ಬೆಂಗಳೂರು: ಮಂಗಳವಾರ ಇಂಧನ ಬೆಲೆ ಏರಿಕೆಯ ನಂತರ, ಫೆಬ್ರವರಿ 25 ರಂದು ಬುಧವಾರ ಇಂಧನ ಬೆಲೆ ಸ್ಥಿರವಾಗಿದೆ. 35 ಪೈಸೆ ಹೆಚ್ಚಳದ ನಂತರ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹ 90.93 ಹಾಗೂ ಪ್ರತಿ ಲೀಟರ್ ಡೀಸೆಲ್ ದರ ₹ 81.32 ರೂ. ಆಗಿದೆ. ಫೆಬ್ರವರಿ 23 ರಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ತಲಾ 35 ಪೈಸೆ ಹೆಚ್ಚಿಸಲಾಗಿದ್ದು, ಇಂದೂ ಇದೇ ದರ ಸ್ಥಿರವಾಗಿದೆ. ಹಾಗೂ ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ದರ ಪ್ರತಿ ಲೀಟರ್‌ಗೆ ₹93.98 ಹಾಗೂ ಡೀಸೆಲ್ ದರ ₹86.21ಕ್ಕೆ ಮಾರಾಟವಾಗುತ್ತಿದೆ.
ಮುಂಬೈಯಲ್ಲಿ ಪೆಟ್ರೋಲ್ ಬೆಲೆ ಬದಲಾಗದೆ ಪ್ರತಿ ಲೀಟರ್‌ಗೆ ₹97.34 ರೂ. ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ ₹88.44 ಕ್ಕೆ ಮಾರಾಟವಾಗುತ್ತಿದೆ. ಏತನ್ಮಧ್ಯೆ, ಚೆನ್ನೈನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ ₹92.90 ಮತ್ತು ₹86.31 ಇದೆ. ತೆರಿಗೆ (ವ್ಯಾಟ್) ಕಡಿತಗೊಳಿಸಿದ್ದರಿಂದ ಕೊಲ್ಕತ್ತಾ ಇಂಧನ ಬೆಲೆ ಇಳಿಕೆ ಕಂಡಿದ್ದು, ಫೆಬ್ರವರಿ 23 ಮತ್ತು 24 ರಂದು ಕೊಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ ₹91.12 ಇದೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಐತಿಹಾಸಿಕ ಗರಿಷ್ಠ ಮಟ್ಟವನ್ನು ತಲುಪಿವೆ ಎಂಬ ಮಾತು ಎಲ್ಲೆಡೆ ಹರಿದಾಡುತ್ತಿದ್ದಂತೆ, ಹಣಕಾಸು ನೀತಿ ಸಮಿತಿ (ಎಂಪಿಸಿ) ನಿಮಿಷಗಳಲ್ಲಿ ಶಕ್ತಿಕಾಂತ ದಾಸ್ ಗಮನಿಸಿದರು. ಈ ನಿಟ್ಟಿನಲ್ಲಿ, ಇಂಧನ ಬೆಲೆ ಏರಿಕೆ ಬಗ್ಗೆ ಪ್ರತಿಪಕ್ಷಗಳ ಕಳವಳಗಳ ನಂತರ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಕೂಡ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಪರೋಕ್ಷ ತೆರಿಗೆಯನ್ನು ಕಡಿತಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬ್ರೆಂಟ್ ದರ ಬ್ಯಾರೆಲ್ಗೆ ಶೇ. 0.96ಕ್ಕೆ ಏರಿಕೆಯಾಗಿದ್ದು ಇದೀಗ 65.10 ಡಾಲರ್ಗೆ ತಲುಪಿದೆ. ಇದರ ಪರಿಣಾಮ ದೇಶೀಯ ಮಾರುಕಟ್ಟೆಯಲ್ಲಿ ಇಂಧನ ದರ ಏರುತ್ತಲೇ ಇವೆ. ಕಳೆದ ಜನವರಿ, ಫೆಬ್ರವರಿ ತಿಂಗಳಲ್ಲಿ ಪೆಟ್ರೊಲ್, ಡೀಸೆಲ್ ದರ 7 ರೂ ಏರಿಕೆಯಾಗಿದೆ. ಹಾಗೆಯೇ ಅಬಕಾರಿ ಸುಂಕ ಮತ್ತು ಸ್ಥಳೀಯ ತೆರಿಗೆಗಳನ್ನು ಕಡಿತ ಮಾಡಿ ಇಂಧನ ದರ ಇಳಿಸಿ ಎಂಬ ಮಾತುಗಳು ಕೇಳಿಬರುತ್ತಿದೆ.
ಇದನ್ನೂ ಓದಿ: Petrol Diesel Price: ಪೆಟ್ರೋಲ್ ದರ 35 ಪೈಸೆ ಹೆಚ್ಚಳ; ಎಷ್ಟಿದೆ ದರ?
ಇದನ್ನೂ ಓದಿ: Petrol rate: ಪೆಟ್ರೋಲ್ ಮೇಲೆ ಕೇಂದ್ರ, ರಾಜ್ಯಗಳಿಗೆ ಕಟ್ಟುವ ತೆರಿಗೆ ಲೆಕ್ಕ ಇಲ್ಲಿದೆ
Published On - 10:31 am, Thu, 25 February 21