತಿದ್ದಾರೆ. ಧಾರವಾಡದ ಅನೇಕ ಗ್ರಾಮಗಳ ಪರಿಸ್ಥಿತಿ ಸದ್ಯ ಇದೆ ಆಗಿದೆ. ಕೊರೊನಾದ ಬಗ್ಗೆ ದಿನಕ್ಕೊಂದು ಸುಳ್ಳು ಸುದ್ದಿಗಳು ಹುಟ್ಟುತ್ತಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಇದರಿಂದಾಗಿ ಜಿಲ್ಲೆಯ ಹಲವು ಗ್ರಾಮಗಳು ಸಂಕಷ್ಟ ಅನುಭವಿಸುವಂತಾಗಿದೆ.

ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ ನಿಜವಾಗಿಯೂ ಮೃತಪಟ್ಟವರು ಎಷ್ಟು? ಧಾರವಾಡ ತಾಲೂಕಿನ ನರೇಂದ್ರ ಗ್ರಾಮ ಸುಮಾರು 15 ಸಾವಿರ ಜನಸಂಖ್ಯೆ ಹೊಂದಿದೆ. ಇಲ್ಲಿಯೂ ಎಲ್ಲಾ ಕಡೆಯಂತೆ ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಉಳಿದ ಗ್ರಾಮಗಳಿಗಿಂತ ಇಲ್ಲಿ ಕೊಂಚ ಹೆಚ್ಚಿನ ಸೋಂಕಿತರು ಪತ್ತೆಯಾಗಿದ್ದಾರೆ. ಇಲ್ಲಿ ಜನಸಂಖ್ಯೆಯೂ ಹೆಚ್ಚಾಗಿರುವುದರಿಂದ ಇದು ಸಾಮಾನ್ಯ. ಆದರೆ ಕೆಲವು ವಿಕೃತ ಮನಸ್ಸಿನ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಕರಾಮತ್ತು ತೋರಿಸಲು ಶುರು ಮಾಡಿದ್ದಾರೆ. ಸೋಂಕಿನಿಂದ ಗ್ರಾಮದಲ್ಲಿ ಕೆಲವರು ಮೃತಪಟ್ಟಿದ್ದೂ ನಿಜ. ಆದರೆ ಈ ವಿಕೃತ ಮನಸ್ಸಿನ ಕೆಲವರು ಸತ್ತವರ ಸಂಖ್ಯೆಯನ್ನು ತಮಗೆ ತಿಳಿದಂತೆ ಪೋಸ್ಟ್ ಮಾಡಿ ದೊಡ್ಡ ಸಮಸ್ಯೆಗೆ ಕಾರಣರಾಗಿದ್ದಾರೆ.

ಒಂದು ತಿಂಗಳ ಅವಧಿಯಲ್ಲಿ ಈ ಗ್ರಾಮದಲ್ಲಿ ಮೃತಪಟ್ಟವರು 50 ಕ್ಕೂ ಹೆಚ್ಚು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದರಿಂದ, ಅದನ್ನು ನೋಡಿದ ಅನೇಕರು ಹೌಹಾರಿದ್ದಾರೆ. ಅಸಲಿಗೆ ಕೊರೊನಾದಿಂದ ಒಂದು ತಿಂಗಳ ಅವಧಿಯಲ್ಲಿ ಮೃತಪಟ್ಟವರು 8 ಜನರು ಎಂದು ಅಧಿಕೃತ ಅಂಕಿ-ಅಂಶದ ಪ್ರಕಾರ ಗ್ರಾಮ ಪಂಚಾಯತಿಯಲ್ಲಿ ನಮೂದಾಗಿದೆ.

ನಮ್ಮನ್ನು ಅಸ್ಪರ್ಶರಂತೆ ನೋಡುತ್ತಿದ್ದಾರೆ: ಗ್ರಾಮಸ್ಥರ ಅಳಲು ಈ ಗ್ರಾಮದ ಪಕ್ಕವೇ ಬೇಲೂರು ಕೈಗಾರಿಕಾ ಪ್ರದೇಶವಿದೆ. ಅಲ್ಲಿಗೆ ನಿತ್ಯವೂ ಈ ಗ್ರಾಮದಿಂದ ನೂರಾರು ಕಾರ್ಮಿಕರು ಕೆಲಸಕ್ಕೆ ಹೋಗುತ್ತಾರೆ. ಈ ಸುಳ್ಳು ಸುದ್ದಿ ನಂಬಿದ ಕಾರ್ಖಾನೆ ಮಾಲಿಕರು ಮತ್ತು ಉಳಿದ ಕಾರ್ಮಿಕರು, ನೀವು ಕೆಲಸಕ್ಕೆ ಬರಲೇಬೇಡಿ ಎಂದು ಮರಳಿ ಕಳಿಸುತ್ತಿದ್ದಾರೆ. ಇನ್ನು ಈ ಗ್ರಾಮ ಧಾರವಾಡದ ಪಕ್ಕವೇ ಇರುವುದರಿಂದ ನಿತ್ಯವೂ ನೂರಾರು ಕಟ್ಟಡ ಕಾರ್ಮಿಕರು ದುಡಿಯಲು ಹೋಗುತ್ತಾರೆ. ಆದರೆ ಸುಳ್ಳು ಸುದ್ದಿಯಿಂದ ಕಟ್ಟಡ ಮಾಲಿಕರು ಕೊರೊನಾ ಮುಗಿಯುವವರೆಗೂ ಕೆಲಸಕ್ಕೆ ಬಾರದಂತೆ ತಾಕೀತು ಮಾಡಿದ್ದಾರೆ.

ಇನ್ನು ಈ ಗ್ರಾಮದಿಂದ ಧಾರವಾಡಕ್ಕೆ ನಿತ್ಯವೂ ಹಾಲನ್ನು ತೆಗೆದುಕೊಂಡು ಕೆಲವರು ಮಾರಾಟಕ್ಕೆ ಬರುತ್ತಿದ್ದರು. ಆದರೆ ಅವರು ತರುವ ಹಾಲನ್ನು ಕೂಡ ಜನರು ತೆಗೆದುಕೊಳ್ಳುತ್ತಿಲ್ಲ. ಅಲ್ಲದೇ ಕೊರೊನಾ ಮುಗಿಯೋವರೆಗೆ ಹಾಲು ತರದಂತೆ ತಾಕೀತು ಮಾಡಿದ್ದಾರೆ. ಈ ಗ್ರಾಮದ ಕಾರ್ಮಿಕರನ್ನು ಯಾರು ಕೂಡ ಕೆಲಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ಗ್ರಾಮಸ್ಥರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ ಸಮಸ್ಯೆ ಇಲ್ಲಿಗಷ್ಟೇ ಸೀಮಿತವಾಗಿಲ್ಲ ಧಾರವಾಡದ ಬೇಲೂರು, ಮನಸೂರು, ಹುಬ್ಬಳ್ಳಿ ತಾಲೂಕಿನ ಮಿಶ್ರಿಕೋಟಿ ಗ್ರಾಮಗಳಿಗೂ ಈ ಸಮಸ್ಯೆ ಎದುರಾಗಿದೆ. ಅದರಲ್ಲೂ ಮಿಶ್ರಿಕೋಟಿಯಲ್ಲಿ ಒಂದು ತಿಂಗಳ ಅವಧಿಯಲ್ಲಿ 60 ಕ್ಕೂ ಹೆಚ್ಚು ಜನರು ಕೊವಿಡ್ ನಿಂದಾಗಿ ಮೃತಪಟ್ಟಿರೋದಾಗಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹಬ್ಬಿಸಲಾಗಿದೆ. ಇದರಿಂದಾಗಿ ಈ ಗ್ರಾಮದ ಜನರು ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಗ್ರಾಮದ ಕಾರ್ಮಿಕರು, ಹಾಲು ಮಾರಾಟಗಾರರು ಕೂಡ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಏನಾದರೂ ಮಾಡಿ ಈ ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕುವಂತೆ ಜಿಲ್ಲಾಡಳಿಕ್ಕೆ ಮನವಿ ಜನರು ಮಾಡಿಕೊಂಡಿದ್ದಾರೆ.

ಸಾವಿನ ಸಂಖ್ಯೆ ಹೆಚ್ಚಾಗಿದ್ದು ಸತ್ಯ; ಆದರೆ ಅದು ಕೊರೊನಾ ಅಲ್ಲ ಸಾವಿನ ಸಂಖ್ಯೆ ಉಳಿದ ತಿಂಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಇರುವುದು ಸತ್ಯ. ಹಾಗಂತ ಇಲ್ಲಿ ನಡೆದ ಸಾವಿಗೆ ಕಾರಣ ಕೊರೊನಾ ಅಲ್ಲ. ಬದಲಿಗೆ ಕೊರೊನಾ ಹಾವಳಿಯಿಂದ ಆಗಿರುವ ಅಡ್ಡ ಪರಿಣಾಮ. ಇದೀಗ ಎಲ್ಲ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರೇ ತುಂಬಿದ್ದಾರೆ. ಅಲ್ಲದೇ ಆಸ್ಪತ್ರೆಗಳಲ್ಲಿ ಉಳಿದ ರೋಗಗಳಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಹೀಗಾಗಿ ವೃದ್ಧರು, ವಿವಿಧ ರೋಗಗಳಿಂದ ಬಳಲುತ್ತಿರೋರು ಆಸ್ಪತ್ರೆಗಳಿಗೆ ಆರೋಗ್ಯ ತಪಾಸಣೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ರೋಗಗಳು ಉಲ್ಬಣಗೊಂಡು, ಜನರು ಸಾವಿಗೀಡಾಗುತ್ತಿದ್ದಾರೆ. ಹೀಗೆ ಮೃತಪಟ್ಟವರು ಕೂಡ ಕೊರೊನಾದಿಂದಲೇ ಮೃತಪಟ್ಟಿದ್ದು ಎಂಬ ವದಂತಿಗಳು ಕೇಳಿ ಬಂದಿದೆ.

ಜಿಲ್ಲಾಡಳಿತದ ಸರ್ವೆಯಲ್ಲಿ ಕಂಡು ಬಂತು ಸತ್ಯ ದಿನದಿಂದ ದಿನಕ್ಕೆ ಇಂಥ ಸುಳ್ಳು ಸುದ್ದಿಗಳು ಹಬ್ಬುತ್ತಿರುವುದರಿಂದ ಜಿಲ್ಲಾಡಳಿತವೂ ಹೈರಾಣಾಗಿ ಹೋಗಿದೆ. ಇದೇ ಕಾರಣಕ್ಕೆ ಧಾರವಾಡ ತಹಸೀಲ್ದಾರ್ ಡಾ. ಸಂತೋಷ ಬಿರಾದಾರ್ ತಮ್ಮ ಇಲಾಖೆಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರೊಂದಿಗೆ ನರೇಂದ್ರ ಮತ್ತು ಬೇಲೂರು ಗ್ರಾಮಗಳಲ್ಲಿ ಸರ್ವೆ ನಡೆಸಿದ್ದಾರೆ. ಈ ವೇಳೆ ಸಂಭವಿಸಿದ ಸಾವುಗಳಿಗೆಲ್ಲ ಕೊರೊನಾ ಕಾರಣವಲ್ಲ ಎನ್ನುವುದು ಖಚಿತವಾಗಿದೆ.

ಮೃತರಾದ ಎಲ್ಲರ ಕುಟುಂಬಸ್ಥರನ್ನು ಕೊವಿಡ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರೆಲ್ಲರಿಗೂ ನೆಗೆಟಿವ್ ಬಂದಿದೆ. ಹೀಗಾಗಿ ಅನೇಕರು ವಯೋಸಹಜ ಕಾಯಿಲೆ, ಇತರೆ ಕಾಯಿಲೆಗಳಿಂದ ಮೃತಪಟ್ಟಿರೋದು ಗಮನಕ್ಕೆ ಬಂದಿದೆ. ಈ ಬಗ್ಗೆ ಟಿವಿ9 ಡಿಜಿಟಲ್ ಜತೆ ಮಾತನಾಡಿದ ಧಾರವಾಡ ತಹಸೀಲ್ದಾರ್ ಡಾ. ಸಂತೋಷ ಬಿರಾದಾರ್, ಇಂಥ ಸುದ್ದಿ ಬಂದಿದ್ದರಿಂದ ಸರ್ವೆ ನಡೆಸಲಾಗಿದೆ. ಮತ್ತಷ್ಟು ಹಳ್ಳಿಗಳ ಬಗ್ಗೆಯೂ ಇಂಥದ್ದೇ ಸುದ್ದಿ ಹರಿದಾಡುತ್ತಿವೆ. ಅಲ್ಲಿಯೂ ಸರ್ವೆ ಮಾಡಿಸಲಾಗುತ್ತದೆ. ಅಲ್ಲದೇ ವಿನಾಕಾರಣ ಜನರು ಆತಂಕಗೊಳ್ಳುವಂತ ಹಾಗೂ ಸುಳ್ಳು ಸುದ್ದಿಗಳನ್ನು ಹರಿಬಿಡಬಾರದು.ಅಂತಹ ಘಟನೆಗಳು ಕಂಡು ಬಂದರೆ, ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ:

Kuri Prathap: ನಾನು ಆರಾಮಾಗಿದ್ದೇನೆ, ಸಾವಿನ ಬಗ್ಗೆ ಅದ್ಯಾಕೆ ಸುಳ್ಳು ಸುದ್ದಿ ಹರಡಿಸುತ್ತಾರೋ ಗೊತ್ತಿಲ್ಲ – ಕುರಿ ಪ್ರತಾಪ್

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ